ಅತಿ ಹೆಚ್ಚು ವೇತನ ಪಾವತಿಸುವ ವಿಶ್ವದ ಟಾಪ್​ 5 ಕಂಪನಿಗಳು

news18
Updated:October 7, 2018, 3:52 PM IST
ಅತಿ ಹೆಚ್ಚು ವೇತನ ಪಾವತಿಸುವ ವಿಶ್ವದ ಟಾಪ್​ 5 ಕಂಪನಿಗಳು
news18
Updated: October 7, 2018, 3:52 PM IST
-ನ್ಯೂಸ್ 18 ಕನ್ನಡ

ಪ್ರತಿಯೊಬ್ಬರಿಗೂ ಆಕರ್ಷಕ ಸಂಬಳಗಳಿಸುವ ಮತ್ತು ಕಂಪನಿಗಳಲ್ಲಿ ಉನ್ನತ ಸ್ಥಾನಮಾನಕ್ಕೇರುವ ಕನಸಗಳಿರುತ್ತದೆ. ವಿಶ್ವದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಲಕ್ಷ, ಕೋಟಿ ವೇತನ ಪಡೆಯುವ ಉದ್ಯೋಗಿಗಳ ಬಗ್ಗೆ ಕೇಳಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಂಶೋಧನಾ ಕ್ಷೇತ್ರದ ಕಂಪನಿಗಳಲ್ಲಿ ಅತಿ ಹೆಚ್ಚಿನ ವೇತನ ಪ್ಯಾಕೇಜುಗಳನ್ನು ನೀಡಲಾಗುತ್ತಿದೆ. ಈ ವರ್ಷದಲ್ಲಿ ಅತಿ  ಹೆಚ್ಚು ವೇತನ ಪಾವತಿಸಿರುವ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಿಶ್ವದಲ್ಲೇ ಅತ್ಯಧಿಕ ವೇತನ ಪ್ಯಾಕೇಜ್ ನೀಡುವ ಕಂಪನಿಗಳಿಗೆ ಕ್ರಮವಾಗಿ ಶ್ರೇಯಾಂಕ ನೀಡಲಾಗಿದೆ. 2017ರ ಸೆಪ್ಟೆಂಬರ್​ನಿಂದ 2018ರ ಸೆಪ್ಟೆಂಬರ್​ವರೆಗಿನ ಅವಧಿಯ ಸಾಲೆರಿ ಪ್ಯಾಕೇಜ್ ಆಧರಿಸಿ ಈ ರೇಟಿಂಗ್​ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಯಾವ ಕಂಪನಿಗಳು ಮತ್ತು ಎಷ್ಟು ಸರಾಸರಿ ಪ್ಯಾಕೇಜ್ ನೀಡಲಾಗುತ್ತಿದೆ ಎಂಬುದರ ಕುರಿತು ಇಲ್ಲಿ ತಿಳಿಸಲಾಗಿದೆ.

ಗೂಗಲ್ : ಈ ಪಟ್ಟಿಯಲ್ಲಿ ವಿಶ್ವದ ಅತಿದೊಡ್ಡ ಸರ್ಚ್​ ಇಂಜಿನ್ ಕಂಪನಿ ಗೂಗಲ್ ಮೊದಲ ಸ್ಥಾನ ಅಂಗೀಕರಿಸಿದೆ. ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿ ಇದರ ಮುಖ್ಯ ಕಚೇರಿಯಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಇಂಜಿನಿಯರ್​​ ಉದ್ಯೋಗಿಗಳು ಅತಿ ಹೆಚ್ಚು ಸಂಬಳ ಪಡೆಯುತ್ತಾರೆ. ಇಲ್ಲಿರುವ ಉದ್ಯೋಗಿಗಳು ಕನಿಷ್ಠ ಅಂದರೂ 1.19 ಕೋಟಿ ರೂ. ವೇತನವನ್ನು ಪಡೆಯುತ್ತಾರೆ. ಅಲ್ಲದೆ ಉದ್ಯೋಗಿಗಳಿಗೆ ಅತ್ಯುತ್ತಮ ಸಂಬಳದ ಪ್ಯಾಕೇಜ್ ನೀಡುವುದರಲ್ಲೂ ಗೂಗಲ್ ಸಂಸ್ಥೆ ಸದಾ ಮುಂದಿದೆ ಎನ್ನಲಾಗಿದೆ.

ಫೇಸ್​ಬುಕ್: ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿ ಫೇಸ್​ಬುಕ್ ಈ ಪಟ್ಟಿಯಲ್ಲಿ 2ನೇ ಶ್ರೇಯಾಂಕ ಪಡೆದಿದೆ. ಇಲ್ಲಿನ ಪ್ರೊಡಕ್ಟ್​ ಡಿಪಾರ್ಟ್​ಮೆಂಟ್​ ಉದ್ಯೋಗಿಗಳಿ ಆಕರ್ಷಕ ವೇತನ ಪ್ಯಾಕೇಜ್ ನೀಡಲಾಗುತ್ತಿದೆ. ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರ ಸರಾಸರಿ ವೇತನವು 1.15 ಕೋಟಿ ರೂ. ಎಂದು ಹೇಳಲಾಗಿದೆ. ಈ ಕಂಪನಿಯ ಉದ್ಯೋಗಿಗಳೊಂದಿಗೆ ನಡೆಸಿದ ಸಮೀಕ್ಷೆ ಪ್ರಕಾರ, ಫೇಸ್​ಬುಕ್ ಸಂಸ್ಥೆ ವೇತನ ಪ್ಯಾಕೇಜ್ ಅಲ್ಲದೆ, ಇನ್ನಿತರ ಪ್ಯಾಕೇಜ್​ಗಳ​ ಸೌಲಭ್ಯಗಳನ್ನು ಒದಗಿಸುತ್ತಿದೆ.

ಸೇಲ್ಸ್​ಫೋರ್ಸ್​: ಇದೊಂದು ಕ್ಲೌಡ್ ಕಂಪ್ಯೂಟಿಂಗ್ ಕಂಪನಿಯಾಗಿದ್ದು, ಇಲ್ಲಿನ ಉದ್ಯೋಗಿಗಳೂ ಕೂಡ ಆಕರ್ಷಕ ಸಂಬಳ ಪಡೆಯುತ್ತಿದ್ದಾರೆ. ವಿಶ್ವದ ಅತ್ಯುತ್ತಮ ಸಾಲೆರಿ ಪಾಕೇಜ್​ನಲ್ಲಿ ಮೂರನೇ ಸ್ಥಾನ ಪಡೆದಿರುವ ಸೇಲ್ಸ್​ಪೋರ್ಸ್​ ಸಂಸ್ಥೆಯ ಬಿಸಿನೆಸ್​ ಡೆವಲಪ್​ಮೆಂಟ್​ ಉದ್ಯೋಗಿಗಳಿಗೆ 1.13 ಕೋಟಿ ಸರಾಸರಿ ವೇತನ ಕೊಡಲಾಗುತ್ತಿದೆ. ಹಾಗೆಯೇ ಕಂಪನಿಯು ಇತ್ತೀಚಿನ ದಿನಗಳಲ್ಲಿ ಉತ್ತಮ ಲಾಭದಲ್ಲಿದ್ದು,ನೌಕರರ ವೇತನ ಇನ್​ಕ್ರಿಮೆಂಟ್ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸೇಲ್ಸ್​ಫೋರ್ಸ್​ ಸಂಸ್ಥೆ ಇತ್ತೀಚೆಗಷ್ಟೇ ಟೈಮ್ಸ್​ ಮ್ಯಾಗಜಿನ್​ ಸಂಸ್ಥೆಯನ್ನು ಖರೀದಿಸಿದೆ.

ಮೈಕ್ರೋಸಾಫ್ಟ್​: ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ ಮೈಕ್ರೋಸಾಫ್ಟ್​ ಕೂಡ ತನ್ನ ಇಲಾಖೆಯ ನೌಕರರಿಗೆ ಹೆಚ್ಚಿನ ಸಂಬಳವನ್ನು ನೀಡುತ್ತಿದೆ. ಅತ್ಯಧಿಕ ವೇತನ ನೀಡುತ್ತಿರುವ ಪಟ್ಟಿಯಲ್ಲಿ ಮೈಕ್ರೋಸಾಫ್ಟ್​ ನಾಲ್ಕನೇ ಸ್ಥಾನದಲ್ಲಿದ್ದು, ಇಲ್ಲಿ ಸರಾಸರಿ 1.12 ಕೋಟಿ ವೇತನ ನೀಡಲಾಗುತ್ತಿದೆ. ಈ ಕಂಪನಿಯಲ್ಲಿ ಸಾಫ್ಟ್​ವೇರ್, ಪಿಸಿ, ಮತ್ತು ವಿಡಿಯೋ ಗೇಮ್​ ಕನ್ಸೋಲ್​ಗಳನ್ನು ನಿರ್ಮಿಸುವ ಉದ್ಯೋಗಳ ಸಮಯವನ್ನು ಪರಿಗಣಿಸಲಾಗುವುದಿಲ್ಲ, ಬದಲಾಗಿ ಉದ್ಯೋಗಿಗಳ ಕಾರ್ಯ ವೈಖರಿಯ ಔಟ್​ಪುಟ್​ ನೋಡಿ ಸಂಬಳಗಳನ್ನು ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
Loading...

ನೆಟ್​ಫ್ಲಿಕ್ಸ್​: ಅಮೆರಿಕದ ರೀಡ್​ ಹೇಸ್ಟಿಂಗ್ಸ್​ ಮತ್ತು ಮಾರ್ಷ್​ ರಾಂಡೋಲ್ಟ್  ನೆಟ್​ಫ್ಲಿಕ್ಸ್​ ಎಂಬ ಮಾಧ್ಯಮ ಸಂಸ್ಥೆಯನ್ನು ​ಸ್ಥಾಪಿಸಿದ್ದಾರೆ. ಈ ಕಂಪನಿಯ ಪ್ರಧಾನ ಕಾರ್ಯಾಲಯವು ಕ್ಯಾಲಿಫೋರ್ನಿಯಾದಲ್ಲಿದೆ. ಇಲ್ಲಿ ಕಾರ್ಯನಿರ್ವಹಿಸುವ ಇಂಜಿನಿಯರಿಂಗ್ ಇಲಾಖೆಯ ನೌಕರರಿಗೆ 1.12 ಕೋಟಿ ವೇತನ ನೀಡಲಾಗುತ್ತಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲೂ ಛಾಪು ಮೂಡಿಸಿರುವ ನೆಟ್​ಫ್ಲಿಕ್ಸ್​ ವಿಶ್ವದಾದ್ಯಂತ ಆನ್​​ಲೈನ್ ಸಿರೀಸ್​ ಮೂಲಕ ಅಪಾರ ಲಾಭಗಳಿಸುತ್ತಿರುವ ಸಂಸ್ಥೆಯಾಗಿದೆ. ಇಲ್ಲಿನ ಉದ್ಯೋಗಿಗಳ ಪ್ರಕಾರ ಕ್ರಿಯೇಟಿವಿಟಿಗೆ ಅನುಗುಣವಾಗಿ ಇಲ್ಲಿ ವೇತನವನ್ನು ನಿರ್ಧರಿಸಲಾಗುತ್ತದೆ.
First published:October 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626