ಅನಾಥ ಶವವಾಗಿದ್ದ ಲಕ್ಷಾಧಿಪತಿ ಭಿಕ್ಷುಕನ ಆಸ್ತಿಗೀಗ ಐವರು ವಾರಸ್ದಾರರು!

ಆಜಾದ್​ ಜೊತೆಗೇ ಸ್ಲಂನಲ್ಲಿ ಅವರ ಇಬ್ಬರು ಮಕ್ಕಳು ವಾಸವಾಗಿದ್ದರು. ಆದರೆ, ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕೆಂದು ಅವರಿಬ್ಬರೂ ಆಜಾದ್​ನನ್ನು ಬಿಟ್ಟು ಹೋಗಿದ್ದರು. ಮಕ್ಕಳು ಬೇರೆಡೆ ಹೋದರೂ ಆಜಾದ್​ ಮಾತ್ರ ಪ್ಲಾಸ್ಟಿಕ್​ ಶೀಟ್​ಗಳಿಂದ ನಿರ್ಮಿಸಿದ್ದ ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದ.

Sushma Chakre | news18-kannada
Updated:October 8, 2019, 12:57 PM IST
ಅನಾಥ ಶವವಾಗಿದ್ದ ಲಕ್ಷಾಧಿಪತಿ ಭಿಕ್ಷುಕನ ಆಸ್ತಿಗೀಗ ಐವರು ವಾರಸ್ದಾರರು!
ಭಿಕ್ಷುಕನ ಮನೆಯಲ್ಲಿ ದೊರೆತ ಲಕ್ಷಗಟ್ಟಲೇ ನಾಣ್ಯಗಳು
  • Share this:
ಮುಂಬೈನ ಅಪಘಾತದಲ್ಲಿ ಸಾವನ್ನಪ್ಪಿದ್ದ ಭಿಕ್ಷುಕ ಅನಾಥನೆಂಬ ಕಾರಣಕ್ಕೆ ಆತನ ಸಂಸ್ಕಾರ ಮಾಡಲಾಗಿತ್ತು. ಆ ಭಿಕ್ಷುಕನ ಬಗ್ಗೆ ಏನಾದರೂ ಮಾಹಿತಿ ಸಿಗಬಹುದು ಎಂದು ಆತನ ಬಳಿಯಿದ್ದ ಜೋಳಿಗೆ ಪರೀಕ್ಷಿಸಿದವರಿಗೆ ಅಚ್ಚರಿ ಕಾದಿತ್ತು. ಬಣ್ಣ ಮಾಸಿ, ಕೊಳಚೆಯಲ್ಲಿ ಮುಳುಗಿದ್ದ ಆ ಜೋಳಿಗೆಯಲ್ಲಿ 8.77 ಲಕ್ಷ ಹಣ ಮತ್ತು 1.5 ಲಕ್ಷದಷ್ಟು ನಾಣ್ಯಗಳು ಪತ್ತೆಯಾಗಿತ್ತು.

ಬ್ಯಾಂಕ್​ ಖಾತೆಯನ್ನೂ ಹೊಂದಿದ್ದ ಆ 82 ವರ್ಷದ ಭಿಕ್ಷುಕನ ಹೆಸರು ಬಂಡಿಚಂದ್ ಆಜಾದ್​ . ಈತ ಮುಂಬೈನ ಸ್ಲಂನಲ್ಲಿ ವಾಸವಾಗಿದ್ದ. ಒಂಟಿಯಾಗಿ ವಾಸ ಮಾಡುತ್ತಿದ್ದ ಈತ ರೈಲ್ವೆ ಹಳಿ ದಾಟುವಾಗ ರೈಲಿಗೆ ಸಿಕ್ಕಿ ಮೃತಪಟ್ಟಿದ್ದ.

ಪೊಲೀಸರು ಆತನ ಮನೆಗೆ ಹೋದಾಗ ಪಾನ್ ಕಾರ್ಡ್​, ಆಧಾರ್​ ಕಾರ್ಡ್ ಮತ್ತು ವೋಟರ್ ಐಡಿ ದೊರೆತಿದ್ದವು. ಜೊತೆಗೆ ನ್ಯೂಸ್​ ಪೇಪರ್​ ಮತ್ತು ಪಾಲಿಥೇನ್ ಬ್ಯಾಗ್​ಗಳು ಮನೆ ತುಂಬಾ ಬಿದ್ದಿದ್ದವು. ಆ ಭಿಕ್ಷುಕ ಸಂಗ್ರಹಿಸಿಟ್ಟಿದ್ದ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಪೊಲೀಸರು ಸುಸ್ತಾಗಿದ್ದಾರೆ. ಯಾಕೆಂದರೆ ಮನೆಯಲ್ಲಿ ಒಟ್ಟು 1.5 ಲಕ್ಷದಷ್ಟು ನಾಣ್ಯಗಳು ಪತ್ತೆಯಾಗಿತ್ತು.

ಓಯೋದಲ್ಲಿ ರೂಂ ಬುಕ್ ಮಾಡಿದ್ದ ಹಿಂದು-ಮುಸ್ಲಿಂ ಜೋಡಿ; ಕೊಠಡಿ ನೀಡಲು ನಿರಾಕರಿಸಿದ ಹೋಟೆಲ್ ಸಿಬ್ಬಂದಿ

ಪೊಲೀಸರು ಭಿಕ್ಷುಕನ ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದರು. ಸಾವನ್ನಪ್ಪಿದ ಭಿಕ್ಷುಕನ ಬಳಿ 10 ಲಕ್ಷಕ್ಕೂ ಹೆಚ್ಚು ಹಣವಿದೆ ಎಂಬ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಐವರು ವ್ಯಕ್ತಿಗಳು ತಾವೇ ಆ ಭಿಕ್ಷುಕನ ಮಕ್ಕಳು, ಸೋದರರು ಎಂದು ಹೇಳಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾರೆ. ರಾಜಸ್ಥಾನದ ಹಳ್ಳಿಯೊಂದರ ಐವರು ವ್ಯಕ್ತಿಗಳನ್ನು ತಾವೇ ಆಜಾದ್​ ಅವರ ಮಕ್ಕಳು, ತಮ್ಮಂದಿರು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಪರೀಕ್ಷಿಸಿದ ನಂತರವಷ್ಟೇ ಆ ಹಣ ಮತ್ತು ದಾಖಲೆಗಳನ್ನು ಅವರಿಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಆಜಾದ್​ ಜೊತೆಗೇ ಸ್ಲಂನಲ್ಲಿ ಅವರ ಇಬ್ಬರು ಮಕ್ಕಳು ವಾಸವಾಗಿದ್ದರು. ಆದರೆ, ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕೆಂದು ಅವರಿಬ್ಬರೂ ಆಜಾದ್​ನನ್ನು ಬಿಟ್ಟು ಹೋಗಿದ್ದರು. ಮಕ್ಕಳು ಬೇರೆಡೆ ಹೋದರೂ ಆಜಾದ್​ ಮಾತ್ರ ಪ್ಲಾಸ್ಟಿಕ್​ ಶೀಟ್​ಗಳಿಂದ ನಿರ್ಮಿಸಿದ್ದ ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದ. ಸಾಕಷ್ಟು ವರ್ಷಗಳ ಕಾಲ ಭಿಕ್ಷೆಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ ಆತ ಲಕ್ಷಾಂತರ ರೂ. ಸಂಪಾದಿಸಿದ್ದ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಹಿಂದೂ ದೇವಿಯಾಗಿ ಸಿಂಗಾರಗೊಂಡ ಮುಸ್ಲಿಂ ಬಾಲಕಿ; ಕೊಲ್ಕತ್ತಾದಲ್ಲಿ ಧಾರ್ಮಿಕ ಸಾಮರಸ್ಯಕ್ಕೆ ಭಾರೀ ಮೆಚ್ಚುಗೆಆಜಾದ್​ನ ಮಗ ಎಂದು ಹೇಳಿಕೊಳ್ಳುತ್ತಿರುವ ಸುಖದೇವ್ ಎಂಬ ವ್ಯಕ್ತಿ 'ನಮ್ಮಪ್ಪನ ಬಳಿ ಮೊಬೈಲ್ ಫೋನ್ ಇರಲಿಲ್ಲ. ಅವರು ನಮ್ಮ ಊರಿಗೆ 1995ರಿಂದೀಚೆಗೆ ಭೇಟಿ ನೀಡಿರಲಿಲ್ಲ. ಅಮ್ಮ ತೀರಿಹೋದ ನಂತರ ಅವರು ಊರು ಬಿಟ್ಟು ಸ್ಲಂನಲ್ಲಿ ವಾಸಿಸುತ್ತಿದ್ದರು. ಆದರೆ, ಅವರು ತಪ್ಪದೆ ನಮಗೆ ಪತ್ರ ಬರೆಯುತ್ತಿದ್ದರು. 2010ರ ನಂತರ ನಮಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ' ಎಂದು ಹೇಳಿದ್ದಾರೆ.

ಇನ್ನೋರ್ವ ಮಗ ಎಂದು ಹೇಳಿಕೊಳ್ಳುತ್ತಿರುವ ಸನ್ವರ್ ಮಾಲ್ '2017ರ ನಂತರ ಅಪ್ಪನನ್ನು ನಾನು ಭೇಟಿ ಮಾಡಿರಲಿಲ್ಲ. ಯಾವಾಗಲೂ ತಿರುಗಾಡುತ್ತಲೇ ಇರಬೇಕಾದಂತಹ ಉದ್ಯೋಗದಲ್ಲಿ ನಾನಿದ್ದೆ. ಹೀಗಾಗಿ, ಅಪ್ಪನಿದ್ದಲ್ಲಿಗೆ ಬರಲು ಸಾಧ್ಯವಾಗಿರಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಆಜಾದ್​ ಅವರ ನೆರೆಹೊರೆಯ ಮನೆಯವರು ಹೇಳುವ ಪ್ರಕಾರ ಆಜಾದ್​ಗೆ ಯಾವುದೇ ಕುಟುಂಬಸ್ಥರೂ ಇಲ್ಲ. ಯಾರೂ ಆತನ ಮನೆಗೆ ಬಂದಿದ್ದನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಪೊಲೀಸರು ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.

 

First published:October 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ