ನ್ಯೂಜಿಲೆಂಡ್ ಮಸೀದಿಗಳ ಮೇಲೆ ಉಗ್ರ ದಾಳಿ: ಭಾರತೀಯ ಮೂಲದ ಐವರು ಸಾವು

ನ್ಯೂಜಿಲೆಂಡ್ ಪೊಲೀಸರು ಇಂದು ಬೆಳಗಿನ ಜಾವ ಈ ಬಗ್ಗೆ ಮಾಹಿತಿ ನೀಡಿದ್ದು, ಉಗ್ರರ ದಾಳಿಯಿಂದ 50 ಜನರು ಮೃತ ಪಟ್ಟಿದ್ದಾರೆ. ಇದರಲ್ಲಿ ಐವರು ಭಾರತೀಯರಾಗಿದ್ದಾರೆ ಎಂದು ಖಚಿತ ಪಡಿಸಿದ್ದಾರೆ.

Vinay Bhat | news18
Updated:March 17, 2019, 9:12 AM IST
ನ್ಯೂಜಿಲೆಂಡ್ ಮಸೀದಿಗಳ ಮೇಲೆ ಉಗ್ರ ದಾಳಿ: ಭಾರತೀಯ ಮೂಲದ ಐವರು ಸಾವು
(ಸಾಂದರ್ಭಿಕ ಚಿತ್ರ)
  • News18
  • Last Updated: March 17, 2019, 9:12 AM IST
  • Share this:
ವೆಲ್ಲಿಂಗ್ಟನ್ (ಮಾ. 17): ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ನಲ್ಲಿರುವ ಎರಡು ಮಸೀದಿಗಳ ಮೇಲೆ ನಡೆದ ಉಗ್ರರ ದಾಳಿ ಘಟನೆಯಲ್ಲಿ ಸಾವಿನ ಸಂಖ್ಯೆ 50ಕ್ಕೆ ಏರಿದೆ.

ಇನ್ನೂ ಬಹಳಷ್ಟು ಮಂದಿ ಈ ಘಟನೆಯ ನಂತರ ಕಾಣೆಯಾಗಿದ್ದು ಸುಳಿವೇ ಸಿಕ್ಕಿಲ್ಲ. ಇವರ ಪೈಕಿ ಭಾರತೀಯ ಮೂಲದವರಾದ 9ಕ್ಕೂ ಹೆಚ್ಚು ಜನರೂ ನಾಪತ್ತೆಯಾಗಿರುವ ವಿಚಾರ ತಿಳಿದುಬಂದಿತ್ತು. ನ್ಯೂಜಿಲೆಂಡ್​ನಲ್ಲಿ ಭಾರತದ ರಾಯಭಾರಿಯಾಗಿರುವ ಸಂಜೀವ್ ಕೊಹ್ಲಿ ಅವರೇ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಮೂಲದವರು ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದರು.

ನ್ಯೂಜಿಲೆಂಡ್ ಪೊಲೀಸರು ಇಂದು ಬೆಳಗಿನ ಜಾವ ಈ ಬಗ್ಗೆ ಮಾಹಿತಿ ನೀಡಿದ್ದು, ಉಗ್ರರ ದಾಳಿಯಿಂದ 50 ಜನರು ಮೃತ ಪಟ್ಟಿದ್ದಾರೆ. ಇದರಲ್ಲಿ ಐವರು ಭಾರತೀಯರು ಎಂದು ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ಮಸೀದಿಗಳ ಮೇಲೆ ಉಗ್ರ ದಾಳಿ ಘಟನೆ: ಭಾರತೀಯ ಮೂಲದ 9ಕ್ಕೂ ಹೆಚ್ಚು ವ್ಯಕ್ತಿಗಳು ಕಾಣೆ

ಭಾರತೀಯರಾದ ಮಹೇಬೂಬ್ ಖೋಖರ್, ರಮೀಜ್ ವೊರಾ, ಆಸೀಫ್ ವೋರಾ ಹಾಗೂ ಓಝೈರ್ ಕದಿರ್ ಮೃತಪಟ್ಟ ವ್ಯಕ್ತಿಗಳು ಎಂದು ಭಾರತದ ರಾಯಭಾರಿ ತಿಳಿಸಿದೆ.

  

ಈಗಾಗಲೇ ನ್ಯೂಜಿಲೆಂಡ್ ಪೊಲೀಸರು ದಾಳಿಕೊರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಈ ದಾಳಿ ನಡೆಸಿದ್ದು, ನಗರದ ಮಧ್ಯಭಾಗದಲ್ಲಿರುವ ಅಲ್ ನೂರ್ ಮಸೀದಿ ಹಾಗೂ ಹೊರವಲಯದಲ್ಲಿರುವ ಲಿನ್​ವುಡ್ ಮಸೀದಿಯ ಮೇಲೆ ಉಗ್ರರು ಗನ್ ದಾಳಿ ನಡೆಸಿದ್ದರು. ಹೆಲ್ಮೆಟ್​ಗೆ ಕ್ಯಾಮೆರಾ ಫಿಕ್ಸ್ ಮಾಡಿಕೊಂಡಿದ್ದ ಉಗ್ರರು ಫೇಸ್​ಬುಕ್​ನಲ್ಲಿ ದಾಳಿಯ ನೇರ ಪ್ರಸಾರ ಕೂಡ ಮಾಡಿದ್ದರು.

ಪೊಲೀಸರು ಓರ್ವ ಮಹಿಳೆ ಸೇರಿದಂತೆ ನಾಲ್ವರು ಶಂಕಿತ ದಾಳಿಕೋರರನ್ನು ಬಂಧಿಸಿದ್ದಾರೆ. ಈ ಕೃತ್ಯವೆಸಗುವುದಕ್ಕೋಸ್ಕರವೇ ಆತ ತರಬೇತಿ ಪಡೆದು ನ್ಯೂಜಿಲೆಂಡ್​ಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಏನಾದರೂ ಮಾಹಿತಿ ಬೇಕಿದ್ದರೆ ಅಥವಾ ಮಾಹಿತಿ ನೀಡಬೇಕಿದ್ದರೆ 021803899 ಮತ್ತು 021850033 ನಂಬರ್​ಗಳನ್ನು ಸಂಪರ್ಕಿಸುವಂತೆ ಭಾರತದ ರಾಯಭಾರಿಗಳು ಮನವಿ ಮಾಡಿಕೊಂಡಿದ್ದಾರೆ.

 First published:March 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading