Viral News: ಯುವಕನಂತೆ ಕಾಣಲು ವರ್ಷಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರಂತೆ ಈ ಉದ್ಯಮಿ!

ಇವರೇ ಆ ವ್ಯಕ್ತಿ!

ಇವರೇ ಆ ವ್ಯಕ್ತಿ!

ಜಾನ್ಸನ್ ಒಬ್ಬ ಸಾಫ್ಟ್‌ವೇರ್ ಉದ್ಯಮಿಯಾಗಿದ್ದು, 30 ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ತಜ್ಞರು ಅವರ ಪ್ರತಿಯೊಂದು ದೈಹಿಕ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

  • Share this:

ಯಾರಿಗೆ ತಾನೇ ತೆಳ್ಳಗೆ, ಫಿಟ್ ಆಗಿ, ಸುಂದರವಾಗಿ ಇರಬೇಕಂತ ಅನ್ನಿಸುವುದಿಲ್ಲ ಹೇಳಿ? ಬಹುತೇಕರು ತಮಗೆ ಎಷ್ಟೇ ವಯಸ್ಸಾದರೂ ಸಹ ಬೆಳಿಗ್ಗೆ ವ್ಯಾಯಾಮ, ಯೋಗ, ಜಿಮ್ ಅಂತ ಅನೇಕ ರೀತಿಯ ಒಳ್ಳೆಯ ಅಭ್ಯಾಸಗಳನ್ನು (Healthy Habbits) ರೂಢಿಸಿಕೊಂಡು ತಮ್ಮ ಆರೋಗ್ಯವನ್ನು (Good Health) ಚೆನ್ನಾಗಿಟ್ಟುಕೊಳ್ಳಲು ಮತ್ತು ಸಾಕಷ್ಟು ಫಿಟ್ ಅಗಿರಲು ಹರ ಸಾಹಸ ಪಡುತ್ತಿರುತ್ತಾರೆ.


ಈಗಂತೂ ಅನೇಕರು ಹಲವಾರು ಫಿಟ್ನೆಸ್ ತರಬೇತಿಗಳನ್ನ ಪಡೆಯುತ್ತಾ ಇರುತ್ತಾರೆ ಮತ್ತು ಅವರ ದಿನಚರಿಗಳಲ್ಲಿ ಆರೋಗ್ಯಕರ ದೈನಂದಿನ ವ್ಯಾಯಾಮ ಕಾರ್ಯಕ್ರಮಗಳನ್ನು ಸೇರಿಸಿಕೊಂಡಿರುತ್ತಾರೆ ಅಂತ ಹೇಳಬಹುದು. ಜನರು ತಮಗೆ ವಯಸ್ಸಾದಂತೆ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಲು, ದೇಹದ ಆಕಾರವನ್ನು ಹಾಗೆಯೇ ಮೊದಲಿನಂತೆ ಸುಂದರವಾಗಿ ಉಳಿಸಿಕೊಳ್ಳಲು ಮತ್ತು ವಯಸ್ಸಾಗದಂತೆ ಕಾಣಲು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ ಅಂತ ಹೇಳಬಹುದು.


ದುಬಾರಿ ವೈದ್ಯಕೀಯ ಚಿಕಿತ್ಸೆ
ಕೆಲವರು ತಾವು ತುಂಬಾನೇ ಚಿಕ್ಕವರಾಗಿ ಕಾಣಲು ಅನೇಕ ರೀತಿಯ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ಸಹ ಮಾಡಿಸಿಕೊಳ್ಳುತ್ತಾರೆ. ಇಲ್ಲಿಯೂ ಸಹ ಇಂತಹ ಮನೋಭಾವದ ವ್ಯಕ್ತಿ ಇದ್ದಾರೆ ನೋಡಿ. ಅವರು ಪ್ರತಿ ವರ್ಷ ಹೀಗೆ ಯುವಕನಂತೆ ಕಾಣಬೇಕು ಅಂತಾನೆ ಅನೇಕ ರೀತಿಯ ಚಿಕಿತ್ಸೆಗಳಿಗೆ ತುಂಬಾನೇ ಹಣವನ್ನು ಖರ್ಚು ಮಾಡುತ್ತಾರಂತೆ ಅಂತ ಹೇಳಲಾಗುತ್ತಿದೆ. ಈ ವ್ಯಕ್ತಿ 45 ವರ್ಷ ವಯಸ್ಸಿನ ಸಾಫ್ಟ್‌ವೇರ್ ಮಿಲಿಯನೇರ್ ಆಗಿದ್ದು, ತಾವು 18 ವರ್ಷದ ಯುವಕನಂತೆ ಕಾಣಲು ಏನೆಲ್ಲಾ ಮಾಡುತ್ತಾರೆ ಅಂತ ಕೇಳಿದರೆ ನಿಮಗೆ ಆಶ್ಚರ್ಯವಾಗುವುದಂತೂ ನಿಜ.


ಇದನ್ನೂ ಓದಿ: Bangladesh: ಕಣ್ಣಾಮುಚ್ಚಾಲೆ ವೇಳೆ ಅಡಗಿಕೊಂಡ ಬಾಂಗ್ಲಾದ ಬಾಲಕ 6 ದಿನಗಳ ಬಳಿಕ ಮಲೇಷ್ಯಾದಲ್ಲಿ ಪತ್ತೆ!


ಈ ಎಲ್ಲಾ ಚಿಕಿತ್ಸೆ ಇರುತ್ತಂತೆ
ಬ್ಲೂಮ್ಬರ್ಗ್ ವರದಿ ಪ್ರಕಾರ, ಬಯೋಟೆಕ್ ಸಂಸ್ಥೆಯ ಓನರ್ ಬ್ರಿಯಾನ್ ಜಾನ್ಸನ್ ದುಬಾರಿ ವೈದ್ಯಕೀಯ ಚಿಕಿತ್ಸೆಗಳಿಗೆ ಒಳಗಾಗುತ್ತಿದ್ದಾರೆ. 18 ವರ್ಷದ ಯುವಕನ ಶ್ವಾಸಕೋಶದ ಸಾಮರ್ಥ್ಯ ಮತ್ತು ದೈಹಿಕ ಸಹಿಷ್ಣುತೆ, 37 ವರ್ಷದ ವ್ಯಕ್ತಿಯ ಹೃದಯ ಮತ್ತು 28 ವರ್ಷದ ಯುವಕನ ಚರ್ಮವನ್ನು ಈ ಪ್ರಕ್ರಿಯೆ ಒಳಗೊಂಡಿದೆ ಅಂತ ಅವರು ಹೇಳಿಕೊಂಡಿದ್ದಾರೆ.


30 ಕ್ಕೂ ಹೆಚ್ಚು ವೈದ್ಯರಿಂದ ಚಿಕಿತ್ಸೆ!
ಜಾನ್ಸನ್ ಒಬ್ಬ ಸಾಫ್ಟ್‌ವೇರ್ ಉದ್ಯಮಿಯಾಗಿದ್ದು, 30 ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ತಜ್ಞರು ಅವರ ಪ್ರತಿಯೊಂದು ದೈಹಿಕ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. 29 ವರ್ಷದ ಪುನರುತ್ಪಾದಕ ಔಷಧ ವೈದ್ಯ ಆಲಿವರ್ ಜೊಲ್ಮನ್ ನೇತೃತ್ವದ ತಂಡವು ಜಾನ್ಸನ್ ಅವರ ಎಲ್ಲಾ ಅಂಗಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದೆ. ಅಂದರೆ ಜಾನ್ಸನ್‌ಗೆ ಮೆದುಳು, ಹೃದಯ, ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಸ್ನಾಯುರಜ್ಜುಗಳು, ಹಲ್ಲುಗಳು, ಚರ್ಮ, ಕೂದಲು, ಮೂತ್ರಕೋಶ, ಶಿಶ್ನ ಮತ್ತು 18 ವರ್ಷ ವಯಸ್ಸಿನ ಗುದನಾಳವನ್ನು ಹೊಂದುವಂತೆ ಮಾಡುತ್ತಿದ್ದಾರೆ ವೈದ್ಯರು.


ಇದನ್ನೂ ಓದಿ: Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ




ದುಬಾರಿ ಚಿಕಿತ್ಸೆಯಿಂದ ಈ ಅಂಗಗಳೆಲ್ಲ ಬರುತ್ತೆ!
ಕ್ಯಾಲಿಫೋರ್ನಿಯಾದ ವೆನಿಸ್​ನಲ್ಲಿರುವ ಜಾನ್ಸನ್ ಅವರ ಮನೆಯಲ್ಲಿ ವೈದ್ಯಕೀಯ ಸೂಟ್​ನ ವೆಚ್ಚಗಳು ಸೇರಿದಂತೆ ಯೋಜನೆಯನ್ನು ಪ್ರಾರಂಭಿಸಲು ಹಲವಾರು ಮಿಲಿಯನ್ ಡಾಲರ್​ಗಳ ಹೂಡಿಕೆಯ ಅಗತ್ಯವಿತ್ತು. "ಈ ವರ್ಷ, ಅವರು ತಮ್ಮ ದೇಹಕ್ಕಾಗಿ ಕನಿಷ್ಠ 2 ಮಿಲಿಯನ್ ಡಾಲರ್ ಖರ್ಚು ಮಾಡುವ ಯೋಚನೆಯಲ್ಲಿದ್ದಾರೆ. ಮೇಲೆ ಹೇಳಿದಂತೆ ಈ ದುಬಾರಿ ಚಿಕಿತ್ಸೆಯಲ್ಲಿ ಜಾನ್ಸನ್ ಅವರು ಹೊಸದಾಗಿ ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳು, ಸ್ನಾಯುಗಳು, ಹಲ್ಲುಗಳು, ಚರ್ಮ, ಕೂದಲು, ಮೂತ್ರಕೋಶ, ಶಿಶ್ನ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಒಟ್ಟಾರೆ ಈ ಕೋಟ್ಯಧಿಪತಿ ಉದ್ಯಮಿ ಯಂಗ್‌ ಆಗಿ ಕಾಣಲು ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: