ಮಾಧ್ಯಮದ ವರದಿಗಳ ಪ್ರಕಾರ, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊಗೆ ಉಡುಗೊರೆಯಾಗಿ ನೀಡಲಾದ 5,800 ಯುಎಸ್ ಡಾಲರ್ ಮೊತ್ತದ ಜಪಾನೀಸ್ ವಿಸ್ಕಿ ಬಾಟಲಿ ಪ್ರಕರಣ ಹೊಸಾ ತಿರುವು ಪಡೆದಿದ್ದು, ದುಬಾರಿ ಕುಡಿತದ ಕುರಿತು ತನಿಖೆ ಆರಂಭಿಸಲಾಗಿದ್ದು ಇದು ರಾಜ್ಯ ಇಲಾಖೆಯನ್ನು ಕಂಗೆಡಿಸಿ, ಗೊಂದಲಕ್ಕೀಡು ಮಾಡಿದೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಇಷ್ಟೊಂದು ಬಾಟಲಿಗಳು ಎಲ್ಲಿವೆ ಎಂದು ನೋಡುತ್ತಿದೆ ಎಂದು ಸಿಎನ್ಎನ್ ವರದಿ ಮಾಡಿದೆ, ಫೆಡರಲ್ ರಿಜಿಸ್ಟರ್ನಲ್ಲಿ ರಾಜ್ಯ ಇಲಾಖೆಯ ಫೈಲಿಂಗ್ಗಳನ್ನು ಸಹ ಬಿಡದೆ ತಡಕಾಡುತ್ತಿದೆ.
ಜಪಾನ್ ಸರ್ಕಾರವು 2019 ರಲ್ಲಿ ಪೊಂಪಿಯೊಗೆ ಇಷ್ಟೊಂದು ದೊಡ್ಡ ಮೊತ್ತದ ಬಾಟಲಿ ವಿಸ್ಕಿಯನ್ನು ಉಡುಗೊರೆಯಾಗಿ ನೀಡಿತು ಎಂದು ಡಾಕ್ಯುಮೆಂಟ್ ಹೇಳುತ್ತದೆ. ವಿಸ್ಕಿ ಎಲ್ಲಿದೆ ಎಂದು ತಿಳಿದಿಲ್ಲ ಎಂದು ಇಲಾಖೆ ಹೇಳಿಕೆ ನೀಡಿದೆ. ಕಳೆದ ಎರಡು ದಶಕಗಳಲ್ಲಿ ಇದೇ ರೀತಿಯ ಫೈಲಿಂಗ್ಗಳು ಇದ್ದು, ಇದುವರೆಗೂ ಯಾವುದೇ ರೀತಿಯ ತನಿಖೆಗಳ ಬಗ್ಗೆ ಉಲ್ಲೇಖಿಸಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇಲಾಖೆಯು ಈ ಬಗ್ಗೆ ಪರಿಶೀಲಿಸುತ್ತಿದೆ ಮತ್ತು ನಿರಂತರ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಲಾಗಿದೆ. ಆದರೆ ಪೊಂಪಿಯೊ ಸ್ವತಃ ವಿಸ್ಕಿಯನ್ನು ಖಾಲಿ ಮಾಡಿದ್ದಾರೆಯೇ ಅಥವಾ ಸಿಬ್ಬಂದಿ ಅದನ್ನು ಬಳಸಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪೊಂಪಿಯೊ ಅವರು ಗುರುವಾರ ಮಾತನಾಡಿ, ನಾನು ಆ ವಿಸ್ಕಿಯ ಬಾಟಲಿಗಳನ್ನು ಸ್ವೀಕರಿಸಿಲ್ಲ ಮತ್ತು ಅದು ಕಾಣೆಯಾಗಿದೆ ಎಂಬುದರ ಬಗ್ಗೆಯೂ ನನಗೆ ತಿಳಿದಿಲ್ಲ ಮತ್ತು ಉಡುಗೊರೆಗೆ ಏನಾಯಿತು ಎಂಬುದು ನನಗೆ ತಿಳಿದಿಲ್ಲ. "ನಾನು ಅದನ್ನು ಎಂದಿಗೂ ಮುಟ್ಟಿಲ್ಲ ಎಂದು ಭಾವಿಸುತ್ತೇನೆ. ಈ ಪ್ರಕರಣದ ಬಗ್ಗೆ ನನಗೆ ಒಂಚೂರು ಅರ್ಥವಾಗುತ್ತಿಲ್ಲ. ರಾಜ್ಯ ಇಲಾಖೆಯು ಈ ವಿಷಯವನ್ನು ಹೇಗೆ ಕಳೆದುಕೊಂಡಿತು ಎಂದು ನನಗೆ ತಿಳಿದಿಲ್ಲ, ಆದರೂ ನಾನು ವಿದೇಶಾಂಗ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡಾಗ, ಆ ಇಲಾಖೆಯಲ್ಲಿನ ಅಪಾರ ಅಸಮರ್ಥತೆಯನ್ನು ಕಂಡಿದ್ದೇನೆ" ಎಂದು ಮಾಜಿ ರಾಜ್ಯ ಕಾರ್ಯದರ್ಶಿ ಫಾಕ್ಸ್ ನ್ಯೂಸ್ನಲ್ಲಿ ನಡೆದ ಸಂದರ್ಶನದ ವೇಳೆ ಹೇಳಿಕೆ ನೀಡಿದ್ದಾರೆ.
ಪಾಂಪಿಯೊ ಅವರ ವಕೀಲ, ವಿಲಿಯಂ ಬರ್ಕ್, ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ಬಳಿ ಮಾತನಾಡಿ, ಮಾಜಿ ವಿದೇಶಾಂಗ ಕಾರ್ಯದರ್ಶಿ "ವಿಸ್ಕಿ ಬಾಟಲಿಯನ್ನು ಸ್ವೀಕರಿಸಿದ ನೆನಪಿಲ್ಲ ಮತ್ತು ಅದು ಏನಾಯಿತು ಎಂಬುದರ ಬಗ್ಗೆ ಯಾವುದೇ ಜ್ಞಾನವಿಲ್ಲ ಅವರಿಗೆ" ಎಂದು ಹೇಳಿದರು. ಅಮೇರಿಕನ್ ಅಧಿಕಾರಿಗಳು USD 390 ಗಿಂತ ಕಡಿಮೆ ಉಡುಗೊರೆಗಳನ್ನು ಇಟ್ಟುಕೊಳ್ಳಬಹುದು. ಅಧಿಕಾರಿಗಳು ಆ ಬೆಲೆಗಿಂತ ಹೆಚ್ಚಿನ ಉಡುಗೊರೆಗಳನ್ನು ಇರಿಸಿಕೊಳ್ಳಲು ಬಯಸಿದರೆ, ಅವರು ಅವುಗಳನ್ನು ಖರೀದಿಸಬೇಕು. ಫೈಲಿಂಗ್ ಪ್ರಕಾರ, ಬಾಟಲಿಯನ್ನು USD 5,800 ಎಂದು ಅಂದಾಜಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ ಎಂದು NYT ವರದಿ ಹೇಳಿದೆ.
ವಿದೇಶಾಂಗ ಸರ್ಕಾರಗಳು ಮತ್ತು ನಾಯಕರು ಯುಎಸ್ ಹಿರಿಯ ಅಧಿಕಾರಿಗಳಿಗೆ ವಿಸ್ಕಿ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು ರಾಜ್ಯ ಇಲಾಖೆಯ ವಾರ್ಷಿಕ ಲೆಕ್ಕಪತ್ರದ ವಿಶ್ಲೇಷಣೆ ವೇಳೆ ಈ ವಿಷಯ ಬೆಳಕಿಗೆ ಬಂದಿತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ