Board Exams: 30 ವರ್ಷಗಳ ಬಳಿಕ ಹತ್ತನೆ ತರಗತಿ ಪರೀಕ್ಷೆ ಪಾಸ್ ಆದ ತಂದೆ, ಫೇಲ್ ಆದ ಮಗ

ನೀವು ಯಾವುದಾದರು ಪರೀಕ್ಷೆಯಲ್ಲಿ (Exam) ಫೇಲ್ ಆದರೆ ಎಷ್ಟು ಬಾರಿ ಮತ್ತೆ ಬರೆಯುತ್ತೀರಿ? ಅವರು ಚಾನ್ಸ್ ಕೊಟ್ಟಾಗಲೆಲ್ಲ ಅಥವಾ ಆ ಪರೀಕ್ಷೆಯಲ್ಲಿ ಪಾಸ್ ಅಗುವವರೆಗೂ ಬರೆಯುತ್ತಲೇ ಇರುತ್ತೀರಿ ಅಲ್ವಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಯಾವುದಾದರು ಪರೀಕ್ಷೆಯಲ್ಲಿ (Exam) ಫೇಲ್ ಆದರೆ ಎಷ್ಟು ಬಾರಿ ಮತ್ತೆ ಬರೆಯುತ್ತೀರಿ? ಅವರು ಚಾನ್ಸ್ ಕೊಟ್ಟಾಗಲೆಲ್ಲ ಅಥವಾ ಆ ಪರೀಕ್ಷೆಯಲ್ಲಿ ಪಾಸ್ ಅಗುವವರೆಗೂ ಬರೆಯುತ್ತಲೇ ಇರುತ್ತೀರಿ ಅಲ್ವಾ? ಹಾಗೇನೆ ಇಲ್ಲೊಬ್ಬರು ಹತ್ತನೇ ತರಗತಿಯ ಪರೀಕ್ಷೆಯನ್ನು (10th Standard Exam) ಸುಮಾರು 30 ವರ್ಷಗಳ (30 Years) ನಂತರ ತಮ್ಮ ಮಗನ ಜೊತೆಗೆ ಬರೆದು ಪಾಸ್ ಆಗಿದ್ದಾರೆ. 43ವರ್ಷದ ಭಾಸ್ಕರ್ ವಾಘಮಾರೆ ಮಹಾರಾಷ್ಟ್ರ (Maharashtra) ಮೂಲದವರಾಗಿದ್ದು, ಈ ಬಾರಿ ಮಹಾರಾಷ್ಟ್ರ ಕ್ಲಾಸ್ 10 ಬೋರ್ಡ್ ಎಕ್ಸಾಮ್ (Board Exam) ಅನ್ನು ಬರೆದು ಪಾಸ್ ಆಗಿದ್ದಾರೆ.

ಪರೀಕ್ಷೆ ಬರಿಯೋದು ಕೆಲವರಿಗೆ ಸುಲಭದ ವಿಚಾರ, ಆದ್ರೆ ಇನ್ನು ಕೆಲವರಿಗೆ ಅದು ಕಷ್ಟಕರವಾದ ಕೆಲಸ. ಯಾಕಂದ್ರೆ ಹಿಂದೆ ಅದೆಷ್ಟೋ ಜನ ತಮ್ಮ ಫ್ಯಾಮಿಲಿ ಪ್ರಾಬ್ಲಮ್ಸ್ ಕಾರಣದಿಂದ ಎಲ್ಲಿ ವರೆಗಾಗುತ್ತೊ ಅಲ್ಲಿಯವರೆಗೆ ಮಾತ್ರ ವ್ಯಾಸಾಂಗ ಮಾಡ್ತಿದ್ರು. ಇನ್ನು ಕೆಲವರು ಕೆಲಸ ಮಾಡುತ್ತಲೇ ತಮ್ಮ ವ್ಯಾಸಾಂಗವನ್ನು ಕೂಡಾ ಮಾಡುತ್ತಿದ್ದರು. ಇದನ್ನ ಈಗಲೂ ಕೂಡಾ ಹಲವಾರು ವಿಧ್ಯಾರ್ಥಿಗಳು ಮಾಡುತ್ತಿದ್ದಾರೆ. ಆದ್ರೆ ಈ ಲೇಖನದಲ್ಲಿ ನಾವು ಹೇಳಲು ಹೊರಟಿರುವ ವಿಚಾರವೇ ಬೇರೆ. ಅದೇನು ಅಂತ ಪೂರ್ತಿ ಸ್ಟೋರಿ ಓದಿ.

ಮಗನ ಜೊತೆಗೆ ಪರೀಕ್ಷೆ ಬರೆದ ತಂದೆ
ಇಲ್ಲಿ ಟ್ವಿಸ್ಟ್ ಏನಪ್ಪಾ ಅಂದ್ರೆ, ಈತ ಈ ಬಾರಿ ತನ್ನ ಮಗನ ಜೊತೆಗೆ ಪರೀಕ್ಷೆ ಬರೆದು ಪಾಸ್ ಆಗಿದ್ದಾನೆ ಆದರೆ ತನ್ನ ಮಗ ಫೇಲ್ ಆಗಿದ್ದಾನೆ. ಇಷ್ಟು ವರ್ಷಗಳ ಬಳಿಕ ಪರೀಕ್ಷೆ ಬರೆದು ಪಾಸ್ ಆಗಿರೋದಕ್ಕೆ ಖುಷಿ ಪಡಬೇಕೊ ಅಥವಾ ತನ್ನ ಮಗ ಫೇಲ್ ಆಗಿರುವುದಕ್ಕೆ ದುಖಃ ಪಡಬೇಕೊ ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ ಈತ.

ಇದನ್ನೂ ಓದಿರಿ : ಇಷ್ಟು ದಿನ ಒಂದು ರೂಲ್ಸ್, ಜುಲೈ 1ರಿಂದ ಇನ್ನೊಂದು ರೂಲ್ಸ್​! ಡೆಬಿಟ್​-ಕ್ರೆಡಿಟ್​ ಕಾರ್ಡ್​ ಬಳಸುವವರೇ ಇತ್ತ ನೋಡಿ

7ನೇ ತರಗತಿಯ ವರೆಗೆ ತಮ್ಮ ಶಿಕ್ಷಣವನ್ನು ತ್ಯಜಿಸಿದರು
ಭಾಸ್ಕರ್ ವಾಘಮಾರೆ ಎಂಬುವವರು 7ನೇ ತರಗತಿಯ ವರೆಗೆ ತಮ್ಮ ಶಿಕ್ಷಣವನ್ನು ತ್ಯಜಿಸಿ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಉದ್ಯೋಗವನ್ನು ಮಾಡಬೇಕಾಗಿತ್ತು, ಅವರು ಮತ್ತೆ ಅಧ್ಯಯನವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರು. 30 ವರ್ಷಗಳ ಅಂತರದ ನಂತರ, ಅವರು ತಮ್ಮ ಮಗನೊಂದಿಗೆ ಈ ವರ್ಷ ಪರೀಕ್ಷೆಗೆ ಹಾಜರಾಗಿದ್ದರು.

"ನಾನು ಇನ್ನೂ ಹೆಚ್ಚು ಓದಬೇಕು ಅಂತ ಕನಸುಗಳನ್ನು ಕಂಡಿದ್ದೆ, ಆದ್ರೆ ಕುಟುಂಬವನ್ನು ಉಳಿಸಿಕೊಳ್ಳಲು ನಾನು ನನ್ನ ಕನಸನ್ನು ಮರೆಯಬೇಕಾಯಿತು". ಎಂದು ಪುಣೆಯ ಖಾಸಗಿ ಖಚೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಬಾಬಾಸಾಹೆಬ್ ಅಂಬೇಡ್ಕರ್ ಡಯಾಸ್ ಪ್ಲೋಟ್‍ನ ನಿವಾಸಿಯಾದ ಭಾಸ್ಕರ್ ವಾಘಮಾರೆ ವರದಿಗಾರರೊಂದಿಗೆ ಹೇಳಿಕೊಂಡಿದ್ದಾರೆ.

ಇಬ್ಬರೂ ಒಟ್ಟಿಗೆ ಕೂತು ಪರೀಕ್ಷೆಗೆ ತಯಾರಿ
“ಕೆಲ ಸಮಯದಿಂದ, ನಾನು ಅಧ್ಯಯನವನ್ನು ಪುನರಾರಂಭಿಸಲು ಮತ್ತು ಕೆಲವು ಕೋರ್ಸ್‌ಗಳನ್ನು ಮಾಡಲು ಉತ್ಸುಕನಾಗಿದ್ದೆ ಅದು ನನಗೆ ಹೆಚ್ಚು ಗಳಿಸಲು ಸಹಾಯ ಮಾಡುತ್ತದೆ. ಹಾಗಾಗಿ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದೆ. ನನ್ನ ಮಗನೂ ಕೂಡಾ ಈ ವರ್ಷ ಪರೀಕ್ಷೆಗೆ ಹಾಜರಾಗುತ್ತಿದ್ದ ಕಾರಣ ಇಬ್ಬರೂ ಕೂತು ಒಟ್ಟಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆವು.” ಎಂದು ಅವರು ಹೇಳಿದರು. ವಾಘಮಾರೆ ಅವರು ಪ್ರತಿದಿನ ಓದುತ್ತಿದ್ದರು ಮತ್ತು ಕೆಲಸದ ನಂತರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.

ಮಗನಿಗೆ ಸಪ್ಲಿಮೆಂಟರಿ ಬರೆಯಲು ಪ್ರೋತ್ಸಾಹ
ಕೊನೆಗೂ ಈಗ ಸುಮಾರು 30 ವರ್ಷಗಳ ಬಳಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಸಂತೋಷವಾಗಿದ್ದೂ, ತನ್ನ ಮಗ ಎರಡು ಸಬ್ಜೆಕ್ಟ್ ಗಳಲ್ಲಿ ಫೇಲ್ ಅಗಿದ್ದಾನೆ ಎನ್ನಲಾಗಿದೆ. "ನಾನು ನನ್ನ ಮಗನನ್ನು ಸಪ್ಲಿಮೆಂಟರಿ ಎಕ್ಸಾಮ್ ಬರೆಯಲು ಸಹಾಯ ಮಾಡುತ್ತೇನೆ ಮತ್ತು ಈ ಬಾರಿ ಆತ ಪಾಸ್ ಆಗುವ ಹಾಗೆ ನಾನು ನೋಡಿಕೊಳ್ಳುತ್ತೇನೆ" ಎಂದು ವಾಘಮಾರೆ ತೀರ್ಮಾನಿಸಿದ್ದಾರಂತೆ.

ಇದನ್ನೂ ಓದಿರಿ : ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ​

ಮಿಶ್ರ ಭಾವನೆಯನ್ನು ಹೊಂದಿರುವ ಮಗ ಸಾಹಿಲ್
"ನನ್ನ ತಂದೆ ಅವರು ಯಾವಾಗಲೂ ಮಾಡಲು ಬಯಸಿದ್ದನ್ನು ಈಗ ಕೊನೆಗೂ ಮಾಡಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಆದರೆ, ನಾನಂತೂ ಬಿಡುವುದಿಲ್ಲ. ನಾನು ಸಪ್ಲಿಮೆಂಟರಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತೇನೆ ಮತ್ತು ಫೇಲ್ ಆದ ವಿಷಯಗಳಲ್ಲಿ ಪಾಸ್ ಆಗಲು ಪ್ರಯತ್ನಿಸುತ್ತೇನೆ, ”ಎಂದು ಸಾಹಿಲ್ ಹೇಳಿಕೊಂಡಿದ್ದಾರೆ.
Published by:Rahul TS
First published: