Suicide Cases: 2021ರಲ್ಲಿ ಕೆಲಸ ಸಿಗಲಿಲ್ಲ ಅಂತ ವಾರಕ್ಕೆ 50 ಆತ್ಮಹತ್ಯೆಗಳು: NCRB

ಭಾರತದಲ್ಲಿ ವಾರದಲ್ಲಿ ಸರಿಸುಮಾರು 50 ಜನರು ವೃತ್ತಿ ಸಮಸ್ಯೆ ಹಾಗೂ ಕಚೇರಿಯಲ್ಲಿನ ವೃತ್ತಿಪರ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 2020 ರ 1,837 ರ ಸಾವು ನೋವುಗಳಿಗೆ ಹೋಲಿಸಿದರೆ ಮರಣ ಪ್ರಮಾಣವು ಈ ಬಾರಿ 2,593 ಆಗಿದ್ದು 41% ಏರಿಕೆಯನ್ನು ಕಂಡಿದೆ ಎಂದು ಗುರುತಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಒಂದು ವರ್ಷದಲ್ಲಿನ ಅಸ್ಥಿರ ಆರ್ಥಿಕತೆ ಹಾಗೂ ಹಾಗೂ ಅನಿರ್ದಿಷ್ಟ ಉದ್ಯೋಗ (Employment) ಮಾರುಕಟ್ಟೆಯಿಂದಾಗಿ ಭಾರತದಲ್ಲಿ ವಾರದಲ್ಲಿ ಸರಿಸುಮಾರು 50 ಜನರು ವೃತ್ತಿ ಸಮಸ್ಯೆ ಹಾಗೂ ಕಚೇರಿಯಲ್ಲಿನ (Office) ವೃತ್ತಿಪರ ಸಮಸ್ಯೆಗಳಿಂದಾಗಿ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 2020 ರ 1,837 ರ ಸಾವು ನೋವುಗಳಿಗೆ ಹೋಲಿಸಿದರೆ ಮರಣ ಪ್ರಮಾಣವು (Death Rate) ಈ ಬಾರಿ 2,593 ಆಗಿದ್ದು 41% ಏರಿಕೆಯನ್ನು ಕಂಡಿದೆ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (NCRB) 1999 ರಲ್ಲಿ ವೃತ್ತಿ ಸಮಸ್ಯೆಗಳು ಎಂಬ ಪ್ರತ್ಯೇಕ ವಿಭಾಗದಲ್ಲಿ ಮರಣ ಪ್ರಮಾಣ ದಾಖಲಿಸಲು ಪ್ರಾರಂಭಿಸಿತು. ಅಂಕಿ ಅಂಶ ಉಲ್ಲೇಖಿಸಿರುವಂತೆ 774 ಇಂತಹ ಸಾವುಗಳು (Deaths) ಮೊದಲ ವರ್ಷದಲ್ಲಿ ಸಂಭವಿಸಿವೆ ಎಂದಾಗಿದೆ.

ಆತ್ಮಹತ್ಯೆಗೆ ಪ್ರಮುಖ ಕಾರಣ ಉದ್ಯೋಗ ಸಮಸ್ಯೆಗಳು
ಇಂತಹ ಸಾವುಗಳ ಸಂಖ್ಯೆಯಲ್ಲಿ ಏರಿಳಿತಗಳು ನಡೆಯುತ್ತಿದ್ದರೂ 2021 ರವರೆಗೆ 2,000 ದ ಗಡಿ ದಾಟಿರಲಿಲ್ಲ. 1999 ಹಾಗೂ 2021 ರ ವಿಶ್ಲೇಷಣೆಗಳು ಹೇಳಿರುವಂತೆ ಇದೇ ಕಾರಣಕ್ಕೆ ಕಳೆದ ವರ್ಷವು ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆ ಪ್ರಮಾಣಗಳನ್ನು ದಾಖಲಿಸಿದೆ ಎಂದಾಗಿದೆ.

ಕರ್ನಾಟಕದಲ್ಲಿ 480 ಆತ್ಮಹತ್ಯೆ ಪ್ರಕರಣಗಳು
ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವಂತೆ ಡೆತ್ ನೋಟ್‌ಗಳನ್ನು ಅನುಸರಿಸಿ ಪ್ರಕರಣಗಳ ವರ್ಗೀಕರಣ ನಡೆಯುತ್ತದೆ. ಕೆಲವು ಪ್ರಕರಣಗಳಲ್ಲಿ ತನಿಖೆ ಸಮಯದಲ್ಲಿ ಕಾರಣವನ್ನು ಕಂಡುಹಿಡಿಯಲಾಗುತ್ತದೆ.

ಇದನ್ನೇ ರಾಜ್ಯ/ನಗರ ಬ್ಯುರೋಗಳ ದಾಖಲೆಗಳಲ್ಲಿ ನಮೂದಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 480 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ದೇಶದ ಪ್ರಮುಖ ನಗರಗಳ ಅಂಕಿ ಅಂಶ
2021 ರ ರಾಜ್ಯವಾರು ವಿಶ್ಲೇಷಣೆಯು ತೋರಿಸಿರುವಂತೆ ಐದು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳು ನಾಡು, ಗುಜರಾತ್ ಹಾಗೂ ಅಸ್ಸಾಂ ಇಂತಹುದ್ದೇ ಆತ್ಮಹತ್ಯೆಯ ಮೂರನೇ ಎರಡು ಭಾಗಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಹೊಂದಿದ್ದು (1766) ಮಹಾರಾಷ್ಟ್ರದಲ್ಲಿ 677 ಪ್ರಕರಣಗಳು ದಾಖಲಾಗಿದ್ದರೆ ಕರ್ನಾಟಕದಲ್ಲಿ 480 ಸಾವುಗಳು ದಾಖಲಾಗಿವೆ.

ಇದನ್ನೂ ಓದಿ:  Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

ದೇಶದ ಉಳಿದ ಭಾಗಗಳಲ್ಲಿ ಒಟ್ಟು 827 ಪ್ರಕರಣಗಳು ದಾಖಲಾಗಿವೆ. ವರ್ಷವಾರು ಏರಿಳಿತಗಳನ್ನು ನೋಡಿದಾಗ ಇದೇ ಕಾರಣಕ್ಕೆ ದಾಖಲಾಗಿರುವ ಮರಣವು 2000ನೇ ವರ್ಷದಲ್ಲಿ ಕಡಿಮೆಯಾಗಿದ್ದರೆ, 2021 ರಲ್ಲಿ ಅತ್ಯಧಿಕವಾಗಿವೆ.

ಸಮಾಜದಲ್ಲಿ ಗೌರವ ಕಳೆದುಕೊಳ್ಳುವುದು ಸಾವಿಗೆ ಮುಖ್ಯ ಕಾರಣ
ಹಿರಿಯ ಅಧಿಕಾರಿ ಹೇಳಿರುವಂತೆ ಇಂತಹ ಸಾವುಗಳು ಬರೇ ಒಂದು ಕಾರಣದಿಂದ ಸಂಭವಿಸಿರುವಂತದ್ದಲ್ಲ. ಮಾನಸಿಕ ತಜ್ಞರು ಕೂಡ ಇದೇ ಅಭಿಪ್ರಾಯವನ್ನು ಹೇಳಿದ್ದು, ಉದ್ಯೋಗದಲ್ಲಿದ್ದವರು ಒಳ್ಳೆಯ ಸಂಪಾದನೆಯನ್ನು ಹೊಂದಿದ್ದರು, ಇನ್ನು ಅದಕ್ಕೆ ತಕ್ಕಂತೆ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದರು ಹಾಗೂ ಸಮಾಜದಲ್ಲಿ ಉನ್ನತ ಸ್ಥಿತಿಯಲ್ಲಿದ್ದರು.

ಆದಾಗ್ಯೂ, ಉದ್ಯೋಗ ಕಳೆದುಕೊಂಡ ಖಿನ್ನತೆ, ಆತಂಕಕ್ಕೊಳಗಾಗಿ ಇವರುಗಳು ಆತ್ಮಹತ್ಯೆಯತಂತಹ ತೀಕ್ಷ್ಣ ನಿರ್ಧಾರವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಚಿಕಿತ್ಸೆ ಅಗತ್ಯ
2,593 ಮರಣ ಪ್ರಕರಣಗಳಲ್ಲಿ 20% ಅಥವಾ 594 ಸಾವು ದೇಶದ ಪ್ರಮುಖ ನಗರಗಳಿಂದ ವರದಿಯಾಗಿದೆ. ನಗರವಾರು ಅಂಕಿ ಅಂಶಗಳನ್ನು ತೆಗೆದುಕೊಂಡಾಗ ಈ ಪಟ್ಟಿಯಲ್ಲಿ ಉಚ್ಛ ಸ್ಥಾಯಿಯಲ್ಲಿರುವುದು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಾಗಿವೆ. ಬೆಂಗಳೂರು (74) ಪೂಣೆ (79) ಯಂತಹ ಪ್ರಮುಖ ನಗರಗಳಲ್ಲಿ ಅಧಿಕ ಸಾವುಗಳು ದಾಖಲಾಗಿವೆ. ಮೂರನೇ ಸ್ಥಾನದಲ್ಲಿ ಗುಜರಾತ್, ಅಹಮದಾಬಾದ್, ಕೇರಳ ಹಾಗೂ ಮುಂಬೈಯಾಗಿದೆ.

ಇದನ್ನೂ ಓದಿ: Digital Rape: ಡಿಜಿಟಲ್‌ ರೇಪ್ ಎಂದರೇನು? ಭಾರತದಲ್ಲಾದ ಅತ್ಯಾಚಾರ ಪ್ರಕರಣಗಳ ಬಗ್ಗೆ ತಿಳಿಯಿರಿ

ಸಾಮಾಜಿಕ ಕಳಂಕವಲ್ಲದೆ ಖಿನ್ನತೆ ಆತಂಕಕೊಳಗಾದಾಗ ಚಿಕಿತ್ಸೆಗಳಿಗೆ ಒಳಪಡದೇ ಇರುವುದೂ ಕೂಡ ಇಂತಹ ಮರಣ ಪ್ರಮಾಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಮಾನಸಿಕ ತಜ್ಞರು ತಿಳಿಸಿದ್ದಾರೆ. ವೃತ್ತಿ ಸಮಸ್ಯೆ ಎಂಬುದು ಬರಿಯ ಉದ್ಯೋಗಕ್ಕೆ ಸಂಬಂಧಿಸಿರುವ ವಿಚಾರ ಮಾತ್ರವಲ್ಲ. ಮಕ್ಕಳ ಶಿಕ್ಷಣ, ಮನೆಯ ಹಾಗೂ ವಾಹನದ ಖರ್ಚುವೆಚ್ಚಗಳು ಇಎಮ್‌ಐಗಳು, ಪೋಷಕರ ಆರೋಗ್ಯ ಕಾಳಜಿಗೂ ಅನ್ವಯವಾಗುತ್ತದೆ.

ಹೀಗಾಗಿ ವೃತ್ತಿಯಲ್ಲಿ ಅನಿಶ್ಚತತೆ ಹಾಗೂ ಕೆಳಸ್ತರಕ್ಕೆ ಕುಸಿಯುವುದು ಸುಲಭವಾಗಿ ಖಿನ್ನತೆಗೆ ಕಾರಣವಾಗುತ್ತದೆ ಎಂಬುದು ಮನೋಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.
Published by:Ashwini Prabhu
First published: