Money Return: ನೂರಲ್ಲ, ಸಾವಿರವಲ್ಲ ರಸ್ತೆ ಮೇಲೆ ಬಿದ್ದಿತ್ತು 45 ಲಕ್ಷ ಹಣ! ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್

ಹಿರಿಯ ಅಧಿಕಾರಿಗಳು ಇವರ ಪ್ರಾಮಾಣಿಕತೆಯನ್ನು ಮೆಚ್ಚಿ, ಹಾಡಿ ಹೊಗಳಿದ್ದಾರೆ. ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿಲಂಬಸ್ ಸಿನ್ಹಾಗೆ ಬಹುಮಾನವನ್ನು ಘೋಷಿಸಿದ್ದಾರೆ. ಆದರೆ ಈ ಹಣ ಯಾರದ್ದು ಎನ್ನುವುದೇ ಇದೀಗ ಯಕ್ಷಪ್ರಶ್ನೆಯಾಗಿದೆ!

ಹಣ ಹಿಂತಿರುಗಿಸಿದ ಪೊಲೀಸ್

ಹಣ ಹಿಂತಿರುಗಿಸಿದ ಪೊಲೀಸ್

  • Share this:
ರಾಯಪುರ, ಛತ್ತೀಸ್‌ಗಢ: ಹಣ (Money) ಅಂದರೆ ಹೆಣ (Dead Body) ಕೂಡ ಬಾಯಿ ತೆರೆಯುತ್ತೆ ಅಂತಾರೆ. ಅದರಲ್ಲೂ ರಸ್ತೆ (Road) ಮೇಲೆ 10 ರೂಪಾಯಿ ಸಿಕ್ಕಿದ್ರೂ ಎತ್ತಿ ಜೇಬಲ್ಲಿ ಹಾಕಿ ಕೊಳ್ಳುವವರೇ ಜಾಸ್ತಿ. ಅಂಥದ್ರಲ್ಲಿ ಟ್ರಾಫಿಕ್ ಪೊಲೀಸ್ (Traffic Police) ಒಬ್ಬರು ಬರೋಬ್ಬರಿ 45 ಲಕ್ಷ ರೂಪಾಯಿ (45 Lakh Rupees) ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಛತ್ತೀಸ್‌ಗಢ್ (Chhattisgarh) ರಾಜ್ಯದ ರಾಜಧಾನಿ ರಾಯ್‌ಪುರದಲ್ಲಿ (Raipur) ಶನಿವಾರ ಟ್ರಾಫಿಕ್ ಪೊಲೀಸ್‌ ಅಧಿಕಾರಿಯೊಬ್ಬರು 45 ಲಕ್ಷ ಹಣ ಇರುವ ಬ್ಯಾಗನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ.

 ರಸ್ತೆಯಲ್ಲಿ ಬಿದ್ದಿತ್ತು ಕಂತೆ ಕಂತೆ ಹಣ

ನವ ರಾಯ್‌ಪುರದ ಕಯಾಬಂಧ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್‌ಸ್ಟೆಬಲ್ ನಿಲಂಬರ್ ಸಿನ್ಹಾ ಅವರು ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬ್ಯಾಗ್ ಅನ್ನು ಕಂಡುಕೊಂಡಿದ್ದಾರೆ.  ಬ್ಯಾಗ್ ಪರಿಶೀಲಿಸಿದಾಗ ಅದರೊಳಗೆ 2000 ಮತ್ತು 500 ರೂ. ನೋಟುಗಳ ಕಂತೆ ಕಂಡುಬಂದಿದೆ. ಈ ಬ್ಯಾಗ್​ನಲ್ಲಿ ಒಟ್ಟು 45 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಿವಿಲ್ ಲೈನ್ಸ್ ಠಾಣೆಗೆ ಬ್ಯಾಗ್ ಅನ್ನು ಹಸ್ತಾಂತರಿಸಿದ್ದಾರೆ.

ಪೊಲೀಸನ ಪ್ರಾಮಾಣಿಕತೆಗೆ ಬಹುಮಾನ

 ಹಿರಿಯ ಅಧಿಕಾರಿಗಳು ಇವರ ಪ್ರಾಮಾಣಿಕತೆಯನ್ನು ಮೆಚ್ಚಿ, ಹಾಡಿ ಹೊಗಳಿದ್ದಾರೆ. ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಿಲಂಬಸ್ ಸಿನ್ಹಾಗೆ ಬಹುಮಾನವನ್ನು ಘೋಷಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋರ್ ಅವರು ಹೇಳಿದ್ದಾರೆ. ಈ ನಗದಿನ ನಗದು ಮೂಲವನ್ನು ಕಂಡುಹಿಡಿಯಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Property Dispute: ಹಾಸಿಗೆ ಹಿಡಿದ ತಂದೆಗೆ ಆಕ್ಸಿಜನ್ ಕೊಡೋದಕ್ಕೆ ಒಪ್ಪದ ಮಗಳು! ಜೀವಕ್ಕಿಂತ ಆಸ್ತಿನೇ ಹೆಚ್ಚಾಯ್ತಾ ಇವಳಿಗೆ?

ಹಾಸಿಗೆ ಹಿಡಿದ ತಂದೆಗೆ ಆಕ್ಸಿಜನ್ ಕೊಡೋದಕ್ಕೆ ಒಪ್ಪದ ಮಗಳು! 

ಕೇರಳದ ನೆಡುಂಕಂಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ. 85 ವರ್ಷದ ವ್ಯಕ್ತಿಯೊಬ್ಬರು ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಉಸಿರಾಟ ಸಮಸ್ಯೆ ಪರಿಹರಿಸಲು ಸರ್ಕಾರಿ ಆಸ್ಪತ್ರೆಯಿಂದ ಮಾಸಿಕ 500 ರೂಪಾಯಿ ಬಾಡಿಗೆಗೆ ಆಕ್ಸಿಜನ್ ಸಿಲಿಂಡರ್ ವಿತರಿಸಲಾಯಿತು. ಆಸ್ತಿ ಹಂಚಿಕೆಯಾದ ನಂತರ, ತಂದೆಯನ್ನು ಮಗಳು ವಹಿಸಿಕೊಂಡರು. ಆದರೆ ಆಕ್ಸಿಜನ್ ಸಿಲಿಂಡರ್ ಕಳೆದ ಕೆಲ ದಿನಗಳ ಹಿಂದೆ ಮಗಳ ಮನೆಯಲ್ಲಿತ್ತು. ಸಿಲಿಂಡರ್ ಕೊಡುವಂತೆ ಕೇಳಿದಾಗ ಮಗಳು ನಿರಾಕರಿಸಿದ್ದಾಳೆ.

ವೈದ್ಯರ ಮಾತನ್ನೂ ಕೇಳದ ಮಗಳು

ಕೇರಳದ ನೆಡುಂಕಂಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ. 85 ವರ್ಷದ ವ್ಯಕ್ತಿಯೊಬ್ಬರು ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಉಸಿರಾಟ ಸಮಸ್ಯೆ ಪರಿಹರಿಸಲು ಸರ್ಕಾರಿ ಆಸ್ಪತ್ರೆಯಿಂದ ಮಾಸಿಕ 500 ರೂಪಾಯಿ ಬಾಡಿಗೆಗೆ ಆಕ್ಸಿಜನ್ ಸಿಲಿಂಡರ್ ವಿತರಿಸಲಾಯಿತು. ಆಸ್ತಿ ಹಂಚಿಕೆಯಾದ ನಂತರ, ತಂದೆಯನ್ನು ಮಗಳು ವಹಿಸಿಕೊಂಡರು. ಆದರೆ ಆಕ್ಸಿಜನ್ ಸಿಲಿಂಡರ್ ಕಳೆದ ಕೆಲ ದಿನಗಳ ಹಿಂದೆ ಮಗಳ ಮನೆಯಲ್ಲಿತ್ತು. ಸಿಲಿಂಡರ್ ಕೊಡುವಂತೆ ಕೇಳಿದಾಗ ಮಗಳು ನಿರಾಕರಿಸಿದ್ದಾಳೆ.

ಆಸ್ತಿ ವಿವಾದದಿಂದ ಕೆಂಡವಾಗಿದ್ದ ಮಗಳು

ಪೊಲೀಸರು ಹಾಗೂ ಆರೋಗ್ಯ ಇಲಾಖೆ ವೈದ್ಯರು ಮಧ್ಯ ಪ್ರವೇಶಿಸಿ ಸಿಲಿಂಡರ್ ಬಿಡುಗಡೆ ಮಾಡುವಂತೆ ಒತ್ತಾಯಿಸಿದರೂ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಕಾರಣ ಆಸ್ತಿ ವಿವಾದ ಎನ್ನಲಾಗಿದೆ. ಆಸ್ತಿ ಹಂಚಿಕೆ ಸಂಬಂಧ ನೆಡುಂಕಂಡಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೇ ದ್ವೇಷಕ್ಕೆ ಕಾರಣ ಎನ್ನಲಾಗಿದೆ. ವೃದ್ಧ ತಂದೆಗೆ 4 ಮಕ್ಕಳಿದ್ದು, ಈ ಪೈಕಿ ಒಬ್ಬ ಮಗಳಿಗೆ ತಮಿಳುನಾಡಿನಲ್ಲಿ ಮದುವೆಯಾಗಿದೆ. ಇನ್ನೊಬ್ಬ ಮಗ ತನ್ನ ತಂದೆಯನ್ನು ನೋಡಿಕೊಳ್ಳಲು ಸಿದ್ಧನಿಲ್ಲ. ಇತ್ತೀಚಿನವರೆಗೂ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: Smriti Irani: ಮಗಳ ವಿರುದ್ಧದ ಆರೋಪಕ್ಕೆ ಕೇಂದ್ರ ಸಚಿವೆ ಗರಂ, ಕಾಂಗ್ರೆಸ್‌ಗೆ ಲೀಗಸ್ ನೋಟಿಸ್ ಕೊಟ್ಟ ಸ್ಮೃತಿ ಇರಾನಿ

 ಕಠಿಣ ಕ್ರಮ ಕೈಗೊಳ್ಳಲು ಪೊಲೀಸರ ನಿರ್ಧಾರ

ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೊಲೀಸರು, ಜನಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪರಿಹಾರ ಸಿಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
Published by:Annappa Achari
First published: