5 State Election: ಎಲೆಕ್ಷನ್ ಪ್ರಚಾರಕ್ಕೆ ಡಿಜಿಟಲ್ ಟಚ್, ವರ್ಚ್ಯುವಲ್ ಕ್ಯಾಂಪೇನ್​ ಗೆ ರಾಜಕೀಯ ಪಕ್ಷಗಳು ರೆಡಿ

ಪ್ರಚಾರಕ್ಕೆ 3ಡಿ ಸ್ಟುಡಿಯೋ ಮಿಕ್ಸ್, (3D studio mix) ಜೂಮ್ (Zoom) ಮತ್ತು ವೆಬ್ ಎಕ್ಸ್ (WebEx) ಅನ್ನು ಬಳಕೆ ಮಾಡುವಂತೆ ಪಕ್ಷದ ಮಾಹಿತಿ ತಂತ್ರಜ್ಞಾನ ಸೆಲ್ ಗೆ ಸೂಚನೆ ನೀಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಪಂಚರಾಜ್ಯ ಚುನಾವಣೆ ಪ್ರಚಾರಕ್ಕೆ ಕೊರೊನಾ 3ನೇ ಅಲೆ ಅಡ್ಡಿಯಾಗಿದೆ. ಈಗಾಗಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ (5 State Election)ಗೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಕೊರೋನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜ.15ರವರೆಗೆ ಬಹಿರಂಗ ಪ್ರಚಾರ ಮಾಡದಂತೆ ಚುನಾವಣಾ ಆಯೋಗ (Election commission) ಈಗಾಗಲೇ ತಿಳಿಸಿದೆ. ಚುನಾವಣಾ ಆಯೋಗದ ಈ ನಿರ್ಧಾರ ರಾಜಕೀಯ ಪಕ್ಷಗಳಿಗೆ ಹೊಸ ಸವಾಲಾಗಿದೆ. ಹೀಗಾಗಿ, ಬಿಜೆಪಿ, ಕಾಂಗ್ರೆಸ್, ಎಸ್ ಪಿ ಸೇರಿದಂತೆ ಎಲ್ಲಾ ಪಕ್ಷಗಳು ವರ್ಚ್ಯುವಲ್ ಪ್ರಚಾರ (virtual campaign)ಕ್ಕೆ ಮುಂದಾಗಿದೆ. ಎಲ್ಲ ಪಕ್ಷಗಳ ನಾಯಕರು ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಗಳ ಮೂಲಕ ಮತದಾರರ ಮನ ಸೆಳೆಯಲು ಮುಂದಾಗಿದ್ದಾರೆ.

  ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ಶುರುವಾಗಿದೆ. ಇನ್ನು ಈಗಾಗಲೇ ಭಾರತಕ್ಕೆ ಕೊರೊನಾ ಮೂರನೇ ಅಲೆ ಕಾಲಿಟ್ಟಿದೆ. ಕೊರೊನಾ ಸಂಕಷ್ಷದ ಸಮಯದಲ್ಲೇ ಚುನಾವಣೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಹಾಗೂ ನಾಗರಿಕರು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ನಿರ್ಲಕ್ಷ್ಯವಹಿಸಿದರೆ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಪಕ್ಷಗಳು ಡಿಜಿಟಲ್ ಪ್ರಚಾರಕ್ಕೆ ಮುಂದಾಗಿದೆ.

  ಬಿಜೆಪಿ ಮಾಸ್ಟರ್ ಪ್ಲ್ಯಾನ್

  ಬಿಜೆಪಿ ಪಕ್ಷ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಬಲವಾಗಿದೆ. ಹಲವು ಚುನಾವಣೆಗಳಲ್ಲಿ ಸಾಮಾಜಿಕ ತಾಣಗಳ ಬಳಕೆ ಮಾಡಿ ಯಶಸ್ವಿಯೂ ಆಗಿದೆ. ಹೀಗಾಗಿ ಬಿಜೆಪಿ ಆನ್ ಲೈನ್ rally ನಡೆಸಲು ತಂತ್ರಗಾರಿಕೆ ಆರಂಭಿಸಿದೆ. ಪ್ರಚಾರಕ್ಕೆ 3ಡಿ ಸ್ಟುಡಿಯೋ ಮಿಕ್ಸ್, (3D studio mix) ಜೂಮ್ (Zoom) ಮತ್ತು ವೆಬ್ ಎಕ್ಸ್ (WebEx) ಅನ್ನು ಬಳಕೆ ಮಾಡುವಂತೆ ಪಕ್ಷದ ಮಾಹಿತಿ ತಂತ್ರಜ್ಞಾನ ಸೆಲ್ ಗೆ ಸೂಚನೆ ನೀಡಿದೆ. 3 ಡಿ ಸ್ಟುಡಿಯೋ ಮಿಕ್ಸ್ ನಲ್ಲಿ ಎರಡು ಬೇರೆ ಬೇರೆ ಸ್ಥಳಗಳಲ್ಲಿ ಇರುವ ನಾಯಕರನ್ನು ಒಂದೇ ಸ್ಟೇಜ್ ನಲ್ಲಿರುವಂತೆ ಚಿತ್ರಿಸಲಾಗುತ್ತದೆ. ಜೊತೆಗೆ 1.8ಲಕ್ಷ ಪೋಲಿಂಗ್ ಬೂತ್ ವ್ಯಾಪ್ತಿಯಲ್ಲಿ 2 ವಾಟ್ಸಾಪ್ ಗ್ರೂಪ್ ರಚನೆಗ ಬಿಜೆಪಿ ಮುಂದಾಗಿದೆ.

  ಇದನ್ನೂ ಓದಿ: Election Commissionನಿಂದ ಪಂಚರಾಜ್ಯ ಚುನಾವಣೆ ಡಿಜಿಟಲೀಕರಣ-ಮೊದಲ ಬಾರಿಗೆ ಹೊಸ ವಿಧಾನ ಅಳವಡಿಕೆ

  ಸಮಾಜವಾದಿ ಪಕ್ಷ ಹವಾ 

  ಬಿಜೆಪಿಗೆ ಸೆಡ್ಡು ಹೊಡೆಯಲು ಸಮಾಜವಾದಿ ಪಕ್ಷ ಸಹ ರೆಡಿಯಾಗಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತದಾರರನ್ನು ಸೆಳೆಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಫೇಸ್ ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ ಗಳ ಮೂಲಕ ಬಿರುಸಿನ ಪ್ರಚಾರಕ್ಕೆ ಸಮಾಜವಾದಿ ಪಕ್ಷ ಆದ್ಯತೆ ನೀಡಲಿದೆ. ಮೋದಿ ಹಾಗೂ ಯೋಗಿ ಆದಿತ್ಯನಾಥ್ ಗೆ ತಿರುಗೇಟು ನೀಡಲು ಅಖಿಲೇಶ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ.

  ಕಾಂಗ್ರೆಸ್ ಪ್ರಚಾರ ತಂತ್ರ

  ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶ ಗೆಲ್ಲಲು ರಣತಂತ್ರ ರೂಪಿಸಿದ್ದಾರೆ. ಮಹಿಳಾ ಮಂತ್ರ ಜಪಿಸುತ್ತಿರೋ ಪ್ರಿಯಾಂಕಾ ಮತದಾರರ ಮನಸೆಳೆಯಲು ನಾನಾ ಸರ್ಕಸ್ ಮಾಡ್ತಿದ್ದಾರೆ. ಕೊರಾನಾ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮ ರದ್ದುಗೊಳಿಸಿರೋ ಕಾಂಗ್ರೆಸ್ ಜಾಲತಾಣಗಳ ಮೊರೆ ಹೋಗಿದೆ. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಮೂಲಕ ಪ್ರಚಾರ ಕೈಗೊಳ್ಳಲು ಪಕ್ಷ ಮುಂದಾಗಿದೆ.

  ಇದನ್ನೂ ಓದಿ: 5 State Elections: ಕೊರೋನಾ ಕರಿನೆರಳ ನಡುವೆ ನಡೆಯುವ ಚುನಾವಣೆಯ 20 ಪ್ರಮುಖ ವಿಷಯಗಳು

  ಬಿಎಸ್ ಪಿ ಸೂತ್ರ

  ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷ ಚುನಾವಣೆ ಎದುರಿಸಲು ಸನ್ನದ್ಧವಾಗಿದೆ. ಸದ್ಯಕ್ಕೆ ಫೇಸ್ ಬುಕ್ ಅನ್ನು ಮಾತ್ರ ನೇರ ಪ್ರಚಾರಕ್ಕೆ ಬಳಕೆ ಮಾಡಲು ಮುಂದಾಗಿದೆ. ಇದಕ್ಕಾಗಿಯೇ ಹಲವು ಕ್ರಮಗಳನ್ನು ಕೈಗೊಂಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಮಾಯಾವತಿ ಈ ಬಾರಿ ಗೆಲುವಿಗೆ ರಣತಂತ್ರ ರೂಪಿಸೋದು ಗ್ಯಾರೆಂಟಿ.
  ಇತ್ತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೂಡ ಡಿಜಿಟಲ್ ಪ್ರಚಾರದಿಂದ ಹಿಂದುಳಿದಿಲ್ಲ. ಯೂಟ್ಯೂಬ್, ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಮೂಲಕ ಅಬ್ಬರದ ಪ್ರಚಾರ ಶುರುಮಾಡಿದೆ. ಒಟ್ಟಾರೆ ಈ ಪಂಚರಾಜ್ಯ ಚುನಾವಣೆ ದೇಶದಲ್ಲಿ ಹೊಸ ಮಾದರಿಯ ಪ್ರಚಾರಕ್ಕೆ ನಾಂದಿ ಹಾಡಲಿದೆ.
  Published by:Soumya KN
  First published: