Tragedy: ತಾತ ತಂದಿಟ್ಟಿದ್ದ ಬ್ರಾಂಡಿ ಕುಡಿದು ಬಾಲಕ ಸಾವು, ಮೊಮ್ಮಗನ ಸ್ಥಿತಿ ಕಂಡು ಮೃತಪಟ್ಟ ಅಜ್ಜ

Death by Alcohol: 62 ವರ್ಷದ ಚಿನ್ನಸ್ವಾಮಿಗೆ ಕುಡಿಯುವ ಅಭ್ಯಾಸವಿತ್ತು. ಹೀಗಾಗಿ ತನ್ನ ಮನೆಗೆ ಫುಲ್ ಬಾಟಲ್ ಬ್ರಾಂಡಿ ಯನ್ನು ತಂದಿದ್ದರು. ಅದರಲ್ಲಿ ಸ್ವಲ್ಪ ಕುಡಿದು ಉಳಿದಿದ್ದನ್ನು ಮನೆಯಲ್ಲಿಯೇ ಇಟ್ಟಿದ್ದರು. ಇದನ್ನು ಜ್ಯೂಸ್ ಎಂದು ತಪ್ಪಾಗಿ ಅರ್ಥೈಸಿಕೊಂಡ ಮೊಮ್ಮಗ ರುಕೇಶ್, ಬ್ರಾಂಡಿ ಬಾಟಲ್ ಎತ್ತಿಕೊಂಡು ಕುಡಿದು ಖಾಲಿ ಮಾಡಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Crime News: ಮಕ್ಕಳಿರಬೇಕು ಮನೆ ತುಂಬಾ ಅಂತಾರೆ. ಹೀಗೆ ಮಕ್ಕಳು ಮನೆಯಲ್ಲಿದ್ದಾಗ ಎಡವಟ್ಟುಗಳ ಆಗುವುದು ಸಹಜ. ಮಕ್ಕಳ ಕೈಗೆ ಅಪಾಯಕಾರಿ ವಸ್ತುಗಳು ಸಿಗದಂತೆ ಪೋಷಕರು ನೋಡಿಕೊಳ್ಳಬೇಕು. ಏನೂ ತಿಳಿಯದ ಮುಗ್ಧ ವಯಸ್ಸಿನಲ್ಲಿ ಮಕ್ಕಳು (Children) ಇರುತ್ತಾರೆ. ಅವರಿಗೆ ಸರಿ ಯಾವುದು, ತಪ್ಪು ಯಾವುದು ಎಂದು ತಿಳಿಯುವುದಿಲ್ಲ. ಮನೆಯಲ್ಲಿ ಪೋಷಕರು ಮಕ್ಕಳ ಎದುರು ಮಾಡಿದ್ದನ್ನೇ ಫಾಲೋ (Kids follow adults) ಮಾಡುತ್ತಾರೆ. ಪುಟ್ಟ ಪುಟ್ಟ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಕರು ನೋಡಿಕೊಳ್ಳಬೇಕು. ಮನೆಯಲ್ಲಿ ಹಿರಿಯರಿದ್ದರೆ ಹೆಚ್ಚು ಜಾಗೃತವಾಗಿರಬೇಕು. ಇಲ್ಲವಾದರೆ ಎಡವಟ್ಟುಗಳು ಆಗುವುದು ಖಚಿತ. ಇದಕ್ಕೆ ತಕ್ಕ ಉದಾಹರಣೆಯಂತೆ ತಮಿಳುನಾಡಿನಲ್ಲಿ (Tamilnadu) ದುರಂತವೊಂದು ನಡೆದು ಹೋಗಿದೆ. ತಾತ ತಂದಿಟ್ಟಿದ್ದ ಬ್ರಾಂಡಿ(Brandy) ಕುಡಿದು 5 ವರ್ಷದ ಬಾಲಕ (5 year old boy) ಸಾವನ್ನಪ್ಪಿದ್ದಾನೆ. ತನ್ನ ತಪ್ಪಿನಿಂದ ಮೊಮ್ಮಗನನ್ನ ಕಳೆದುಕೊಂಡ ಅಜ್ಜ ಕೂಡಾ ಕೊನೆಯುಸಿರೆಳೆದಿದ್ದಾರೆ. ತಾತಾ ತಂದಿಟ್ಟಿದ್ದ ಬ್ರಾಂಡಿ ಯನ್ನ ಜ್ಯೂಸ್(Juice) ಎಂದು ಭಾವಿಸಿ ಬಾಲಕ ಕುಡಿದು ಬಿಟ್ಟಿದ್ದಾನೆ. ಇದಾದ ಕೆಲ ಗಂಟೆಗಳಲ್ಲೇ ಐದು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

    ತಮಿಳುನಾಡು (Tamil Nadu) ರಾಜ್ಯದ ಚೆನ್ನೈ (Chennai)ನ ವೆಲ್ಲೂರಿ (Vellore)ನಲ್ಲಿ ಈ ದುರ್ಘಟನೆ ಸಂಭವಿಸಿದೆ. 62 ವರ್ಷದ ಚಿನ್ನಸ್ವಾಮಿ(Chinnasamy) ಎಂಬುವವರಿಗೆ ಕುಡಿಯುವ ಅಭ್ಯಾಸವಿತ್ತು. ಹೀಗಾಗಿ ತನ್ನ ಮನೆಗೆ ಫುಲ್ ಬಾಟಲ್ ಬ್ರಾಂಡಿ ಯನ್ನು ತಂದಿದ್ದರು. ಅದರಲ್ಲಿ ಸ್ವಲ್ಪ ಕುಡಿದು ಉಳಿದಿದ್ದನ್ನು ಮನೆಯಲ್ಲಿಯೇ ಇಟ್ಟಿದ್ದರು. ಇದನ್ನು ಜ್ಯೂಸ್ ಎಂದು ತಪ್ಪಾಗಿ ಅರ್ಥೈಸಿಕೊಂಡ ಮೊಮ್ಮಗ ರುಕೇಶ್(Rukesh) , ಬ್ರಾಂಡಿ ಬಾಟಲ್ ಎತ್ತಿಕೊಂಡು ಕುಡಿದು ಖಾಲಿ ಮಾಡಿದ್ದಾನೆ. ಇದಾದ ಕೆಲ ಹೊತ್ತಲ್ಲೇ ಮೊಮ್ಮಗ ಸಾವನ್ನಪ್ಪಿದ್ದಾನೆ. ಇತ್ತ ಈ ಮೊಮ್ಮಗನ ಪರಿಸ್ಥಿತಿ ಗಮನಿಸಿದ ಚಿನ್ನಸ್ವಾಮಿ ಮೂರ್ಛೆ ಹೋಗಿದ್ದಾರೆ. ಇದಾದ ಕೆಲ ಹೊತ್ತಲ್ಲೇ ಅವರ ಪ್ರಾಣಪಕ್ಷಿಯು ಹಾರಿಹೋಗಿದೆ.

    ಕುಡಿತದ ಚಟವೇ ಎಲ್ಲದಕ್ಕೂ ಕಾರಣ

    ಪ್ರತಿನಿತ್ಯ ಕುಡಿಯುವ ಅಭ್ಯಾಸವನ್ನು ಚಿನ್ನಸ್ವಾಮಿ ಹೊಂದಿದ್ದರು. ತಂದಿದ್ದ ಬ್ರಾಂಡಿ ಬಾಟಲಿಯಲ್ಲಿ ಅರ್ಧ ಖಾಲಿ ಮಾಡಿ ಉಳಿದ ಅರ್ಧವನ್ನು ಹಾಗೆಯೇ ಇಟ್ಟಿದ್ದರು.
    ಕುಡಿದ ಅಮಲಿನಲ್ಲಿದ್ದ ಚಿನ್ನಸ್ವಾಮಿ ಮಲಗಿಬಿಟ್ಟಿದ್ದಾರೆ. ಇತ್ತ ಮೊಮ್ಮಗ ರುಕೇಶ್ ತಾತ ತಂದಿರುವುದು ಜ್ಯೂಸ್ ಎಂದು ತಿಳಿದು ಬ್ರಾಂಡಿ ಯನ್ನ ಸೇವಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ರುಕೇಶ್ ಉಸಿರಾಡಲು ಕಷ್ಟವಾಗಿ ಕೆಳಗೆ ಬಿದ್ದಿದ್ದಾನೆ. ಇದನ್ನು ಕಂಡ ರುಕೇಶ್ ಪೋಷಕರು ಆತನ ಸಹಾಯಕ್ಕೆ ಬಂದಿದ್ದಾರೆ. ಈ ಶಬ್ದವನ್ನು ಕೇಳಿದ ಚಿನ್ನಸ್ವಾಮಿ ಕೂಡ ನಿದ್ದೆಯಿಂದ ಎದ್ದಿದ್ದಾರೆ. ಮೊದಲೇ ಅಸ್ತಮ ರೋಗಿಯಾಗಿದ್ದ ಚಿನ್ನಸ್ವಾಮಿ, ತನ್ನ ಮೊಮ್ಮಗ ಒದ್ದಾಡುತ್ತಿರುವ ಕಂಡು ಮೂರ್ಛೆ ಹೋಗಿದ್ದಾರೆ.

    ಇದನ್ನೂ ಓದಿ: ಪ್ರೀತಿಯ ಮೊಮ್ಮಗಳಿಗೆ 91 ವಯಸ್ಸಿನ ಅಜ್ಜ ಕಳಿಸಿದ ಕ್ಯೂಟ್‌ ಸಂದೇಶ ಸಿಕ್ಕಾಪಟ್ಟೆ ವೈರಲ್‌!

    ಕೂಡಲೆ ಕುಟುಂಬಸ್ಥರು ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆ ಸೇರುವಷ್ಟರಲ್ಲಿ ಚಿನ್ನಸ್ವಾಮಿ ಪ್ರಾಣಪಕ್ಷಿ ಹಾರಿಹೋಗಿದೆ. ಇತ್ತ ರುಕೇಶ್ ನನ್ನ
    ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೆಲಹೊತ್ತು ಚಿಕಿತ್ಸೆಗೆ ಸ್ಪಂದಿಸಿದ್ದ ರುಕೇಶ್, ಬಳಿಕ ಮೃತಪಟ್ಟಿದ್ದಾನೆ. ಇಬ್ಬರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಒಟ್ಟಿಗೆ ನೆರವೇರಿಸಿದ್ದಾರೆ.

    ಇದೇ ರೀತಿಯ ಮತ್ತೊಂದು ಘಟನೆ

    ಕಳೆದ ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆ ತಮಿಳುನಾಡಿನ ಶೆಂಕೊಟ್ಟಾ(Shencottah)ದಲ್ಲಿ ನಡೆದಿತ್ತು. ಇಸಕ್ಕಿಯಮ್ಮಾಲ್(Isakkiyammal) ಎಂಬ ನಾಲ್ಕು ವರ್ಷದ ಮಗು ಮನೆಯಲ್ಲಿ ಬ್ಲೀಚಿಂಗ್ ಪೌಡರ್ ( Bleaching Powder) ಸೇವಿಸಿತ್ತು. ಇದಾದ ಬಳಿಕ ಆಕೆ ದೇಹದ ತೂಕ ಏಕಾಏಕಿ ಇಳಿಕೆಯಾಗಿತ್ತು. ಕೂಡಲೇ ಬಾಲಕಿಯನ್ನು ಎಗ್ಮೋರ್‌ನ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಹಾಸ್ಪಿಟಲ್‌ಗೆ ಸೇರಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ.

    (ವರದಿ - ವಾಸುದೇವ್. ಎಂ)
    Published by:Soumya KN
    First published: