ದೆಹಲಿಯಲ್ಲಿ ಅಮಾನುಷ ಕೃತ್ಯ; ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಕ್ತಿಗೆ ಥಳಿಸಿದ ಕಿಡಿಗೇಡಿಗಳು

ಈ ಬೆನ್ನಲ್ಲೇ ಗೌತಮ್​ ಬುದ್ಧ ನಗರ ಪೊಲೀಸರು ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​​ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹಲ್ಲೆಗೊಳಗಾದ ದಲಿತ ವ್ಯಕ್ತಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನೋಯ್ಡಾ(ಡಿ.15): ದೆಹಲಿ ಸಮೀಪದ ನೋಯ್ಡಾದಲ್ಲಿ ಬಿರಿಯಾನಿ ಮಾರುತ್ತಿದ್ದ 43 ವರ್ಷದ ವ್ಯಕ್ತಿಗೆ ಕೆಳಜಾತಿಯವನೆಂದು ಕಿಡಿಗೇಡಿಗಳ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳು ವ್ಯಕ್ತಿಗೆ ಥಳಿಸುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಕೆಳಜಾತಿಗೆ ಸೇರಿದ ನಿನಗೆ ಬಿರಿಯಾನಿ ಮಾರಲು ಎಷ್ಟು ಧೈರ್ಯ ಎಂದು ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ.

ಶುಕ್ರವಾರ ರಸ್ತೆ ಬದಿಯಲ್ಲಿ ಈ ಘಟನೆ ನಡೆದಿದ್ದು, ಜನರು ವ್ಯಕ್ತಿಗೆ ಥಳಿಸಿರುವ ವಿಡಿಯೋ ಭಾರೀ ವೈರಲ್​ ಆಗಿದೆ. ವಿಡಿಯೋದಲ್ಲಿ ಆರೋಪಿಯೊಬ್ಬ ಬಿಗಿ ಮುಷ್ಠಿ ಹಿಡಿದು ಮುಖಕ್ಕೆ ಗುದ್ದಿ ಎಂದು ಹೇಳಿದ್ದಾನೆ.

ಘಟನೆ ಸಂಬಂಧ ಮೂವರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ಗ್ರೇಟರ್​ ನೋಯ್ಡಾದ ಎಸ್​ಪಿ ರಣವಿಜಯ್​ ಸಿಂಗ್​​ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ; ದೆಹಲಿಯಲ್ಲಿ 3 ಬಸ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ

"ದಲಿತ ದೌರ್ಜನ್ಯ ಕಾಯ್ದೆಯಡಿ ಮೂವರು ಆರೋಪಿಗಳ ವಿರುದ್ಧ ಎಫ್​ಐಆರ್​​ ದಾಖಲಾಗಿದೆ ಮತ್ತು ಬಿರಿಯಾನಿ ವ್ಯಾಪಾರಿ ಬಳಿ ಮಾತನಾಡಿದ್ದೇವೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಅತಿ ಶೀಘ್ರದಲ್ಲಿ ಬಂಧಿಸುತ್ತೇವೆ," ಎಂದು ಹೇಳಿದ್ದಾರೆ.

ಈ ಮಧ್ಯೆ ಭೀಮ್​​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್ ಈ ಅಮಾನುಷ ಕೃತ್ಯವನ್ನು ಖಂಡಿಸಿದ್ದಾರೆ. ಕೂಡಲೇ ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಕ್ತಿಯನ್ನು ಭೇಟಿಯಾಗಿ, ಹಲ್ಲೆ ನಡೆಸಿದ ಕಿಡಿಗೇಡಿ ಗುಂಪಿನ ಮೇಲೆ ಕ್ರಮಕ್ಕೆ ಮುಂದಾಗುವಂತೆ ನೋಯ್ಡಾ ಭೀಮ್​ ಆರ್ಮಿ ಘಟಕಕ್ಕೆ ಟ್ವೀಟ್​ ಮೂಲಕ ಸೂಚಿಸಿದ್ದಾರೆ. ​​

ಈ ಬೆನ್ನಲ್ಲೇ ಗೌತಮ್​ ಬುದ್ಧ ನಗರ ಪೊಲೀಸರು ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​​ಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹಲ್ಲೆಗೊಳಗಾದ ದಲಿತ ವ್ಯಕ್ತಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಶಾಪಿಂಗ್​​ ಮಾಲ್​ಗಳಲ್ಲಿ ಮೊಬೈಲ್ ನಂಬರ್​​​​ ಶೇರ್​ ಮಾಡಬೇಡಿ; ನಗರ ಪೊಲೀಸ್​ ಆಯುಕ್ತ​​ ಭಾಸ್ಕರ್​​ ರಾವ್​​

ಸದ್ಯ, ಗೌತಮ್​ ಬುದ್ಧ ನಗರ ಪೊಲೀಸ್​ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕೇಸ್​ ದಾಖಲಾಗಿದೆ.
Published by:Latha CG
First published: