HOME » NEWS » National-international » 5 YEAR OLD GIRL RAPED AT US EMBASSY QUARTERS IN DELHIS CHANAKYAPURI SESR

ದೆಹಲಿಯ ಅಮೆರಿಕ ರಾಯಭಾರಿ ಕಚೇರಿ ಕ್ವಾಟ್ರಸ್​ನಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಅಮೆರಿಕ ರಾಯಭಾರಿ ಕಾಂಪ್ಲೆಕ್ಸ್​ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ತಂದೆ ಕಾಂಪ್ಲೆಕ್ಸ್​ನಲ್ಲಿ ಹೌಸ್​ ಕಿಪಿಂಗ್ ಕೆಲಸ ನಿರ್ವಹಿಸುತ್ತಿದ್ದರು

Seema.R | news18-kannada
Updated:February 6, 2020, 11:05 AM IST
ದೆಹಲಿಯ ಅಮೆರಿಕ ರಾಯಭಾರಿ ಕಚೇರಿ ಕ್ವಾಟ್ರಸ್​ನಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಫೆ.6): ಇಲ್ಲಿನ ಚಾಣಕ್ಯಪುರಿ ಪ್ರದೇಶದ ರಾಯಭಾರಿ ಕಚೇರಿಯ ವಸತಿ ಸಮುಚ್ಛಯದಲ್ಲಿ ಕಾಮುಕನೊಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಅಮೆರಿಕ ರಾಯಭಾರಿ ಕಾಂಪ್ಲೆಕ್ಸ್​ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ತಂದೆ ಕಾಂಪ್ಲೆಕ್ಸ್​ನಲ್ಲಿ ಹೌಸ್​ ಕಿಪಿಂಗ್ ಕೆಲಸ ನಿರ್ವಹಿಸುತ್ತಿದ್ದರು ಎಂದು ಐಎಎನ್​ಎಸ್​ ವರದಿ ಮಾಡಿದೆ.

ಬಾಲಕಿಯ ನೆರೆ ಮನೆಯತ (25) ಈ ಕೃತ್ಯ ಎಸಗಿದ್ದಾನೆ. ಈತ ವೃತ್ತಿಯಲ್ಲಿ ಡ್ರೈವರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಈ ಘಟನೆ ನಡೆದಿದ್ದು, ಘಟನೆ ಕುರಿತು ಪೋಷಕರು ಭಾನುವಾರ ದೂರು ದಾಖಲಿಸಿದ್ದಾರೆ. ಬಾಲಕಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ. ಸಂತ್ರಸ್ತೆ ಪೋಷಕರು ಹಾಗೂ ಆರೋಪಿ ರಾಯಭಾರಿ ಕಚೇರಿಯ ಕ್ವಾಟ್ರಸ್​ನಲ್ಲಿ ನೆಲೆಸಿದ್ದರು. ಆರೋಪಿ ತಂದೆ ರಾಯಭಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನೆರೆಮನೆಯಲ್ಲಿಯೇ ಇದ್ದ ಕಾರಣ ಬಾಲಕಿ ಆಗಾಗ್ಗ ಇವರ ಮನೆಗೆ ಭೇಟಿ ನೀಡುತ್ತಿದ್ದಳು ಎಂದು ತಿಳಿದು ಬಂದಿದೆ,

ಘಟನೆಯ ದಿನ ಬಾಲಕಿ ಮನೆ ಹೊರಗೆ ಆಟವಾಡುತ್ತಿದ್ದಳು. ಈ ವೇಳೆ ಮೊಬೈಲ್​ ನೀಡುವುದಾಗಿ ಹೇಳಿ ಮನೆಯಲ್ಲಿ ಪೋಷಕರಿಲ್ಲದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ.

ಇದನ್ನು ಓದಿ: ನಿರ್ಭಯಾ ಕೇಸ್​​: ಗಲ್ಲುಶಿಕ್ಷೆ ತಡೆ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ; ಇಂದು ತೀರ್ಪು​ ಸಾಧ್ಯತೆ

ಮನೆಗೆ ಮರಳಿದಾಗ ಬಾಲಕಿ ಗುಪ್ತಾಂಗದಲ್ಲಿ ನೋವಿನ ಬಗ್ಗೆ ತಾಯಿಗೆ ತಿಳಿಸಿದ್ದಳು. ಈ ವೇಳೆ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ,ಆರೋಪಿ ವಿರುದ್ಧ ಪೋಸ್ಕೊ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
First published: February 6, 2020, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories