ನ್ಯೂಯಾರ್ಕ್(ಡಿ.27): ಅಮೆರಿಕದಲ್ಲಿ ಮಾರಣಾಂತಿಕ ಹಿಮಗಾಳಿಯಿಂದ (Cold Wave), ಲಕ್ಷಾಂತರ ಜನರು ತೀವ್ರ ಚಳಿಯನ್ನು ಎದುರಿಸುತ್ತಿದ್ದಾರೆ. ದೇಶದ ಹಲವೆಡೆ ತೀವ್ರ ಚಳಿಗಾಳಿ ಮುಂದುವರೆದಿದೆ. ಪಶ್ಚಿಮ ನ್ಯೂಯಾರ್ಕ್ನಲ್ಲಿ (West New York) ಜನರು ಭಾರೀ ಹಿಮಪಾತವನ್ನು ಎದುರಿಸುತ್ತಿದ್ದಾರೆ ಮತ್ತು ಈ ಪರಿಸ್ಥಿತಿಯಿಂದಾಗಿ ವಿಮಾನಗಳನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ರಸ್ತೆ ಪ್ರಯಾಣವನ್ನೂ ನಿರ್ಬಂಧಿಸಲಾಗಿದೆ. ಈ ಹಿಮಪಾತದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದ್ದು, ಇದನ್ನು ನೋಡಿದವರಿಗೂ ಒಂದು ಬಾರಿ ಚಳಿ ಹಿಡಿಯುವಂತಿದೆ.
ಪಶ್ಚಿಮ ನ್ಯೂಯಾರ್ಕ್ನಲ್ಲಿ ಚಂಡಮಾರುತಕ್ಕೆ ಸಂಬಂಧಿಸಿದ ಘಟನೆಗಳಲ್ಲಿ 27 ಜನರು ಸಾವನ್ನಪ್ಪಿದ ನಂತರ, ಚಂಡಮಾರುತದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡವರ ಸಂಖ್ಯೆ ಯುಎಸ್ನಲ್ಲಿ 48 ಕ್ಕೆ ಏರಿದೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಾವಿರಾರು ಮನೆಗಳು ಮತ್ತು ಲಾರ್ಖಾನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬಹುತೇಕ ಮನೆಗಳು ಮತ್ತು ಕಾರುಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿವೆ.
ಇದನ್ನೂ ಓದಿ: Winter Season: ಓಟ್ ಮೀಲ್ ಚಳಿಗಾಲದಲ್ಲಿ ತಿನ್ನಬಹುದಾ? ಇದರಿಂದ ಆಗುವ ಪ್ರಯೋಜನಗಳೇನು?
ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ಡಿಸೆಂಬರ್ 25 ರಂದು ಟ್ವೀಟ್ನಲ್ಲಿ ಈ ವಿಚಾರವಾಗಿ ಬರೆಯುತ್ತಾ, "ಹಿಮ ಇನ್ನೂ ಬೀಳುತ್ತಿದೆ ಮತ್ತು ತಂಪಾದ ಗಾಳಿಯ ಉಷ್ಣತೆಯು ಶೂನ್ಯಕ್ಕಿಂತ ಕಡಿಮೆಯಾಗಿದೆ, ಭಾರೀ ಹಿಮದಿಂದಾಗಿ ಜನರ ಮನೆಗಳು ಪಂಜರಗಳಂತೆ ಕಾಣುತ್ತವೆ." ದಯವಿಟ್ಟು ಮನೆಯಲ್ಲೇ ಇರಿ, ಬೆಚ್ಚಗೆ ಇರಿ ಮತ್ತು ಸುರಕ್ಷಿತವಾಗಿರಿ, ಎಂದಿದ್ದಾರೆ.
NEW VIDEO: Snow drifts are reaching the height of SUVs in the Buffalo area as this historic blizzard gradually winds down. Some cars have been abandoned in the middle of roads during the height of the lake-effect snowstorm. #NYwx #snow pic.twitter.com/0v90aofgsX
— WeatherNation (@WeatherNation) December 25, 2022
ದೇಶದ ಜನಸಂಖ್ಯೆಯ ಸುಮಾರು 60 ಪ್ರತಿಶತದಷ್ಟು ಜನರು ಶೀತ ಹವಾಮಾನ ಎದುರಿಸುತ್ತಿದ್ದಾರೆ. ಅ;ರ್ಟ್ ಜಾರಿಗೊಳಿಸಲಾಗಿದೆ. ಅಮೆರಿಕದ ಪೂರ್ವ ಭಾಗದ ಅರ್ಧ ಭಾಗವು ಶೀತಗಾಳಿಯ ಹಿಡಿತದಲ್ಲಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಭಾನುವಾರ ತಿಳಿಸಿದೆ. ಚಂಡಮಾರುತದಂತಹ ಈ ಹಿಮಗಾಳಿ ಮತ್ತು ಹಿಮವು ಬಫಲೋ ಪರಿಸ್ಥಿತಿಯನ್ನು ಹದಗೆಡಿಸಿದೆ.
ನಗರದಲ್ಲಿ ಶನಿವಾರ ವಾಹನಗಳು ಸಿಲುಕಿಕೊಂಡಿರುವುದು ಕಂಡುಬಂದಿದೆ ಎಂದು ಕ್ಯಾಥಿ ಹೊಚುಲ್ ಹೇಳಿದರು. ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ವಿಧಿಸಿರುವ ನಿರ್ಬಂಧಗಳನ್ನು ಜನರು ಗೌರವಿಸಬೇಕು ಎಂದು ಮನವಿ ಮಾಡಿದರು. ಮಂಗಳವಾರ ಬೆಳಗಿನ ಜಾವದವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಫಲೋ ನಯಾಗರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾನುವಾರ ಬೆಳಗ್ಗೆ 7 ಗಂಟೆಗೆ ಒಟ್ಟು 43 ಇಂಚುಗಳು (1.1 ಮೀ) ಹಿಮವನ್ನು ಹೊಂದಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ.
ಇದನ್ನೂ ಓದಿ: Portable Heater: ಕೊರೆಯುವ ಚಳಿಯಲ್ಲೂ ನಿಮ್ಮ ದೇಹದ ಉಷ್ಣತೆ ಹೆಚ್ಚಿಸುತ್ತೆ ಈ ಡಿವೈಸ್, ಜೇಬಿನಲ್ಲಿಟ್ಟುಕೊಂಡ್ರೆ ಸಾಕು!
With snow still falling and windchill temperatures below zero, Hoaks looks like a scene out of Frozen.
Please stay home, stay warm, and stay safe, New York. https://t.co/VYkG35G09P
— Governor Kathy Hochul (@GovKathyHochul) December 24, 2022
ಚಂಡಮಾರುತದ ಸಮಯದಲ್ಲಿ ಎರಡು ಪ್ರತ್ಯೇಕ ಲೂಟಿ ಘಟನೆಗಳು ನಡೆದಿವೆ ಎಂದು ಪೊಲೀಸರು ಭಾನುವಾರ ಸಂಜೆ ತಿಳಿಸಿದ್ದಾರೆ. ಕೆಲವು ಜನರು ತಮ್ಮ ಕಾರಿನಲ್ಲಿ ಸತ್ತರು ಮತ್ತು ಕೆಲವರು ರಸ್ತೆಗಳಲ್ಲಿ ಸತ್ತರು ಎಂದು ಸನ್ನಿವೇಶಗಳು ಕಂಡುಬಂದಿವೆ. ಎರಡು ದಿನಗಳಿಗಿಂತ ಹೆಚ್ಚು ಕಾಲ ತಮ್ಮ ಕಾರಿನಲ್ಲಿ ಸಿಲುಕಿರುವ ಜನರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ