ಲೋಕಸಭೆ ನಾಲ್ಕನೇ ಹಂತದ ಮತದಾನ; ಚುನಾವಣೆ ನಡೆಯುತ್ತಿರುವ 72 ಕ್ಷೇತ್ರಗಳ ಪೈಕಿ ಪ್ರಮುಖ ಕಣಗಳ ಡೀಟೈಲ್ ಇಲ್ಲಿದೆ..!

Lok Sabha Elections 2019: ನಾಲ್ಕು ರಾಜ್ಯಗಳ 72 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರು. ಪ್ರ್ತಸುತ ಎಲ್ಲರ ಗಮನ ಸೆಳೆಯುತ್ತಿರುವುದು ಕೆಲವು ಕ್ಷೇತ್ರಗಳ ಮಾತ್ರ. ಅಂತಹ ಕ್ಷೇತ್ರಗಳು ಯಾವುವು? ಮತ್ತು ಯಾವ ಕಾರಣಕ್ಕಾಗಿ ಈ ಕ್ಷೇತ್ರ ಗಮನ ಸೆಳೆಯುತ್ತಿದೆ? ಇಲ್ಲಿದೆ ಡೀಟೆಲ್.

MAshok Kumar | news18
Updated:April 29, 2019, 11:39 AM IST
ಲೋಕಸಭೆ ನಾಲ್ಕನೇ ಹಂತದ ಮತದಾನ; ಚುನಾವಣೆ ನಡೆಯುತ್ತಿರುವ 72 ಕ್ಷೇತ್ರಗಳ ಪೈಕಿ ಪ್ರಮುಖ ಕಣಗಳ ಡೀಟೈಲ್ ಇಲ್ಲಿದೆ..!
ಪೂನಂ ಮಹಾಜನ್, ಕನ್ಹಯ್ಯಾ ಕುಮಾರ್, ಸಾಕ್ಷಿ ಮಹಾರಾಜ್.
  • News18
  • Last Updated: April 29, 2019, 11:39 AM IST
  • Share this:
ಬೆಂಗಳೂರು (ಏ.29) : ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಇಂದು ದೇಶದಾದ್ಯಂತ 72 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಹಾಗೂ ಜಾರ್ಖಂಡ್ ಸೇರಿದಂತೆ 9 ರಾಜ್ಯಗಳಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ನಾನಾ ಕಾರಣಗಳಿಗಾಗಿ ಕೆಲವು ಕ್ಷೇತ್ರಗಳು ಮಾತ್ರ ಎಲ್ಲರ ಗಮನ ಸೆಳೆಯುತ್ತಿದೆ.

ನಾಲ್ಕು ರಾಜ್ಯಗಳ 72 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರು. ಪ್ರ್ತಸುತ ಎಲ್ಲರ ಗಮನ ಸೆಳೆಯುತ್ತಿರುವುದು ಕೆಲವು ಕ್ಷೇತ್ರಗಳ ಮಾತ್ರ. ಅಂತಹ ಕ್ಷೇತ್ರಗಳು ಯಾವುವು? ಮತ್ತು ಯಾವ ಕಾರಣಕ್ಕಾಗಿ ಈ ಕ್ಷೇತ್ರ ಗಮನ ಸೆಳೆಯುತ್ತಿದೆ? ಇಲ್ಲಿದೆ ಡೀಟೆಲ್.

1.ಕನ್ಹಯ್ಯ ಕುಮಾರ್ (ಬೆಗುಸರೈ-ಬಿಹಾರ)

ಪ್ರಸ್ತುತ ಲೋಕಸಭಾ ಚುನಾವಣೆ ಅಖಾಡದಲ್ಲಿ ಇಡೀ ದೇಶದ ಗಮನ ಸೆಳೆಯುತ್ತಿರುವ ಕ್ಷೇತ್ರ ಬೆಗುಸರೈ. ದೆಹಲಿಯ ಜವಹರ್​ಲಾಲ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕನಾಗಿದ್ದ ಕನ್ಹಯ್ಯ ಕುಮಾರ್ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುತ್ತಲೇ ಬೆಳೆದ ನಾಯಕ. ಇಂದು ಬಿಹಾರದ ಬೆಗುಸರೈ ಕ್ಷೇತ್ರದಿಂದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಜೊತೆಗೆ ಈ ಕ್ಷೇತ್ರ ಪ್ರಸ್ತುತ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಇದನ್ನೂ ಓದಿ : Lok Sabha Election Voting: 4ನೇ ಹಂತದ ಚುನಾವಣೆ – 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ

ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಎನ್​ಡಿಎ ಮೈತ್ರಿಕೂಟ ಹಾಗೂ ಕಾಂಗ್ರೆಸ್-ಆರ್​ಜೆಡಿ ಮೈತ್ರಿಯ ನಡುವೆ ನೇರಾನೇರ ಪೈಪೋಟಿ ಇದ್ದರೂ ಸಹ ಬಿಹಾರದಲ್ಲಿ ಅತಿಹೆಚ್ಚು ಕುತೂಹಲವನ್ನು ಕೆರಳಿಸಿರುವ ಕ್ಷೇತ್ರ ಬೆಗುಸರೈ. ಈ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಡಾ. ಬೋಲಾ ಸಿಂಗ್. 2014ರಲ್ಲಿ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು.

ಬೆಗುಸರೈ ಮೂಲತಃ ಕಾಂಗ್ರೆಸ್​ ಕೋಟೆ. ಇಲ್ಲಿ ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 9 ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಉಳಿದಂತೆ 4 ಬಾರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ ಗೆಲುವು  ಸಾಧಿಸಿದೆ. 1967 ರಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ದಿಂದ ಇಲ್ಲಿ ಸ್ಪರ್ಧಿಸಿದ್ದ ಯೋಗೇಂದ್ರ ಶರ್ಮ ಮೊದಲ ಬಾರಿಗೆ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆ ನಂತರ ಇಲ್ಲಿ ಸಿಪಿಎಂ ತನ್ನ ನೆಲೆ ಕಳೆದುಕೊಂಡಿತ್ತು. ಆದರೆ, ಇದೀಗ ಕನ್ಹಯ್ಯ ಕುಮಾರ್ ಮೂಲಕ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯುವ ಹಂಬಲದಲ್ಲಿದೆ.2.ಊರ್ಮಿಲಾ ಮಾಟೋಂಡ್ಕರ್ ( ಮುಂಬೈ ನಾರ್ಥ್​)

ಮಹಾರಾಷ್ಟ್ರದಲ್ಲಿ ಬಿಜೆಪಿಯ ಭದ್ರಕೋಟೆಗಳಲ್ಲಿ ಮುಂಬೈ ನಾರ್ಥ್ ಕ್ಷೇತ್ರವೂ ಒಂದು. ಈ ಕ್ಷೇತ್ರಕ್ಕೆ ಈವರೆಗೆ ಒಟ್ಟು 14 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, ಈ ಪೈಕಿ 6 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ 4 ಬಾರಿ ಗೆಲುವು ಸಾಧಿಸಿದ್ದರೆ, 1952ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಂತರ ಇಲ್ಲಿ ತನ್ನ ನೆಲೆ ಕಳೆದುಕೊಂಡಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗೋಪಾಲ್ ಶೆಟ್ಟಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ಸಂಸತ್ ಪ್ರತಿನಿಧಿಸಿದ್ದರು.

ಪ್ರಸ್ತುತ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿಯೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ನಿರುಪಮ್ ಸುಮಾರು 4.5 ಲಕ್ಷ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಖ್ಯಾತ ಚಿತ್ರನಟಿ ಪೂರ್ವಶಿ ಮಾಟೋಂಡ್ಕರ್ ಅವರನ್ನು ಕಣಕ್ಕಿಳಿಸಿದೆ. ಆದರೆ ಬಿಜೆಪಿಯ ಭದ್ರಕೋಟೆಯಲ್ಲಿ ಸಿನಿಮಾ ಗ್ಲಾಮರ್ ವರ್ಕೌಟ್ ಆಗುತ್ತಾ? ಎಂಬುದನ್ನು ಚುನಾವಣಾ ಫಲಿತಾಂಶ ಸ್ಪಷ್ಟಪಡಿಸಲಿದೆ.

3.ಪ್ರಿಯಾದತ್ – ಪೂನಂ ಮಹಾಜನ್ (ಮುಂಬೈ ನಾರ್ಥ್​ ಸೆಂಟ್ರಲ್)

ನಾನಾ ಕಾರಣಗಳಿಗಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿರುವ ಪ್ರಮುಖ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ಮುಂಬೈ ನಾರ್ಥ್ ಸೆಂಟ್ರಲ್ ಕ್ಷೇತ್ರವೂ ಸಹ ಒಂದು.

ಈ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಸುನಿಲ್ ದತ್ ಪುತ್ರಿ ಹಾಗೂ ಖ್ಯಾತ ಚಿತ್ರನಟ ಸಂಜಯ್ ದತ್ ಅವರ ಸಹೋದರಿ ಪ್ರಿಯಾ ದತ್ ಹಾಗೂ ಕೇಂದ್ರದ ಮಾಜಿ ರಕ್ಷಣಾ ಸಚಿವ ಖ್ಯಾತ ರಾಜಕಾರಣಿ ಪ್ರಮೋದ್ ಮಹಾಜನ್​ ಪುತ್ರಿ ಪೂನಮ್ ಮಹಾಜನ್​ ಮುಖಾಮುಖಿ ಸ್ಪರ್ಧೆಯಿಂದಾಗಿ ಈ ಕಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ : Lok Sabha Election 2019 - ನಾಲ್ಕನೇ ಹಂತದ ಚುನಾವಣೆ: ಕನ್ಹಯ್ಯ ಕುಮಾರ್, ಸಾಕ್ಷಿ ಮಹಾರಾಜ್ ಸೇರಿ ಘಟಾನುಘಟಿ ಸ್ಪರ್ಧಾಳುಗಳ ಪಟ್ಟಿ

ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ ಈ ಕ್ಷೇತ್ರದಲ್ಲಿ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಪೂನಮ್​ ಮಹಾಜನ್​, ಪ್ರಿಯಾ ದತ್ ವಿರುದ್ಧ ಸುಮಾರು 1.9 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಪ್ರಿಯಾ ದತ್ ಕಣದಲ್ಲಿ ಸಕ್ರೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ಪರವಾಗಿ ಖ್ಯಾತ ನಟ ಸಂಜಯ್ ದತ್ ಸಹ ಪ್ರಚಾರ ನಡೆಸುತ್ತಿದ್ದಾರೆ. ಪರಿಣಾಮ ಈ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರೂ? ಎಂಬ ಕುರಿತು ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ.

4. ಸಾಕ್ಷಿ ಮಹಾರಾಜ್ – (ಉನ್ನಾವೋ-ಉತ್ತರಪ್ರದೇಶ)

1984ರ ವರೆಗೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಉತ್ತರಪ್ರದೇಶದ ಉನ್ನಾವೋ 1991ರ ನಂತರ ಬಿಜೆಪಿ ಭದ್ರಕೋಟೆಯಾಗಿ ಬದಲಾಗಿದೆ. ಈ ಕ್ಷೇತ್ರದ ಹಾಲಿ ಸಂಸದರು ಬಿಜೆಪಿ ಸಾಕ್ಷಿ ಮಹಾರಾಜ್​.

ಸದಾ ಒಂದಾಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಸಾಕ್ಷಿ ಮಹಾರಾಜ್ ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ಹಾಕದಿದ್ದಲ್ಲಿ ಶಾಪ ನೀಡುತ್ತೇನೆ ಎಂದು ಹೇಳುವ ಮೂಲಕ ವಿರೋಧಿಗಳಿಂದ ಕಟು ಟೀಕೆಗೆ ಗುರಿಯಾಗಿದ್ದಾರೆ.

ಸಾಕ್ಷಿ ಮಹಾರಾಜ್ 2014ರಲ್ಲಿ ಸಮಾಜವಾದಿ ಪಾರ್ಟಿಯ ಅರುಣ್ ಶಂಕರ್ ಶುಕ್ಲಾ ವಿರುದ್ಧ ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮೈತ್ರಿ ಸಾಧಿಸಿದ್ದು ಬಿಜೆಪಿ ದೊಡ್ಡ ಪೆಟ್ಟು ನೀಡಲಿದೆ ಎಂದೇ ಭಾವಿಸಲಾಗುತ್ತಿದೆ. ಈ ಬೆಳವಣಿಗೆ ಉನ್ನಾವೋ ಕ್ಷೇತ್ರದ ಮೇಲೂ ಪ್ರಭಾವ ಬೀರಲಿದ್ದು, ಸಾಕ್ಷಿ ಮಹಾರಾಜ್​ಗೆ ಪ್ರತಿಕೂಲವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

First published:April 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ