ಮನೆ ಖರೀದಿಸುವವರಿಗೆ ಶುಭ ಸುದ್ದಿ: ಮುಂದಿನ ತಿಂಗಳು ಮೋದಿ ಸರ್ಕಾರ ನೀಡಲಿದೆ ಸಿಹಿ ಸುದ್ದಿ

ಸ್ವಂತ ಮನೆಯೊಂದನ್ನು ಖರೀದಿಸಬೇಕು ಎಂದು ಕನಸು ಕಾಣುವ ಬಡವರಿಗೊಂದು ಸೂರು ಒದಗಿಸಲು ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ.

zahir | news18
Updated:January 9, 2019, 12:39 PM IST
ಮನೆ ಖರೀದಿಸುವವರಿಗೆ ಶುಭ ಸುದ್ದಿ: ಮುಂದಿನ ತಿಂಗಳು ಮೋದಿ ಸರ್ಕಾರ ನೀಡಲಿದೆ ಸಿಹಿ ಸುದ್ದಿ
ಸಾಂದರ್ಭಿಕ ಚಿತ್ರ
zahir | news18
Updated: January 9, 2019, 12:39 PM IST
ಅಲೋಕ್ ಪ್ರಿಯದರ್ಶಿ

ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಎಲ್ಲ ವರ್ಗದವರ ಮತಗಳನ್ನು ಸೆಳೆಯಲು ಯೋಜನೆ ಹಾಕಿಕೊಂಡಿದೆ.

ಅದರಂತೆ ಈ ಬಾರಿಯ ಬಜೆಟ್​ನಲ್ಲಿ ಪ್ರಧಾನಿ ಮಂತ್ರಿ ಆವಾಸ್​ ಯೋಜನೆ( ವಸತಿ ಯೋಜನೆ)ಯ ಬಜೆಟ್​ ಅನ್ನು ಶೇ.50 ರಷ್ಟು ಹೆಚ್ಚಿಸಲಾಗುತ್ತದೆ ಎಂದು ಮಾಹಿತಿಗಳು ಹೊರಬಿದ್ದಿವೆ. ಮಧ್ಯಮ ವರ್ಗಕ್ಕೆ ಈ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ವಸತಿ ಒದಗಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೇ ಪರಿಚಯಿಸಿದ್ದ ಈ ಯೋಜನೆಯ ಲಾಭವನ್ನು ಎಲ್ಲ ವರ್ಗಗಳಿಗೆ ನೀಡಲಾಗಿರಲಿಲ್ಲ. ಆದರೆ ಈ ಬಾರಿ ಬಜೆಟ್​ನಲ್ಲಿ ಯೋಜನೆಯ ಮೊತ್ತವನ್ನು ಹೆಚ್ಚಿಸುವ ಮೂಲಕ ಸ್ವಂತ ಮನೆ ಹೊಂದಬೇಕೆನ್ನುವ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ. ಅಲ್ಲದೆ ಯೋಜನೆ ಅಡಿಯಲ್ಲಿ ನೀಡುವ ಸಾಲದ ಅವಧಿಯನ್ನು ಕೂಡ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಹೊಸ ಪ್ರಸ್ತಾವನೆಯಲ್ಲಿ ಏನಿರಲಿದೆ?

-ಮುಂಬರುವ ಬಜೆಟ್​ನಲ್ಲಿ ಈ ಯೋಜನೆಗಾಗಿ ಹೌಸಿಂಗ್ ಫಂಡ್​ ಅನ್ನು ಶೇ.50ರಷ್ಟು ಹೆಚ್ಚಿಸಲಿದೆ.
-ಮಧ್ಯಮ ವರ್ಗದವರಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ.
Loading...

-ಎಎಚ್ಎಫ್ ಫಂಡ್​ ಮೊತ್ತವನ್ನು 10,000 ಕೋಟಿಗಳಿಂದ 15,000 ಕೋಟಿ ರೂ.ಗೆ ಏರಿಸುವ ಪ್ರಸ್ತಾಪ
-ಫಂಡ್​ ಹೆಚ್ಚಳದಿಂದ ಬಡ್ಡಿದರದಲ್ಲಿ ಇಳಿಕೆಯ ಸಾಧ್ಯತೆ
-ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಬಡ್ಡಿದರದಲ್ಲಿ ರಿಯಾಯಿತಿ
-ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಅಡಿಯಲ್ಲಿ ಪ್ರಯೋಜನ ಪಡೆಯಬಹುದು
-ಈ ಯೋಜನೆ ಅಡಿಯಲ್ಲಿ ಮನೆ ಖರೀದಿಸಿದ ಜನರ ಖಾತೆಗೆ ಸರ್ಕಾರದಿಂದ ಸಹಾಯಧನ
-CLSS ಅಡಿಯಲ್ಲಿ ಪ್ರಸ್ತುತ 7500 ಕೋಟಿ ಸಬ್ಸಿಡಿ ಬಾಕಿ ಇದೆ
-ಹೌಸಿಂಗ್ ಫಾರ್ಮ್ ಆಲ್ ಸ್ಕೀಮ್ ಅಡಿಯಲ್ಲಿ ಎಲ್ಲರಿಗೂ ಮನೆ ಒದಗಿಸಲು ಒತ್ತು

ಏನಿದು ಪ್ರಧಾನ ಮಂತ್ರಿ ವಸತಿ ಯೋಜನೆ:

ಸ್ವಂತ ಮನೆಯೊಂದನ್ನು ಖರೀದಿಸಬೇಕು ಎಂದು ಕನಸು ಕಾಣುವ ಬಡವರಿಗೊಂದು ಸೂರು ಒದಗಿಸಲು ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ. ಈ ಮೂಲಕ ಮನೆ ಇಲ್ಲದ ಬಡವರು, ಅತಿ ಕೆಳವರ್ಗದವರು, ಕಡಿಮೆ ಆದಾಯ ಹೊಂದಿರುವರಿಗೆ ವಸತಿ ಖರೀದಿಸಲು ಸರ್ಕಾರ ಸಹಾಯ ಮಾಡಲಿದೆ.

ಸಬ್ಸಿಡಿ ಎಷ್ಟು?

1- 6ರಿಂದ 12 ಲಕ್ಷ ರೂ. ಆದಾಯ ಹೊಂದಿರುವ ಮಧ್ಯಮ ಗುಂಪಿನ(MIG)ಫಲಾನುಭವಿಗಳಿಗೆ 9 ಲಕ್ಷ ರೂ. ಮೇಲೆ 4% ಸಬ್ಸಿಡಿಯನ್ನು ನೀಡಲಾಗುತ್ತದೆ. 12 ರಿಂದ 18 ಲಕ್ಷದ ಆದಾಯ ಹೊಂದಿರುವ ಕುಟುಂಬಗಳಿಗೆ 12 ಲಕ್ಷದ ಸಾಲದ ಮೇಲೆ 3% ಬಡ್ಡಿ ಸಬ್ಸಿಡಿ ರಿಯಾಯಿತಿ ಇರಲಿದೆ.
2. ಇದರ ಹೊರತಾಗಿ ಹೆಚ್ಚಿನ ಸಾಲ ಪಡೆದರೆ ಅದರ ಹೆಚ್ಚುವರಿ ಬಡ್ಡಿಯನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ವೈರಲ್ ವೀಡಿಯೊ: ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಭವಿಷ್ಯ ನುಡಿದಿದ್ದ ಅನಿಲ್ ಕುಂಬ್ಳೆ..!

ಯಾವ ಮನೆಗಳಿಗೆ ಸಾಲ?

1. ನೀವು ಡೆವಲಪರ್ ಅಥವಾ ಬಿಲ್ಡರ್​ನಿಂದ ಮನೆಯೊಂದನ್ನು ಅಥವಾ ಹಳೆಯ ಮನೆಯನ್ನು ಖರೀದಿಸುತ್ತಿದ್ದರೆ, ಈ ಯೋಜನೆಯ ಲಾಭ ಪಡೆಯಬಹುದು.
2. ಹೊಸ ಮನೆಯನ್ನು ನಿರ್ಮಿಸುವವರು ಕೂಡ ಈ ಯೋಜನೆಯ ಲಾಭ ಪಡೆಯುತ್ತಾರೆ.
3. ಶಾಶ್ವತ ಮನೆ ಇರುವವರು ಅದನ್ನು ದುರಸ್ತಿ ಮಾಡಲು ಅಥವಾ ಮನೆಗೆ ಕೊಠಡಿಗಳನ್ನು ಸೇರಿಸಲು ಕೂಡ ಈ ಸಾಲವನ್ನು ತೆಗೆದುಕೊಳ್ಳಬಹುದು.
4. ಆದರೆ ಮನೆಯೊಳಗೆ ಕೊಠಡಿಗಳನ್ನು, ಅಡುಗೆ ಕೋಣೆಗಳನ್ನು ಮೇಲ್ದರ್ಜೆಗೆ ಏರಿಸಲು ಈ ಸಾಲವನ್ನು ನೀಡಲಾಗುವುದಿಲ್ಲ.

ಇದನ್ನೂ ಓದಿ: ರೈಲ್ವೆ ನೇಮಕಾತಿ: ವಿವಿಧ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಂದ ಅರ್ಜಿ ಆಹ್ವಾನ

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ