Human Sacrifice: 5 ವರ್ಷದ ಮುಗ್ಧ ಬಾಲಕಿಯ ನರಬಲಿ? ಮಂತ್ರವಾದಿಯನ್ನು ಬಂಧಿಸಿದ ಪೊಲೀಸರು

ಮನೆಯಲ್ಲಿ 5 ಜನ ಸಹೋದರ-ಸಹೋದರಿಯರ ನಡುವೆ ನೆಮ್ಮದಿಯಾಗಿ ಮಲಗಿದ್ದ ಪುಟ್ಟ ಬಾಲಕಿಯನ್ನು ಸೋಮವಾರ ನಡುರಾತ್ರಿಯಲ್ಲಿ ಯಾರೋ ಅಪಹರಿಸಿದ್ದಾರೆ. ಮರುದಿನ ಬೆಳಗ್ಗೆ ಬಾಲಕಿ ಕಾಣೆಯಾದಾಗ ಆಕೆಯ ಅಕ್ಕ ದೂರು ನೀಡಿದ್ದಳು. ಅದೇ ರಾತ್ರಿ ಸಿಂಗ್ಲು ನದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಸ್ಸಾಂನ ಚರೈಡಿಯೊ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಬಾಲಕಿಯನ್ನು ಬಲಿ (Human Sacrifice) ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಂತ್ರವಾದಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ. ತನ್ನ ಮನೆಯಲ್ಲಿ 5 ಜನ ಸಹೋದರ-ಸಹೋದರಿಯರ ನಡುವೆ ನೆಮ್ಮದಿಯಾಗಿ ಮಲಗಿದ್ದ ಪುಟ್ಟ ಬಾಲಕಿಯನ್ನು ಸೋಮವಾರ ನಡುರಾತ್ರಿಯಲ್ಲಿ ಯಾರೋ ಅಪಹರಿಸಿದ್ದಾರೆ. ಮರುದಿನ ಬೆಳಗ್ಗೆ ಬಾಲಕಿ ಕಾಣೆಯಾದಾಗ ಆಕೆಯ ಅಕ್ಕ ಸೆಫ್ರಾಯಿ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ಮಂಗಳವಾರ ದೂರು ನೀಡಿದ್ದಳು. ಅದೇ ದಿನ (ಮಂಗಳವಾರ) ರಾತ್ರಿ ಸಿಂಗ್ಲು ನದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೆಂಪು ಬಟ್ಟೆಯಲ್ಲಿ ಭಸ್ಮ ಸೇರಿದಂತೆ ಮಂತ್ರವಾದಿಗಳು ಬಳಸುವ ಕೆಲವು ವಸ್ತುಗಳು ನದಿ ದಂಡೆಯಲ್ಲಿ ಪತ್ತೆಯಾಗಿವೆ. ಆದ್ದರಿಂದ ಇದು ನರಬಲಿಯ ಪ್ರಕರಣ ಇರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಂತ್ರವಾದಿಯನ್ನು ಬಂಧಿಸಲಾಗಿದ್ದು, ನರಬಲಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿರಬಹುದಾದ ಮತ್ತೊಬ್ಬ ಹಿರಿಯ ಮಂತ್ರವಾದಿಯನ್ನು ಹುಡುಕುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕಿಯ ತಂದೆ ತಾಯಿಯನ್ನು ಈಗಾಗಲೇ ಪ್ರಶ್ನಿಸಿರುವ ಪೋಲೀಸರು ತಂದೆ ಮತ್ತು ಇನ್ನಿತರ 10 ಜನರನ್ನು ಮತ್ತಷ್ಟು ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಬಾಲಕಿಯನ್ನು ಯಾರು ಅಪಹರಿಸಿದರು ಮತ್ತು ಏಕೆ, ಆಕೆಯನ್ನು ನಿಜವಾಗಲೂ ನರಬಲಿಗಾಗಿಯೇ ಅಪಹರಿಸಿದ್ದರಾ ಮುಂತಾದ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ನರಬಲಿಯ ವಿಚಾರವನ್ನು ಖಂಡಿತಾ ತಳ್ಳಿಹಾಕುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಆದಿವಾಸಿಗಳು ಹೆಚ್ಚಿರುವ ಟೀ ಎಸ್ಟೇಟ್​ಗಳಲ್ಲಿ ನರಬಲಿಯ ಪ್ರಕರಣಗಳು ನಡೆದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Covid 19 ಗೆದ್ದು ಬಂದವರಲ್ಲಿ ವಿಪರೀತ Hair Fall, ಇದಕ್ಕೂ ಸೋಂಕಿಗೂ ಲಿಂಕ್ ಇದೆ ಅಂತಿದ್ದಾರೆ ಡಾಕ್ಟರ್ಸ್ ! ಪರಿಹಾರವೇನು?

2016ರಲ್ಲಿ ಮತ್ತೊಂದು ಟೀ ತೋಟದಿಂದ 4 ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಆಕೆಯ ಛಿದ್ರವಾದ ದೇಹ ಕೆಲ ದಿನಗಳ ನಂತರ ಪತ್ತೆಯಾಗಿತ್ತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: