Death: ಮನೆಗೆ ಬಿದ್ದ ಬೆಂಕಿ ಐವರನ್ನು ಬಲಿ ಪಡೆಯಿತು! ನೋಡ ನೋಡುತ್ತಿದ್ದಂತೆ ಸುಟ್ಟು ಹೋದ ಕಂದಮ್ಮ

ಅದೇ ಕೊನೆಯ ಊಟ, ಕೊನೆಯ ನಿದ್ದೆ ಅಂತ ಅವರಿಗೆ ಗೊತ್ತೇ ಇರಲಿಲ್ಲ. ಉಂಡು ಮಲಗಿದವರ ಮೇಲೆ ವಿಧಿ ಅಟ್ಟಹಾಸ ಮೆರೆದಿತ್ತು. ಮಲಗಿದ್ದವರು ಕೋಣೆಯಲ್ಲೇ ಸುಟ್ಟು ಹೋಗಿದ್ದರು. ಐವರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ನಾಲ್ವರ ಜೊತೆ ಪುಟ್ಟ ಕಂದಮ್ಮ ಕೂಡ ಬೆಂಕಿಯಲ್ಲಿ ಬೆಂದು ಹೋಗಿತ್ತು. ಒಬ್ಬ ಮಾತ್ರ ಬದುಕಿದ್ದು, ಆತನೂ ಈಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಮಗು ಸೇರಿ ಒಂದೇ ಮನೆಯ ಐವರ ಸಾವು

ಮಗು ಸೇರಿ ಒಂದೇ ಮನೆಯ ಐವರ ಸಾವು

  • Share this:
ಕೇರಳ: ಅವರದ್ದು ಸುಖೀ ಕುಟುಂಬ (Family), ಅಪ್ಪ (Father), ಅಮ್ಮ (Mother), ಮಗ (Son), ಸೊಸೆ (Daughter In Law), ಮೊಮ್ಮಗು (Grand Son) ಹಾಗೂ ಇನ್ನೋರ್ವ ಮಗ ಇರುವಂತ ಕುಟುಂಬ. ಸಾಕಷ್ಟು ಅನುಕೂಲವಂತರೇ ಆಗಿದ್ದ ಅವರೆಲ್ಲ ಅನ್ಯೋನ್ಯವಾಗಿ, ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಾ ಇದ್ದರು. ನಿನ್ನೆ ಎಂದಿನಂತೆ ರಾತ್ರಿ (Night) ಊಟ (Dinner) ಮಾಡುತ್ತಾ, ಕಷ್ಟ ಸುಖ ಹಂಚಿ ಕೊಂಡಿದ್ದರು. ಊಟ ಮಾಡಿದ ಬಳಿಕ ತಮ್ಮ ತಮ್ಮ ಕೋಣೆಯಲ್ಲಿ (Room) ಹೋಗಿ ಮಲಗಿದ್ದರು. ಆದರೆ ಅದೇ ಕೊನೆಯ ಊಟ, ಕೊನೆಯ ನಿದ್ದೆ ಅಂತ ಅವರಿಗೆ ಗೊತ್ತೇ ಇರಲಿಲ್ಲ. ಉಂಡು ಮಲಗಿದವರ ಮೇಲೆ ವಿಧಿ ಅಟ್ಟಹಾಸ ಮೆರೆದಿತ್ತು. ಮಲಗಿದ್ದವರು ಕೋಣೆಯಲ್ಲೇ ಸುಟ್ಟು (Burn) ಹೋಗಿದ್ದರು. ಐವರ ಶವಗಳು (Dead Body) ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ನಾಲ್ವರ ಜೊತೆ ಪುಟ್ಟ ಕಂದಮ್ಮ (Baby) ಕೂಡ ಬೆಂಕಿಯಲ್ಲಿ ಬೆಂದು ಹೋಗಿತ್ತು. ಒಬ್ಬ ಮಾತ್ರ ಬದುಕಿದ್ದು, ಆತನೂ ಈಗ ಆಸ್ಪತ್ರೆಯಲ್ಲಿ (Hospital) ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಒಂದೇ ಕ್ಷಣದಲ್ಲಿ ತುಂಬಿದ ಮನೆ ಸ್ಮಶಾನದಂತೆ ಆಗಿದ್ದಕ್ಕೆ ಜನರೆಲ್ಲ ಮಮ್ಮಲ ಮರುಗುತ್ತಿದ್ದಾರೆ.

ಈ ಘೋರ ಘಟನೆ ನಡೆದಿದ್ದು ಎಲ್ಲಿ?

ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಸುಮಾರು 45 ಕಿಮೀ ದೂರದಲ್ಲಿರುವ ವರ್ಕಳದ ದಳವಪುರಂ ಎಂಬಲ್ಲಿ ಇಂಥದ್ದೊಂದು ಘೋರ ಘಟನೆ ನಡೆದು ಹೋಗಿದೆ. ಇಲ್ಲಿನ ಮನೆಯೊಂದರಲ್ಲಿ ಮಲಗಿದ್ದ ಪುಟ್ಟ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆಯಲ್ಲಿ ಮೃತರಾದವರ ವಿವರ

ಮೃತರನ್ನು ಮನೆಯ ಯಜಮಾನ, 62 ವರ್ಷದ ಪ್ರತಾಪನ, ಅವರ ಪತ್ನಿ 52 ವರ್ಷದ ಶೆರ್ಲಿ, ಸೊಸೆ, 25 ವರ್ಷದ ಅಭಿರಾಮಿ), ಕಿರಿಯ ಮಗ, 29 ವರ್ಷದ ಅಖಿಲ್ ಹಾಗೂ ಅವರ ಎಂಟು ತಿಂಗಳ ಮಗ ರಿಯಾನ್ ಎಂದು ಗುರುತಿಸಲಾಗಿದೆ.

ಇನ್ನು ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪ್ರತಾಪನ್ ಅವರು ತರಕಾರಿ ವ್ಯಾಪಾರಿಯಾಗಿದ್ದರು. ಅವರು ವರ್ಕಲಾದಲ್ಲಿ ಕೆಲವು ಸಮಯದಿಂದ ವ್ಯಾಪಾರ ಮಾಡುತ್ತಾ, ಅನುಕೂಲವಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Viral News: 5 ವರ್ಷದ ವಿದ್ಯಾರ್ಥಿ ಹೊಡೆದಿದ್ದಕ್ಕೆ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದೇ ಹೋದ್ರಂತೆ! ಯಾರಪ್ಪ ಆ ಶಿಷ್ಯ?

ತಡರಾತ್ರಿ 1.30ರ ಸುಮಾರಿಗೆ ಘಟನೆ

ಮನೆಯವರೆಲ್ಲ ರಾತ್ರಿ ಊಟ ಮಾಡಿ, ತಮ್ಮ ತಮ್ಮ ಕೋಣೆಯಲ್ಲಿ ಮಲಗಿದ್ದರು. ತಡರಾತ್ರಿ 1.30ರ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಎರಡನೇ ಮಹಡಿವರೆಗೂ ಬೆಂಕಿ ವ್ಯಾಪಿಸಿದೆ. ಬೆಂಕಿಯ ರಭಸದಿಂದ ಹೊಗೆ ಮನೆಯಲ್ಲೆಲ್ಲ ಆವರಿಸಿದ್ದು, ಉಸಿರಾಡಲಾಗದೇ ಐವರು ಸತ್ತಿದ್ದಾರೆ ಎನ್ನಲಾಗಿದೆ.

ಅಗ್ನಿಯ ಜ್ವಾಲೆಗಳು ಬಲು ಬೇಗನೆ ಎರಡು ಮಹಡಿಯ ಮನೆಯನ್ನು ಆವರಿಸಿಕೊಂಡಿದೆ. ಅದರ ರಭಸಕ್ಕೆ ಮನೆಯ ಒಳಾಂಗಣ ಸಂಪೂರ್ಣವಾಗಿ ಭಸ್ಮವಾಗಿದೆ.

ಪಕ್ಕದ ಮನೆಯವರಿಂದ ಮಾಹಿತಿ

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಕ್ಕದ ಮನೆಯವರು ನೋಡಿದ್ದಾರೆ. ಕೂಡಲೇ ವ್ಯಕ್ತಿಯೊಬ್ಬರು ಸುತ್ತಮುತ್ತಲ ಮನೆಯ ಜನರನ್ನು ಎಬ್ಬಿಸಿ ಮಾಹಿತಿ ನೀಡಿದರು. ಕೂಡಲೇ ಅದೇ ಮನೆಯ ನಿಹುಲ್ ಅವರಿಗೆ ಕರೆ ಮಾಡಿ ಎಚ್ಚರಿಸಿದರು. ಜೊತೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬರುವಾಗ ಮನೆ ಬೆಂಕಿಗೆ ಆಹುತಿಯಾಗಿತ್ತು.

ಮಗು ರಕ್ಷಿಸಲು ಹೋಗಿ ಗಾಯಗೊಂಡ ಯುವಕ

ಮನೆಯ ಮಹಡಿಯಲ್ಲಿದ್ದ ನಿಹುಲ್ ಕೆಳಗೆ ಬರಲು ಪ್ರಯತ್ನಿಸಿದರು. ಆದರೆ ತಮ್ಮ ಎಂಟು ತಿಂಗಳ ಮಗುವನ್ನು ಕಾಪಾಡಲು ಮತ್ತೆ ಒಳಗೆ ಓಡಿದ್ದರು. ಹೀಗಾಗಿ ಅವರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾದ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: Mysuru: ಬಿಟ್ ಹೋಗಬೇಡ, ನನ್ನನ್ನ ಬಿಟ್ ಹೋಗಬೇಡ: ಕಣ್ಮುಂದೆ ಪತ್ನಿಯನ್ನ ಕರ್ಕೊಂಡು ಹೋದ್ರು: ಬಿಕ್ಕಿ ಬಿಕ್ಕಿ ಅತ್ತ ಪತಿ

 ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಶಂಕೆ

ಇನ್ನು ಆಕಸ್ಮಿಕ ಬೆಂಕಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಎಲೆಕ್ಟ್ರಿಕಲ್ ಮತ್ತು ಫೋರೆನ್ಸಿಕ್ ತಜ್ಞರ ವರದಿ ಪಡೆದ ನಂತರವೇ ನಿಖರ ಕಾರಣವನ್ನು ಕಂಡುಹಿಡಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Published by:Annappa Achari
First published: