ಲೋಕಸಭಾ ಚುನಾವಣೆಯಲ್ಲಿ ವಿದ್ಯುತ್​ ಮತಯಂತ್ರಗಳಿಗೆ ಮೀಸಲಿಟ್ಟ ಹಣವೆಷ್ಟು ಗೊತ್ತಾ?

ಈ ವರ್ಷದ ಲೋಕಸಭಾ ಚುನಾವಣೆಗೆ ಒಟ್ಟು 9,000 ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಶೇ. 60ರಷ್ಟು ಹಣ ಇವಿಎಂಗಳು ಮತ್ತು ವಿವಿಪ್ಯಾಟ್​ಗಳಿಗೆ ಖರ್ಚಾಗಿದೆ.

news18
Updated:July 7, 2019, 4:02 PM IST
ಲೋಕಸಭಾ ಚುನಾವಣೆಯಲ್ಲಿ ವಿದ್ಯುತ್​ ಮತಯಂತ್ರಗಳಿಗೆ ಮೀಸಲಿಟ್ಟ ಹಣವೆಷ್ಟು ಗೊತ್ತಾ?
ಮತ ಯಂತ್ರದ ಸಾಂದರ್ಭಿಕ ಚಿತ್ರ
  • News18
  • Last Updated: July 7, 2019, 4:02 PM IST
  • Share this:
ಬೆಂಗಳೂರು (ಜು.7): ಲೋಕಸಭಾ ಚುನಾವಣೆ ಮುಗಿದು 3 ತಿಂಗಳಾಗಿದೆ. ಚುನಾವಣೆಗೂ ಮೊದಲಿನಿಂದಲೂ ಬ್ಯಾಲೆಟ್​ ಪೇಪರ್ ಬದಲಾಗಿ ವಿದ್ಯುತ್​ಚಾಲಿತ ಮತಯಂತ್ರಗಳನ್ನು ಬಳಸಿದ್ದಕ್ಕೆ ಕೆಲವು ರಾಜಕೀಯ ಪಕ್ಷಗಳ ನಾಯಕರು ಅಸಮಾಧಾನ ಹೊರಹಾಕಿದ್ದರು. ಚುನಾವಣೆ ನಡೆಯುವಾಗಲೂ ಈ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಫಲಿತಾಂಶ ಪ್ರಕಟವಾಗಿ ಬಿಜೆಪಿ ದೇಶದೆಲ್ಲೆಡೆ ಭರ್ಜರಿ ಬಹುಮತ ಪಡೆದ ನಂತರವೂ ವಿರೋಧ ಪಕ್ಷಗಳು ಇವಿಎಂಗಳಲ್ಲಿ ಸೇರಲ್ಪಟ್ಟಿದ್ದ ಮತಗಳ ಅಸಲಿತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಚರ್ಚೆಗೆ ಕಾರಣವಾಗಿದ್ದ ಇವಿಎಂಗಳಿಗೆ ಖರ್ಚಾಗಿದ್ದ ಒಟ್ಟು ಮೊತ್ತ ಎಷ್ಟು ಗೊತ್ತಾ?

ಈ ವರ್ಷದ ಲೋಕಸಭಾ ಚುನಾವಣೆಗೆ ಒಟ್ಟು 9,000 ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಶೇ. 60ರಷ್ಟು ಹಣ ಇವಿಎಂಗಳು ಮತ್ತು ವಿವಿಪ್ಯಾಟ್​ಗಳಿಗೆ ಖರ್ಚಾಗಿದೆ. ಸುಮಾರು 5,400 ಕೋಟಿ ರೂ.ಗಳನ್ನು ಇವಿಎಂಗಳಿಗೆ ಮೀಸಲಿಡಲಾಗಿದೆ. ಲೋಕಸಭಾ ಚುನಾವಣೆಯ ನಿರ್ವಹಣೆಗೆ ನೇರವಾಗಿ ಖರ್ಚಾದ ಮೊತ್ತ 2,019 ಕೋಟಿ ರೂ. ಈ ಚುನಾವಣೆಯಲ್ಲಿ ಅತಿಹೆಚ್ಚು ಖರ್ಚಾಗಿರುವುದು ವಿದ್ಯುತ್​ಚಾಲಿತ ಮತಯಂತ್ರಗಳಿಗೇ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ. ಉಳಿದಂತೆ ಇತರೆ ಖರ್ಚುಗಳಿಗೆ 1,317 ಕೋಟಿ ರೂ. ವಿನಿಯೋಗಿಸಲಾಗಿದೆ.

ಗುಜರಾತ್ ರಾಜ್ಯಸಭಾ ಉಪಚುನಾವಣೆ: ಎರಡೂ ಸ್ಥಾನ ಬಿಜೆಪಿ ಪಾಲು; ಇಬ್ಬರು ಕಾಂಗ್ರೆಸ್ಸಿಗರ ರಾಜೀನಾಮೆ

ಈ ಬಾರಿಯ ಬಜೆಟ್​ನಲ್ಲಿ ಚುನಾವಣೆ ಸಂಬಂಧಿತ ಖರ್ಚುಗಳಿಗೆ ಕಾನೂನು ಸಚಿವಾಲಯ 1,464 ಕೋಟಿ ರೂ. ನಿಗದಿಗೊಳಿಸಿತ್ತು. 2019ರ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ನಡೆದಿತ್ತು. ಏಪ್ರಿಲ್ 11ರಿಂದ ಮೇ 19ರವರೆಗೆ 543 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಮೇ 23ರಂದು ಫಲಿತಾಂಶ ಪ್ರಕಟವಾಗಿ ಬಿಜೆಪಿ 303 ಸ್ಥಾನಗಳೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

First published:July 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading