ತೆಲಂಗಾಣ ಮಳೆಯ ರುದ್ರನರ್ತನಕ್ಕೆ 50 ಜನರ ಬಲಿ; ಅಂದಾಜು 5000 ಕೋಟಿ ನಷ್ಟ ಎಂದ ಸರ್ಕಾರ

ರಾಜ್ಯದಲ್ಲಿ ದಾಖಲೆ ಮಳೆ ಈ ಅಕ್ಟೋಬರ್​ನಲ್ಲಿ ಸುರಿದಿದೆ. ಭೀಕರ ಮಳೆಗೆ ಹೈದ್ರಾಬಾದ್​ ಒಂದರಲ್ಲಿಯೇ 31 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ದಾಖಲೆ ಮಳೆ ಈ ಅಕ್ಟೋಬರ್​ನಲ್ಲಿ ಸುರಿದಿದೆ. ಭೀಕರ ಮಳೆಗೆ ಹೈದ್ರಾಬಾದ್​ ಒಂದರಲ್ಲಿಯೇ 31 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ದಾಖಲೆ ಮಳೆ ಈ ಅಕ್ಟೋಬರ್​ನಲ್ಲಿ ಸುರಿದಿದೆ. ಭೀಕರ ಮಳೆಗೆ ಹೈದ್ರಾಬಾದ್​ ಒಂದರಲ್ಲಿಯೇ 31 ಜನರು ಸಾವನ್ನಪ್ಪಿದ್ದಾರೆ.

 • Share this:
  ಹೈದ್ರಾಬಾದ್​ (ಅ.15): ತೆಲಂಗಾಣದಲ್ಲಿ ಸುರಿಯುತ್ತಿರುವ ಮಳೆಯ ರುದ್ರ ನರ್ತನಕ್ಕೆ ಈವರೆಗೆ 50 ಜನರು ಸಾವನ್ನಪ್ಪಿದ್ದಾರೆ. ರಾಜ್ಯದೆಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ನದಿಗಳಾಗಿದ್ದು, ಸಾಕಷ್ಟು ಜೀವಹಾನಿ-ಆಸ್ತಿಪಾಸ್ತಿ ಹಾನಿಯಾಗಿದೆ. ಇದರಿಂದ ಅಂದಾಜು 5 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಉಂಟಾಗಿರುವ ನಷ್ಟ ಹಾಗೂ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮಂತ್ರಿಗೆ ಪತ್ರ ಬರೆದಿದ್ದು, ಪರಿಹಾರ  ಕೋರಿದ್ದಾರೆ. ರಾಜ್ಯದ ಜನರಿಗೆ ಪುನರ್ವಸತಿ ಕಲ್ಪಿಸಬೇಕಿದ್ದು ತಕ್ಷಣಕ್ಕೆ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ ಈ ಹಿನ್ನಲೆ 1,350 ಕೋಟಿ ಪರಿಹಾರ ಹಣ ನೀಡುವಂತೆ ಮನವಿ ಮಾಡಿದ್ದಾರೆ.

  ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆಗೆ 9 ಜನರ ಕುಟುಂಬವೊಂದು ಕೊಚ್ಚಿಹೋಗಿದೆ. ಮೂವರ ದೇಹ ಪತ್ತೆ ಯಾಗಿದೆ. ಮಗು ಸೇರಿದಂತೆ ಇನ್ನುಳಿದ ಐವರ ದೇಹಕ್ಕಾಗಿ ಶೋಧ ಮುಂದುವರೆದಿದೆ.  ರಾಜ್ಯದಲ್ಲಿ ದಾಖಲೆ ಮಳೆ ಈ ಅಕ್ಟೋಬರ್​ನಲ್ಲಿ ಸುರಿದಿದೆ. ಭೀಕರ ಮಳೆಗೆ ಹೈದ್ರಾಬಾದ್​ ಒಂದರಲ್ಲಿಯೇ 31 ಜನರು ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ 144ರಷ್ಟು ಅಧಿಕ ಮಳೆಯಾಗಿದೆ, ಹೈದ್ರಾಬಾದ್​ನಲ್ಲಿ ಸಾಮಾನ್ಯಕ್ಕಿಂತ ಶೇ 404 ರಷ್ಟು ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ


  ಇಲ್ಲಿನ ಮಳೆಮೋಡಗಳು ಮಧ್ಯಾಹ್ನದ ಹೊತ್ತಿಗೆ ಮಹಾರಾಷ್ಟ್ರದ ಕಡೆಗೆ ಸಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಪಶ್ಚಿಮ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ, ಅಲ್ಲದೇ ಉತ್ತರ ಕೊಂಕಣ ಪ್ರದೇಶ, ಮುಂಬಯಿ ಹಾಗೂ ಥಾಣೆಯಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ.

  ಹೈದ್ರಾಬಾದ್​ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎನ್​ಡಿಆರ್​ಎಫ್​ ರಕ್ಷಣಾ ಕಾರ್ಯಚಾರಣೆ ಸಾಗಿದೆ. ಹೆದ್ರಾಬಾದ್​ನಲ್ಲಿ 2000 ಜನರನ್ನು ಸುರಕ್ಷಿತ ಸ್ಥಳಕ್ಕೆ  ಸ್ಥಳಾಂತರ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
  Published by:Seema R
  First published: