• Home
  • »
  • News
  • »
  • national-international
  • »
  • Marijuana: ಆಗ ಮದ್ಯ, ಈಗ 60 ಲಕ್ಷ ಮೌಲ್ಯದ 500 ಕೆಜಿ ಗಾಂಜಾ ತಿಂದ ಇಲಿಗಳು!

Marijuana: ಆಗ ಮದ್ಯ, ಈಗ 60 ಲಕ್ಷ ಮೌಲ್ಯದ 500 ಕೆಜಿ ಗಾಂಜಾ ತಿಂದ ಇಲಿಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಮಥುರಾ ಪೊಲೀಸರಿಗೆ ಕೇಳಿತ್ತು.

  • News18 Kannada
  • Last Updated :
  • Mathura, India
  • Share this:

500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಪೊಲೀಸರೇ ಅಧಿಕೃತ ಮಾಹಿತಿ ನೀಡಿದ ಘಟನೆಯೊಂದು ಭಾರೀ ಸಂಚಲನ ಸೃಷ್ಟಿಸುತ್ತಿದೆ. ಹೆದ್ದಾರಿಗಳಲ್ಲಿ ಜಫ್ತಿ ಮಾಡಲಾದ ಗಾಂಜಾವನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿತ್ತು. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಮಥುರಾ ಪೊಲೀಸರಿಗೆ (Mathura Police) ಕೇಳಿತ್ತು. ಆದರೆ ಮಥುರಾ ಪೊಲೀಸರು ನ್ಯಾಯಾಲಯಕ್ಕೆ 500 ಕೆಜಿಗೂ ಹೆಚ್ಚು ಗಾಂಜಾವನ್ನು (Marijuana) ಇಲಿಗಳು ಸೇವಿಸಿವೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ನ್ಯಾಯಾಲಯ ನಿಖರವಾಗಿ 60 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಇಲಿಗಳು (Rats Consumed Marijuana) ಸೇವಿಸಿವೆ ಎಂಬುದಕ್ಕೆ ಪುರಾವೆಯನ್ನು ತಲುಪಿಸುವಂತೆ ಆದೇಶಿಸಿದೆ.


ಪೊಲೀಸ್ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಜಫ್ತಿ ಮಾಡಲಾದ ವಸ್ತುಗಳನ್ನು ಹರಾಜು ಅಥವಾ ವಿಲೇವಾರಿ ಮಾಡಲು ನ್ಯಾಯಾಲಯವು ಐದು ಅಂಶಗಳ ನಿರ್ದೇಶನಗಳನ್ನು ನೀಡಿದೆ. ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಕಾಲಮಿತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪಿ ಸಿಂಗ್ ಹೇಳಿದ್ದಾರೆ.


ಗೋದಾಮುಗಳಲ್ಲಿರುವ ವಸ್ತು ರಕ್ಷಣೆ ಸಾಧ್ಯವಿಲ್ಲ ಎಂದ ಪೊಲಿಸರು
ಗೋದಾಮುಗಳಲ್ಲಿ ಇರಿಸಿದ ವಸ್ತುಗಳನ್ನು ರಕ್ಷಿಸಲು ಪೊಲೀಸರು ಅಸಾಧ್ಯವೆಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಂತರ ದಾವೆಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು ನವೆಂಬರ್ 26 ಕ್ಕೆ ನಿಗದಿಪಡಿಸಲಾಗಿದೆ. 


ಪ್ರಕರಣದ ಹಿನ್ನೆಲೆ ಹೀಗಿದೆ
ಮೇ 2020 ರಲ್ಲಿ, ಟ್ರಕ್‌ನಲ್ಲಿ ಕಳೆ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ಮಥುರಾದಲ್ಲಿ ಬಂಧಿಸಲಾಗಿತ್ತು. ಶೆರ್ಗಢ್ ಪ್ರದೇಶದ ಜಟ್ವಾರಿ ಗ್ರಾಮದ ಬಳಿ ಟ್ರಕ್ ಅನ್ನು ತಡೆಹಿಡಿಯಲಾಯಿತು. ರಾಗಿ ಚೀಲಗಳಲ್ಲಿ ಅಡಗಿಸಿಟ್ಟಿದ್ದ 386 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು. ವಾಹನ, ಮೂವರು ಆರೋಪಿಗಳನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.


ಈ ಹಿಂದೆಯೂ ಇಂತಹುದೇ ಘಟನೆ ನಡೆದಿತ್ತು!
2021 ರಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ  ವಶಪಡಿಸಿಕೊಂಡ 1,400 ಕಾರ್ಟನ್‌ಗಳ ಮದ್ಯವನ್ನು ಇಲಿಗಳು ಸೇವಿಸಿವೆ ಎಂದು ಇಟಾ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.


ನಾಲ್ವರು ಯುವತಿಯರಿಂದ ಕಾರ್ಮಿಕನ ಕಿಡ್ನಾಪ್, ರೇಪ್ ಮಾಡಿ ಬಿಸಾಕಿದ ಶ್ರೀಮಂತ ತರುಣಿಯರು
20 ವರ್ಷ ಆಸುಪಾಸಿನ ನಾಲ್ವರು ಯುವತಿಯರು ಸೇರಿ ಓರ್ವ ಕಾರ್ಮಿಕನನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿದ್ದಾರೆ ಎಂದು ಕಾರ್ಮಿಕನೋರ್ವ ಆರೋಪಿಸಿದ್ದಾರೆ. ಕಾರ್ಮಿಕನ ಕಣ್ಣುಗಳಲ್ಲಿ ಕೆಮಿಕಲ್ ಒಂದನ್ನು ಹಾಕಿ ಡ್ರಗ್ ಸೇವಿಸುವಂತೆ ಒತ್ತಾಯಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಪಹರಣ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ನಂತರ ಆತನನ್ನು ಬೀದಿಬದಿಯಲ್ಲಿ ಹೊರದಬ್ಬಿದ್ದಾರೆ ಎಂದು ಕಾರ್ಮಿಕ ಆರೋಪಿಸಿದ್ದಾರೆ. ಈ ಆಘಾತಕಾರಿ ಘಟನೆ ಪಂಜಾಬ್​ನಲ್ಲಿ ಜಲಂಧರ್​ನಲ್ಲಿ ನಡೆದಿದ್ದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ: Bengaluru: ಬೆಂಗಳೂರಿನಿಂದ ಈ ಊರಿಗೆ ಪ್ರಯಾಣಿಸುವ ಮುನ್ನ ಗಮನಿಸಿ, ಟ್ರಾಫಿಕ್ ಪೊಲೀಸರ ಮಹತ್ವದ ಸೂಚನೆ


ನಾನು ಕಾರ್ಖಾನೆಯಿಂದ ಕೆಲಸ ಮುಗಿಸಿ ಮನೆಗೆ ಮರಳುವಾಗ ಒಂದು ಬಿಳಿ ಕಾರು ನನ್ನ ಪಕ್ಕವೇ ನಿಂತಿತು. ಆ ಕಾರನ್ನು ಚಲಾಯಿಸುತ್ತಿದ್ದ ಯುವತಿ ಇಳಿದು ವಿಳಾವೊಂದನ್ನು ಕೇಳಿದಳು. ನಾನು ವಿಳಾಸ ಹೇಳುತ್ತಿರುವಾಗಲೇ ಇತರ ಮೂವರು ಯುವತಿಯರು ನನ್ನ ಕಣ್ಣಿಗೆ ಕೆಮಿಕಲ್ ಒಂದನ್ನು ಸಿಂಪಡಿಸಿ ಬಲಾತ್ಕಾರದಿಂದ ನನ್ನನ್ನು ಕಾರಿನೊಳಗೆ ಎಳೆದೊಯ್ದರು ಎಂದು ಕಾರ್ಮಿಕ ವಿವರಿಸಿದ್ದಾರೆ.


ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿದ ಯುವತಿಯರು
ಅಲ್ಲದೇ ಕಾರಿನಲ್ಲಿ ಕೂರಿಸಿಕೊಂಡು ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿ ಅಪರಿಚಿತ ಸ್ಥಳವೊಂದಕ್ಕೆ ನನ್ನನ್ನು ಕರೆದೊಯ್ದು ಅಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಕಾರ್ಮಿಕ ಆರೋಪಿಸಿದ್ದಾರೆ.


ಇದನ್ನೂ ಓದಿ: Uttar Pradesh: ನೋಯ್ಡಾದ ಜಿಲ್ಲಾ ಕಾರಾಗೃಹದಲ್ಲಿ ಏಡ್ಸ್​ ಅಬ್ಬರ, 26 ಕೈದಿಗಳಿಗೆ HIV ಸೋಂಕು!


ಕಂಠಪೂರ್ತಿ ಕುಡಿದಿದ್ದ ಯುವತಿಯರು
ಈ ನಾಲ್ಕೂ ಯುವತಿಯರು ಕಂಠಪೂರ್ತಿ ಕುಡಿದಿದ್ದರು. ಅಲ್ಲದೇ ಮಾದಕದ್ರವ್ಯದ ನಶೆಯಲ್ಲಿದ್ದರು. ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮಧ್ಯರಾತ್ರಿ ಮೂರು ಗಂಟೆಗೆ ಅಪರಿಚಿತ ಸ್ಥಳದಲ್ಲಿ ಕೈ ಮತ್ತು ಕಣ್ಣುಗಳನ್ನು ಕಟ್ಟಿದ ಸ್ಥಿತಿಯಲ್ಲೇ ಎಸೆದು ಹೋದರು ಎಂದು ಆರೋಪಿಸಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: