Amir 3ನೇ ಮದುವೆಯಾಗೇ ಬಿಟ್ರು! 18ರ ಹರೆಯದವಳ ಕೈ ಹಿಡಿದಿದ್ದು ಯಾಕೆ? ಈ ಸುದ್ದಿ ಓದಿದ್ರೆ ಶಾಕ್ ಆಗುತ್ತೆ

'ಅವರು' ಬೇರೆ, 'ಇವರು' ಬೇರೆ, ಇವರು ಅವರಲ್ಲ ಬಿಡಿ! ಅವರದ್ದು ಮತ್ತೊಂದು ಮದುವೆ ಸುದ್ದಿ ಹರಿದಾಡುತ್ತಿತ್ತು. ಆದರೆ ಇವರದ್ದು 3ನೇ ಮದುವೆಯೇ ನಡೆದುಹೋಗಿದೆ. ಅಂದಹಾಗೆ 49 ವರ್ಷದ ಇವರು ಮೂರನೇ ಮದುವೆಯಾಗಿದ್ದ 18ರ ನವಯುವತಿಯನ್ನು. ಹಾಗಿದ್ರೆ ಇವರು ಯಾರು? ಏನು ಈ ಮೂರನೇ ಮದುವೆ ಕಥೆ ಅಂತ ತಿಳಿಯಲು ಮುಂದೆ ಓದಿ...

3ನೇ ಪತ್ನಿಯೊಂದಿಗೆ ಪಾಕ್ ಸಚಿವ

3ನೇ ಪತ್ನಿಯೊಂದಿಗೆ ಪಾಕ್ ಸಚಿವ

  • Share this:
ಭಾರತದ (India) ಆಂತರಿಕ ವಿಚಾರಗಳಲ್ಲಿ(Internal Matters)  ಮೂಗು ತೂರಿಸುವುದರಲ್ಲಿ ನೆರೆಯ ದೇಶ ಪಾಕಿಸ್ತಾನ (Pakistan) ನಿಸ್ಸೀಮ. ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಪಕ್ಕದವರ ತಟ್ಟೆ ಸರಿಯಿಲ್ಲ ಎನ್ನುವ ಜಾಯಮಾನ. ಇಲ್ಲಿ ಹಿಜಾಬ್ (Hijab) ಗಲಾಟೆ (Controversy) ನಡೆಯುತ್ತಾ ಇದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ (Social Media) ಪಾಕಿಸ್ತಾನದ ಸಚಿವರು, ಸರ್ಕಾರಿ ಅಧಿಕಾರಿಗಳು ಕಮೆಂಟ್ ಮಾಡುತ್ತಿದ್ದಾರೆ. ಆದರೀಗ ಸೋಶಿಯಲ್ ಮೀಡಿಯಾಗಳ ಪಾಲಿಗೆ ಪಾಕಿಸ್ತಾನವೇ ಆಹಾರವಾಗಿದೆ. ಅಲ್ಲಿ ಚುನಾಯಿತ ಜನ ಪ್ರತಿನಿಧಿ ಅಂದರೆ ಸಂಸದನೊಬ್ಬ (MP) 3ನೇ ಮದುವೆಯಾಗಿದ್ದಾನೆ. ಅಲ್ಲಿ ಮೂರನೇ ಮದುವೆಗೆ ಅನುಮತಿಯಿದ್ದರೂ, ಆತ ಹಾಗೂ 3ನೇ ಮದುವೆಯಾಗಿರೋ ಹುಡುಗಿನ ವಯಸ್ಸಿನ ಅಂತರದ ಮಧ್ಯೆ ಭಾರೀ ಚರ್ಚೆ ಶುರುವಾಗಿದೆ. ಹಾಗಿದ್ದರೆ ಮೂರನೇ ಮದುವೆಯಾದ ಪಾಕಿಸ್ತಾನದ ಸಂಸದ ಯಾರು? ಅವರ ನಡುವಿನ ವಯಸ್ಸೆಷ್ಟು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

 3ನೇ ಮದುವೆಯಾದ ಸಂಸದ ಯಾರು?

ಇಸ್ಲಾಮಾಬಾದ್‌ನ (Islamabad) ಸಂಸದ ಅಮೀರ್ ಲಿಯಾಖತ್‌ನೇ ಮೂರನೇ ಮದುವೆಯಾಗಿರುವ ಸಂಸದ. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ –ಇ-ಇನ್ಸಾಫ್‌ ಪಕ್ಷದ ಸಂಸದ ಈತ. ಅಲ್ಲದೇ ಈತ ಅಲ್ಲಿನ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕನೂ ಆಗಿದ್ದಾನೆ.

ಇತ್ತೀಚಿಗಷ್ಟೇ 2ನೇ ಪತ್ನಿಗೆ ಗುಡ್‌ ಬೈ

ಅಂದಹಾಗೆ ಅಮೀರ್ ಲಿಯಾಖತ್‌ಗೆ ಇದು ಮೂರನೇ ಮದುವೆ. ಈ ಹಿಂದೆಯೇ ಆತ ಎರಡು ಮದುವೆಯಾಗಿದ್ದಾನೆ. ಈಗ ಕೇವಲ 1 ತಿಂಗಳ ಹಿಂದಷ್ಟೇ 2ನೇ ಪತ್ನಿಯಿಂದ ದೂರವಾಗಿದ್ದ ಎನ್ನಲಾಗಿದೆ. ಇದೀಗ ಆತ ಮೂರನೇ ಪತ್ನಿಯ ಕೈಹಿಡಿದಿದ್ದಾನೆ.

ಇದನ್ನೂ ಓದಿ: Shocking News: ತಾಯಿ, ಮಗ ಸೇರಿ ಗಂಡನನ್ನೇ ಕೆಳಕ್ಕೆ ತಳ್ಳಿದ್ರು! ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ

18ರ ಹುಡುಗಿ ವರಿಸಿದ 49ರ ಸಂಸದ!

ಅಂದಹಾಗೆ ಈ ಅಮೀರ್ ಲಿಯಾಖತ್‌ಗೆ ಈಗ ವಯ್ಸಸು 49. ಆತ ಈ ವಯಸ್ಸಿನಲ್ಲಿ ಮದುವೆಯಾಗಿದ್ದು, ಅದೂ ಮೂರನೇ ಮದುವೆಯಾಗಿದ್ದು ಮಾತ್ರ 18ರ ಹುಡುಗಿಯನ್ನು. ಅಂದರೆ ಅವರಿಬ್ಬರ ನಡುವೆ ಸುಮಾರು 31 ವರ್ಷಗಳ ಅಂತರ. ಹೀಗಾಗಿಯೇ ಅಮೀರ್ ಲಿಯಾಖತ್ ಮೂರನೇ ವಿವಾಹ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಯೀದಾ ದಾನಿಯಾ ಶಾ ಜೊತೆ ಮೂರನೇ ವಿವಾಹ

ಈಗಾಗಲೇ ತಿಳಿಸಿದಂತೆ 49 ವರ್ಷ ವಯಸ್ಸಿನ ಸಂಸದ ಅಮೀರ್ ಲಿಯಾಖತ್, 18ರ ವಯಸ್ಸಿನ ಸಯೀದಾ ದಾನಿಯಾ ಶಾ ಎಂಬಾಕೆಯ ಕೈ ಹಿಡಿದಿದ್ದಾನೆ. ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾನೆ. “ನಾನು ಈಗಷ್ಟೇ ಒಂದು ಭಯಾನಕ, ಕರಾಳ ದಿನಗಳಿಂದ ಆಚೆ ಬಂದಿದ್ದೇನೆ. ನನ್ನ ಜೀವನಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ನಮ್ಮಿಬ್ಬರನ್ನು ನೀವೆಲ್ಲ ಆಶೀರ್ವದಿಸಬೇಕು” ಅಂತ ಅಮೀರ್ ಬರೆದುಕೊಂಡಿದ್ದಾನೆ.

ಬಾಲ್ಯದಲ್ಲೇ ಅಮೀರ್‌ನನ್ನು ಇಷ್ಟಪಟ್ಟಿದ್ದ ಸಯೀದಾ

ಈ ಮದುವೆ ಕುರಿತಂತೆ ಸಾಯೀದಾ ಶಾ ಕೂಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾಳೆ. “ನಾನು ಬಾಲ್ಯದಲ್ಲೇ ಅಮೀರ್ ಅವರನ್ನು ನೋಡಿದ್ದೆ. ಟಿವಿಗಳಲ್ಲಿ ನೋಡುವಾಗ ಅವರ ಮೇಲೆ ಪ್ರೀತಿಯಾಗಿತ್ತು. ಈಗ ನನ್ನ ಚೈಲ್ಡ್‌ ಹುಡ್ ಹೀರೋ ನನಗೆ ಸಿಕ್ಕಿದ್ದಾರೆ” ಅಂತ ಪಾಕಿಸ್ತಾನದ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾಳೆ.

ಇದನ್ನೂ ಓದಿ: Buddha Idol: ಇಟಲಿಯಲ್ಲಿ ಪತ್ತೆಯಾಯ್ತು ಕಳುವಾಗಿದ್ದ 1,200 ವರ್ಷಗಳ ಹಳೆಯ ಬುದ್ದನ ವಿಗ್ರಹ

ದಂಪತಿಗೆ ಶುಭ ಹಾರೈಸಿದ ಪಾಕ್ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ತಮ್ಮದೇ ಪಕ್ಷದ ಸಂಸದ ಹೊಸ ಬಾಳಿಗೆ ಕಾಲಿಡುತ್ತಿದ್ದು, ಅವರ ಜೀವನ ಸುಖವಾಗಿರಲಿ ಅಂತ ಆಶೀರ್ವದಿಸದ್ದಾರೆ. ಇನ್ನು ಪಾಕಿಸ್ತಾನದ ಸಚಿವರೂ ಸಹ ಅಮೀರ್ ಲಿಯಾಖತ್ ಹಾಗೂ ಸಯೀದಾ ದಾನಿಯಾ ಶಾ ಜೋಡಿಗೆ ಶುಭ ಕೋರಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆ

ಅಮಿರ್ ಲಿಯಾಖತ್ ಮೂರನೇ ವಿವಾಹ ಹಾಗೂ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Published by:Annappa Achari
First published: