• Home
  • »
  • News
  • »
  • national-international
  • »
  • Biriyani: ಬಿರಿಯಾನಿ ಪಾರ್ಸೆಲ್‌ ತಗೊಂಡು ಹಣ ನೀಡದೇ ಕಿರಿಕ್! ಹೋಟೆಲ್‌ನಲ್ಲಿದ್ದವ್ರ ಮೇಲೆ ಬಿಸಿ ಎಣ್ಣೆ ಎರಚಿದ ಪಾಪಿಗಳು

Biriyani: ಬಿರಿಯಾನಿ ಪಾರ್ಸೆಲ್‌ ತಗೊಂಡು ಹಣ ನೀಡದೇ ಕಿರಿಕ್! ಹೋಟೆಲ್‌ನಲ್ಲಿದ್ದವ್ರ ಮೇಲೆ ಬಿಸಿ ಎಣ್ಣೆ ಎರಚಿದ ಪಾಪಿಗಳು

ಘಟನೆಯ ಫೋಟೋ

ಘಟನೆಯ ಫೋಟೋ

ನಾಲ್ಕು ಪ್ಯಾಕೆಟ್ ಬಿರಿಯಾನಿ ಪಡೆದು ಹಣ ನೀಡದೇ ಹೋಟೆಲ್ ಮಾಲೀಕರೊಂದಿಗೆ ದುಷ್ಕರ್ಮಿಗಳು ತಕರಾರು ಮಾಡಿದ್ದಾರೆ. ನಂತರ ರಾತ್ರಿ 11.15ರ ಸುಮಾರಿಗೆ ಕುಡಿದ ಅಮಲಿನಲ್ಲಿ ಮತ್ತಿಬ್ಬರು ಸ್ನೇಹಿತರೊಂದಿಗೆ ಅಜಿತ್​ ಮತ್ತು ಕಾರ್ತಿಕ್ ರೆಸ್ಟೋರೆಂಟ್​ಗೆ ಮತ್ತೆ ವಾಪಸ್ ಬಂದಿದ್ದಾರೆ. ಈ ವೇಳೆ ಏಕಾಏಕಿ ಮಾಲೀಕ, ಆತನ ಮಗ ಹಾಗೂ ಅಲ್ಲಿನ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Tamil Nadu, India
  • Share this:

ಚೆನ್ನೈ: ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳು ಬಿಸಿ, ಬಿಸಿ  ಎಣ್ಣೆ (Hot Oil) ಎರಚಿ ಮೂವರು ಗಾಯಗೊಂಡಿರುವ ಘಟನೆ ತಮಿಳುನಾಡಿನ (Tamilnadu) ಚೆಂಗಲ್‌ಪಟ್ಟು (Chengalpattu) ಬಳಿಯ ರೆಸ್ಟೊರೆಂಟ್‌ವೊಂದರಲ್ಲಿ (R estaurant) ನಡೆದಿದೆ. ಈ ಘಟನೆಯ ವೀಡಿಯೋ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೆಲೈಯೂರ್ (Selaiyur) ಸಮೀಪದ ಮಡಂಬಾಕ್ಕಂನಲ್ಲಿ (Madambakkam) ಈ ಘಟನೆ ನಡೆದಿದೆ. ಅಜಿತ್ ಮತ್ತು ಕಾರ್ತಿಕ್ ಎಂಬ ಇಬ್ಬರು ವ್ಯಕ್ತಿಗಳು ಬೆಳಗ್ಗೆ 10.30ರ ಸುಮಾರಿಗೆ ನಾಲ್ಕು ಪ್ಯಾಕೆಟ್ ಚಿಕನ್ ರೈಸ್ ಕೇಳಿಕೊಂಡು ಫಾಸ್ಟ್ ಫುಡ್ ಜಾಯಿಂಟ್ ಗೆ ಬಂದಿದ್ದರು. ಈ ವೇಳೆ ನಾಲ್ಕು ಪ್ಯಾಕೆಟ್ ಚಿಕನ್ ರೈಸ್ ನೀಡುವಂತೆ ಹೇಳಿದ್ದಾರೆ. ಹೀಗಾಗಿ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಸಿಬ್ಬಂದಿ ಹಣ ನೀಡುವಂತೆ ಕೇಳಿದ್ದಾರೆ. ಆಗ ಇಬ್ಬರು ಹಣ ನೀಡಲು ನಿರಾಕರಿಸಿ, ಮುಂದಿನ ಬಾರಿ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ರೆಸ್ಟೋರೆಂಟ್ ಮಾಲೀಕ ಬಿರಿಯನ್ನು ಹಿಂಪಡೆದು ಬೈದು ಕಳುಹಿಸಿದ್ದಾರೆ.


ಕುಡಿದ ಮತ್ತಿನಲ್ಲಿ ಮತ್ತಿಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಆರೋಪಿಗಳು


ನಂತರ ರಾತ್ರಿ 11.15ರ ಸುಮಾರಿಗೆ ಕುಡಿದ ಅಮಲಿನಲ್ಲಿ ಮತ್ತಿಬ್ಬರು ಸ್ನೇಹಿತರೊಂದಿಗೆ ಅಜಿತ್​ ಮತ್ತು ಕಾರ್ತಿಕ್ ರೆಸ್ಟೋರೆಂಟ್​ಗೆ ಮತ್ತೆ ವಾಪಸ್ ಬಂದಿದ್ದಾರೆ. ಈ ವೇಳೆ ಏಕಾಏಕಿ ಮಾಲೀಕ, ಆತನ ಮಗ ಹಾಗೂ ಅಲ್ಲಿನ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದಂತೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಒಲೆಯ ಮೇಲಿದ್ದ ಕಾದ ಎಣ್ಣೆಯನ್ನು ಕೌಂಟರ್ ಬಳಿ ನಿಂತಿದ್ದ ಮಾಲೀಕ, ಆತನ ಮಗ ಹಾಗೂ ಕಾರ್ಮಿಕರೊಬ್ಬರ ಮೇಲೆ ಎಸೆದಿದ್ದಾನೆ. ಅಷ್ಟೇ ಅಲ್ಲದೇ ಸ್ಟೌ ಮತ್ತು ಪಾತ್ರೆಗಳನ್ನು ಕೌಂಟರ್ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಈ ಘಟನಾ ದೃಶ್ಯ  ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು


ಬಳಿಕ ಘಟನೆ ಕುರಿತಂತೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸೆಲೈಯೂರು ಪೊಲೀಸರು ನೇಪಾಳ ಮೂಲದ 59 ವರ್ಷದ ಜಯಮಣಿ, ಅವರ 29 ವರ್ಷದ ಮಗ ಮಣಿಕಂದನ್ ಮತ್ತು 29 ವರ್ಷದ ಉದ್ಯೋಗಿ ನೇಮರಾಜ್ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಮಡಂಬಾಕ್ಕಂನ ಅಜಿತ್, ಕಾರ್ತಿಕ್ ಅಲಿಯಾಸ್ ಹರಿಹರನ್, ಪ್ರವೀಣ್ ಅಲಿಯಾಸ್ ಜಾಗೋ, ಶಿವ ಮತ್ತು ವಿಕ್ಕಿ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ


ಇದೀಗ ಐವರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರೂ ಜೈಲು ಪಾಲಾಗಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಹಚ್ಚಿ ಆತನನ್ನು ಕೂಡ ಶೀಘ್ರವೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.


Restaurant owner booked for serving chicken biryani instead of veg biryani
ಇದೀಗ ಈ ಘಟನೆ ಸಂಬಂಧ ಪೊಲೀಸರು ಮ್ಯಾನೇಜರ್‌ ಅವರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೇ  ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ  ಎಂಬಂತೆ, ಆಸೆಯಿಂದ ವೆಜ್​ ಬಿರಿಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ತಮ್ಮ ಮುಂದೆ ಊಟವಿದ್ದರೂ ತಿನ್ನಲಾಗಲಿಲ್ಲ.


ಇದನ್ನೂ ಓದಿ: Zomato: ಪ್ರತಿ ನಿಮಿಷಕ್ಕೂ 185 ಬಿರಿಯಾನಿ, 139 ಪಿಜ್ಜಾ ಡೆಲಿವರಿ! ಏನ್​ ಗುರೂ ಜೊಮ್ಯಾಟೊ ಸ್ಪೀಡ್​


ಈ ಮುನ್ನ ಹೆಚ್ಚು ಸಾಗು ಕೇಳಿ, ಹೋಟೆಲ್ ಸಿಬ್ಬಂದಿ ಮಾಲೀಕನಿಗೆ ಥಳಿಸಿದ್ದ ದುಷ್ಕರ್ಮಿಗಳು


ಈ ಮುನ್ನ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ರೊಟ್ಟಿ ತಿನ್ನುವ ವೇಳೆ ಹೆಚ್ಚು ಸಾಗು ಕೇಳಿದ್ದೂ ಅಲ್ಲದೆ, ಹೋಟೆಲ್ ಸಿಬ್ಬಂದಿ ಹಾಗೂ ಮಾಲೀಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ರಾತ್ರಿ ಮೂವರಿದ್ದ ಗುಂಪೊಂದು ಹೋಟೆಲ್ ಬಂದಿದ್ದು, ರೊಟ್ಟಿ ಪಡೆದುಕೊಂಡು ತಿಂದಿದ್ದಾರೆ. ಈ ವೇಳೆ ಮೂವರಲ್ಲಿ ಒಬ್ಬ ವ್ಯಕ್ತಿ ಹೋಟೆಲ್ ಸಿಬ್ಬಂದಿಯ ಬಳಿ ಹೆಚ್ಚು ಸಾಗು ಕೇಳಿದ್ದಾನೆ. ಈ ವೇಳೆ ಸಿಬ್ಬಂದಿ ಜೊತೆಗೆ ಜಗಳಕ್ಕಿಳಿದಿದ್ದಾನೆ. ಬಳಿಕ ಹೋಟೆಲ್ ಮಾಲೀಕ ಡಿ ವೆಂಕಟ ಸುಬ್ಬಯ್ಯ (39) ಅವರು ಮಧ್ಯೆ ಪ್ರವೇಶಿಸಿದ್ದು, ಮೂವರೂ ಸೇರಿಕೊಂಡು ಪ್ಲಾಸ್ಟಿಕ್ ಬಕೆಟ್, ಸ್ಟೂಲ್ ಹಾಗೂ ಇತರೆ ವಸ್ತುಗಳ ಬಳಸಿಕೊಂಡು ಥಳಿಸಿದ್ದರು.

Published by:Monika N
First published: