Demonetisation: ನೋಟು ಬ್ಯಾನ್ ಮಾಡಿ ಇಂದಿಗೆ 5 ವರ್ಷ; RBI ಎದುರು ಪ್ರತಿಭಟನೆ ಮಾಡಿ ಆಕ್ರೋಶ

ನೋಟು ಅಮಾನ್ಯೀಕರಣದ ನಿರ್ಧಾರವು ನಮ್ಮ ಆರ್ಥಿಕತೆಯನ್ನು  ಕಾಪಾಡುವ ಮಾಸ್ಟರ್‌ಸ್ಟ್ರೋಕ್ ಆಗುವ ಬದಲು ದುರಂತವಾಯಿತು ಎಂದು ಶ್ರೀನಿವಾಸ್ ಬಿವಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವದೆಹಲಿ: 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ (Demonetization) ಮಾಡಿ ನವೆಂಬರ್ 8ಕ್ಕೆ 5 ವರ್ಷವಾದ ಹಿನ್ನೆಲೆಯಲ್ಲಿ ಸೋಮವಾರ (ನವೆಂಬರ್ 8) ಭಾರತೀಯ ಯುವ ಕಾಂಗ್ರೆಸ್ (Indian Youth Congress) ವತಿಯಿಂದ ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ (Indian Youth Congress President Srinivas BV) ನೇತೃತ್ವದಲ್ಲಿ ದೆಹಲಿಯ ರಿಸರ್ವ್ ಬ್ಯಾಂಕ್‌  (Reserve Bank) ಮುಖ್ಯ ಶಾಖೆ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಬಿ.ವಿ. 5 ವರ್ಷಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಜಾರಿಗೆ ತಂದ ನೋಟು ಅಮಾನ್ಯೀಕರಣ ದೇಶದ ಆರ್ಥಿಕತೆಯನ್ನು ನಾಶ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೋಟು ಅಮಾನ್ಯೀಕರಣದಿಂದ ಏನನ್ನು ಸಾಧಿಸಿದರು? 

ಪ್ರಧಾನಿಯವರ ನೋಟು ಅಮಾನ್ಯೀಕರಣದ ನಿರ್ಧಾರವು ನಮ್ಮ ಆರ್ಥಿಕತೆಯನ್ನು (Economy) ಕಾಪಾಡುವ ಮಾಸ್ಟರ್‌ಸ್ಟ್ರೋಕ್‌ಗಿಂತ (Master Stroke) ಆಗುವ ಬದಲು ದುರಂತ (Disaster)  ಎಂದು ಸಾಬೀತಾಯಿತು. ನೋಟು ಅಮಾನ್ಯೀಕರಣದ ಮೂಲಕ ಭಯೋತ್ಪಾದನೆಯನ್ನು ಕೊನೆಗಾಣಿಸುವ ಮಾತು 'ಜುಮ್ಲಾ' ಎಂದು ರುಜುವಾತಾಯಿತು. ನೋಟು ಅಮಾನ್ಯೀಕರಣವು ದೇಶವಾಸಿಗಳನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿತು ಎಂದು ಹೇಳಿದರು. ಪ್ರಧಾನಿ ಮೋದಿಯವರು ತಮ್ಮ ನೋಟು ಅಮಾನ್ಯೀಕರಣದ ಮೂರ್ಖ ನಿರ್ಧಾರವನ್ನು ಸಮರ್ಥಿಸಲು ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವುದಾಗಿ ಹೇಳುತ್ತಿದ್ದಾರೆ. ವಾಸ್ತವ ಬೇರೆಯೇ ಆಗಿದ್ದೂ ನೋಟು ಅಮಾನ್ಯೀಕರಣದ ಬಳಿಕ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ನೋಟು ಅಮಾನ್ಯೀಕರಣವು ಭ್ರಷ್ಟಾಚಾರವನ್ನು (Corruption) ಕೊನೆಗೊಳಿಸಲಿಲ್ಲ. ಆರ್ಥಿಕತೆಯನ್ನು ನಗದು ರಹಿತವನ್ನಾಗಿ ಮಾಡಲಿಲ್ಲ.ಭಯೋತ್ಪಾದನೆಯನ್ನು (Terrorism) ನಿರ್ಮೂಲನೆ ಮಾಡಲಿಲ್ಲ. ಒಟ್ಟಾರೆಯಾಗಿ ನೋಟು ಅಮಾನ್ಯೀಕರಣವು ಅದರ ಯಾವುದೇ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಶ್ರೀನಿವಾಸ್ ಬಿವಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ನೋಟು ಅಮಾನ್ಯೀಕರಣದ ಗುರಿ ವಿಫಲ 

ನೋಟು ಅಮಾನ್ಯೀಕರಣವು ಕಪ್ಪು ಮಾರುಕಟ್ಟೆಯನ್ನು ಕೊನೆಗೊಳಿಸುತ್ತದೆ. ದೇಶವು ಅಭಿವೃದ್ಧಿಗೊಳ್ಳುತ್ತದೆ ಎಂದು ಮೋದಿ ಮತ್ತು ಬಿಜೆಪಿ ನಾಯಕರು (BJP Leaders) ಹೇಳಿದ್ದರು. ಆದರೆ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದ ಜಿಡಿಪಿ (GDP) ಅತ್ಯಂತ ಕೆಳಮಟ್ಟದಲ್ಲಿದೆ. ನಿರುದ್ಯೋಗವು (Unemployment) ಅತ್ಯಧಿಕವಾಗಿದೆ. ಬಡತನವು (Poverty) ವೇಗವಾಗಿ ಆಕ್ರಮಣ ಮಾಡುತ್ತಿದೆ. ಬಿಜೆಪಿ ಸರ್ಕಾರ ದೇಶವನ್ನು ಕತ್ತಲೆಗೆ ತಳ್ಳಿದೆ. ಬಿಜೆಪಿಯು ದೇಶದ ಎಲ್ಲಾ ದೊಡ್ಡ ಮತ್ತು ಸಣ್ಣ ಉದ್ಯಮಿಗಳನ್ನು ಮುಳುಗಿಸಿದೆ. ಮಧ್ಯಮ ಮತ್ತು ಬಡ ವರ್ಗದವರ ಮೇಲೂ ದುಷ್ಪರಿಣಾಮ ಬೀರಿದೆ. ನೋಟು ಅಮಾನ್ಯೀಕರಣವು ಕಪ್ಪುಹಣದ ವಿರುದ್ಧದ ಯುದ್ಧವಲ್ಲ. ಅದು ಬಡವರು ಮತ್ತು ಸಾಮಾನ್ಯ ನಾಗರಿಕರ ವಿರುದ್ಧದ ಯುದ್ಧವಾಗಿದೆ. ನೋಟು ಅಮಾನ್ಯೀಕರಣ ತನ್ನ ಗುರಿಯಲ್ಲಿ ವಿಫಲವಾಗಿದೆ, ನೋಟು ಅಮಾನ್ಯೀಕರಣದ ವೈಫಲ್ಯಕ್ಕಾಗಿ ಪ್ರಧಾನಿ ದೇಶವಾಸಿಗಳ ಕ್ಷಮೆಯಾಚಿಸಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದರು.

ಇದನ್ನೂ ಓದಿ: Padma Awards 2020: ಹಾಜಬ್ಬು, ಪಿವಿ ಸಿಂಧು, ಕಂಗನಾ ಸೇರಿದಂತೆ ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ (Indian Youth Congress Media In charge Rahul Rao) ಮಾತನಾಡಿ, ಮಾರಣಾಂತಿಕ ನೋಟು ಅಮಾನ್ಯೀಕರಣದ 5 ವರ್ಷಗಳ ನಂತರವೂ ಮೋದಿ ದೇಶದ ಕವಲುದಾರಿಯಲ್ಲಿ ಇದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಬಿವಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಆರ್‌ಬಿಐ ಹೊರಗೆ ಪ್ರದರ್ಶನ ಮಾಡಿದ್ದೇವೆ. ಆದರೆ ದೆಹಲಿ ಪೊಲೀಸರು (Delhi Police) ನಮ್ಮನ್ನು ತಡೆದು ಪೊಲೀಸ್ ಠಾಣೆಗೆ ಕರೆದೊಯ್ದುವ ಮೂಲಕ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಖಂಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ದೆಹಲಿ ಉಸ್ತುವಾರಿ ಭಯ್ಯಾ ಪವಾರ್, ರಾಷ್ಟ್ರೀಯ ಕಾರ್ಯದರ್ಶಿ ಅಜಯ್ ಚಿಕಾರ, ಮೋಹಿತ್ ಚೌಧರಿ, ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಣವಿಜಯ್ ಸಿಂಗ್ ಲೋಚ್ ಮತ್ತು ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Published by:Kavya V
First published: