ಅಸ್ಸಾಂನಲ್ಲಿ ಸಿಲಿಂಡರ್​ ಸ್ಫೋಟ; ಒಂದೇ ಕುಟುಂಬದ ಐವರು ಸಾವು

ಮೇಣದ ಬತ್ತಿಯಿಂದ ಬಿದಿರಿನ ಮನೆಗೆ ಬೆಂಕಿ ಬಿದ್ದು, ಬಳಿಕ ಸಿಲಿಂಡರ್ ಸ್ಪೋಟವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬೆಂಕಿಯಿಂದಲೇ ಸಿಲಿಂಡರ್ ಬ್ಲಾಸ್ಟ್​ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latha CG | news18-kannada
Updated:October 19, 2019, 3:47 PM IST
ಅಸ್ಸಾಂನಲ್ಲಿ ಸಿಲಿಂಡರ್​ ಸ್ಫೋಟ; ಒಂದೇ ಕುಟುಂಬದ ಐವರು ಸಾವು
ಸಿಲಿಂಡರ್ ಸ್ಫೋಟ
  • Share this:
ಅಸ್ಸಾಂ(ಅ.19): ಎಲ್​ಪಿಜಿ ಸಿಲಿಂಡರ್​ ಸ್ಪೋಟವಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಅಸ್ಸಾಂನ ದಿಬ್ರುಘರ್​​ನಲ್ಲಿ ನಡೆದಿದೆ.

ಕಳೆದ ಮಧ್ಯರಾತ್ರಿ 1 ಗಂಟೆಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮೂರು ಮನೆಗಳು ಹಾನಿಯಾಗಿವೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಐದು ಮಂದಿ ಮೃತಪಟ್ಟಿದ್ದಾರೆ ಎಂದು ದಿಬ್ರುಘರ್ ಎಸ್​ಪಿ ಗೌತಮ್​ ಹೇಳಿದ್ದಾರೆ.

ಈ ಘಟನೆ ಸಂಭವಿಸಿದಾಗ ಮನೆ ಮಾಲೀಕ ಕೃಷ್ಣ ಸುನಾರ್​ ಮನೆಯಲ್ಲಿರಲಿಲ್ಲ. ದುರಂತದಲ್ಲಿ ಕೃಷ್ಣನ ಪತ್ನಿ ಮಾಯಾ ಸುನಾರ್, ಮಗ ವಿಶಾಲ್ ಸುನಾರ್​, ಇಬ್ಬರು ಮೊಮ್ಮಕ್ಕಳು ಹಾಗೂ 50 ವರ್ಷದ ಮನೆಗೆಲಸದಾಕೆ ಅಸುನೀಗಿದ್ದಾರೆ.

ಹಿಂದೂ ಹೋರಾಟಗಾರ ಕಮಲೇಶ್ ತಿವಾರಿ ಹತ್ಯೆಗೆ ಹೊಸ ಟ್ವಿಸ್ಟ್; ಬಿಜೆಪಿ ನಾಯಕನತ್ತ ಬೊಟ್ಟು ಮಾಡಿದ ತಾಯಿ

ಮೇಣದ ಬತ್ತಿಯಿಂದ ಬಿದಿರಿನ ಮನೆಗೆ ಬೆಂಕಿ ಬಿದ್ದು, ಬಳಿಕ ಸಿಲಿಂಡರ್ ಸ್ಪೋಟವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬೆಂಕಿಯಿಂದಲೇ ಸಿಲಿಂಡರ್ ಬ್ಲಾಸ್ಟ್​ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿದ್ದಾರೆ.

ಅಸ್ಸಾಂ ಸಿಎಂ ಸರ್ಬಾನಂದ ಸೋನೋವಲ್​ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತರ ಸಂಬಂಧಿಕರಿಗೆ 4 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.ಚುನಾವಣೆಯಲ್ಲಿ ಜನರು ಅಭಿವೃದ್ಧಿ ನೋಡಿ ಮತ ಹಾಕಿಲ್ಲ: ದಿನೇಶ್ ಗುಂಡೂರಾವ್​​

First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading