Delta Plus: ಕಳೆದೊಂದು ವಾರದಲ್ಲಿ ಬ್ರಿಟನ್​ನಲ್ಲಿ 50 ಸಾವಿರ ಡೆಲ್ಟಾ ಪ್ರಕರಣ ವರದಿ

ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದೆ. ಅತಿ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಈ ತಳಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೋನಾ ವೈರಾಣು ತಳಿ ಎನಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ ಎಚ್ಚರಿಕೆ ನೀಡಿದೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಲಂಡನ್: ಬ್ರಿಟನ್​ ನಲ್ಲಿ ಇತ್ತೀಚಿನ ವಾರದಲ್ಲಿ ಕೊರೋನಾ ವೈರಸ್​ನ ಡೆಲ್ಟಾ ತಳಿಯ 50824 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಅತಿ ವೇಗವಾಗಿ ಹರಡುವ ಡೆಲ್ಟಾ ತಳಿಯು ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಘೋಷಣೆ ಮಾಡಿದೆ.

  50824 ಸೋಂಕು ಪ್ರಕರಣಗಳೂ ಸೇರಿದಂತೆ ಡೆಲ್ಟಾ ತಳಿಯ ಒಟ್ಟು 161981 ಪ್ರಕರಣಗಳು ಇಂಗ್ಲೆಂಡ್​ನಲ್ಲಿ ದೃಢಪಟ್ಟಿವೆ. ಕಳೆದ ವಾರಕ್ಕೆ ಹೋಲಿಸಿಕೊಂಡರೆ ಈ ವಾರ ಅದರ ಪ್ರಮಾಣ ಶೇ. 46 ಹೆಚ್ಚಾಗಿದೆ ಎಂದು ಪಿಎಚ್​ಇ ಹೇಳಿದೆ. ಕೋವಿಡ್- 19ರ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಮತ್ತೊಂದು ಬಾರಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗಲು ಇದು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

  ಇದನ್ನು ಓದಿ: ಮರಾಠ ಮೀಸಲಾತಿ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

  ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದೆ. ಅತಿ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಈ ತಳಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೋನಾ ವೈರಾಣು ತಳಿ ಎನಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ ಎಚ್ಚರಿಕೆ ನೀಡಿದೆ. ಸಾರ್ಸ್ ಕೋವ್ – 2 (ಕೊರೋನಾ ವೈರಸ್) ನಿಂದ ರೂಪಾಂತರಗೊಂಡು ಸೃಷ್ಟಿಯಾಗಿರುವ ಡೆಲ್ಟಾ (ಬಿ 16172) ಮೊದಲಿಗೆ ಪತ್ತೆಯಾಗಿದ್ದು ಭಾರತದಲ್ಲಿ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: