HOME » NEWS » National-international » 43 TMC LEADERS SWORN IN AS MINISTERS IN BENGAL MAMATA BANERJEE TO CALL FIRST CABINET MEET TODAY MAK

Mamata Banerjee: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 43 ಟಿಎಂಸಿ ನಾಯಕರು; ಇಂದೇ ಮೊದಲ ಕ್ಯಾಬಿನೆಟ್ ಸಭೆ ಕರೆದ ಮಮತಾ ಬ್ಯಾನರ್ಜಿ

ಮೇ 5 ರಂದು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯಪಾಲ ಜಗದೀಪ್ ಧಂಕರ್ ಪ್ರಮಾಣವಚನ ಬೋಧಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 292 ವಿಧಾನಸಭಾ ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿ ಮಹುಮತದ ಸರ್ಕಾರವನ್ನು ರಚಿಸಿದ ಖ್ಯಾತಿಯನ್ನು ಗಳಿಸಿದೆ.

news18-kannada
Updated:May 10, 2021, 3:39 PM IST
Mamata Banerjee: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 43 ಟಿಎಂಸಿ ನಾಯಕರು; ಇಂದೇ ಮೊದಲ ಕ್ಯಾಬಿನೆಟ್ ಸಭೆ ಕರೆದ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ ಕ್ಯಾಬಿನೆಟ್.
  • Share this:
ಕೋಲ್ಕತ್ತಾ (ಮೇ 10); ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಡೆದ ಸರಳ ಸಮಾರಂಭದಲ್ಲಿ ಸೋಮವಾರ ನೂತನ ಸಚಿವರುಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 19 ರಾಜ್ಯ ಸಚಿವರು ಸೇರಿದಂತೆ 43 ಟಿಎಂಸಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಜ್ ಭವನದಲ್ಲಿ ರಾಜ್ಯಪಾಲ ಗಗ್ದೀಪ್ ಧಂಕರ್ ಪ್ರಮಾಣ ವಚನ ಬೋಧಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮಾಣವಚನ ಸಮಾರಂಭವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಸಲಾಯಿತು. ಅಲ್ಲದೆ, ಕೋವಿಡ್​ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಚರ್ಚಿಸಲು ಸಿಎಂ ಮಮತಾ ಬ್ಯಾನರ್ಜಿ ಇಂದೇ ಮೊದಲ ಕ್ಯಾಬಿನೆಟ್ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಪಕ್ಷದ ಮುಖಂಡರಾದ ಸುಬ್ರತಾ ಮುಖರ್ಜಿ, ಪಾರ್ಥ ಚಟರ್ಜಿ, ಫಿರ್ಹಾದ್ ಹಕೀಮ್, ಜ್ಯೋತಿ ಪ್ರಿಯಾ ಮಲ್ಲಿಕ್, ಮೊಲಾಯ್ ಘಟಕ್, ಅರೂಪ್ ಬಿಸ್ವಾಸ್, ಡಾ.ಶಶಿ ಪಂಜಾ ಮತ್ತು ಜಾವೇದ್ ಅಹ್ಮದ್ ಖಾನ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಏತನ್ಮಧ್ಯೆ, ಮಾಜಿ ಐಪಿಎಸ್ ಅಧಿಕಾರಿ ಹುಮಾಯೂನ್ ಕಬೀರ್, ಬಂಗಾಳದ ಮಾಜಿ ರಣಜಿ ನಾಯಕ ಮನೋಜ್ ತಿವಾರಿ ಮತ್ತು ಸಿಯುಲಿ ಸಾಹ ಸೇರಿದಂತೆ 15 ಹೊಸ ಮುಖಗಳನ್ನು ರಾಜ್ಯ ಸಂಪುಟದಲ್ಲಿ ಸೇರಿಸಲಾಗಿದೆ.

ಮೇ 5 ರಂದು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯಪಾಲ ಜಗದೀಪ್ ಧಂಕರ್ ಪ್ರಮಾಣವಚನ ಬೋಧಿಸಿದರು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ 292 ವಿಧಾನಸಭಾ ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಬಾರಿ ಮಹುಮತದ ಸರ್ಕಾರವನ್ನು ರಚಿಸಿದ ಖ್ಯಾತಿಯನ್ನು ಗಳಿಸಿದೆ.

ಇದನ್ನೂ ಓದಿ: ನನ್ನ ತವರು ದೇಶ ನರಳಬಾರದು: ಭಾರತದ ಸ್ಥಿತಿ ಕಂಡು ಮರುಗಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರಾ ಅವರು ಅನಾರೋಗ್ಯದ ಕಾರಣ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಸಹ ಅವರಿಗೆ ಕ್ಯಾಬಿನೆಟ್ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಟಿಎಂಸಿ ಮುಖ್ಯಸ್ಥರು ಮಿತ್ರಾ ಅವರನ್ನು ಹಣಕಾಸು ಇಲಾಖೆಯ ಚುಕ್ಕಾಣಿ ಹಿಡಿಯಲು ಬಯಸುತ್ತಾರೆ ಮತ್ತು ಉಪಚುನಾವಣೆಯ ಮೂಲಕ ಅವರನ್ನು ವಿಧಾನಸಭೆಯ ಸದಸ್ಯರನ್ನಾಗಿ ಮಾಡುವ ಯೋಜನೆಯನ್ನು ಹೊಂದಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ.
Youtube Video

ಏತನ್ಮಧ್ಯೆ, ಕಾಮರ್ಹತಿಯ ಶಾಸಕರಾದ ಮಾಜಿ ಸಾರಿಗೆ ಸಚಿವ ಮದನ್ ಮಿತ್ರಾ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. ಇತರ ಇಬ್ಬರು ಮಾಜಿ ಮಂತ್ರಿಗಳಾದ ತಪಶ್ ರಾಯ್ ಮತ್ತು ನಿರ್ಮಲ್ ಮಾಜ್ಹಿ ಅವರಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
Published by: MAshok Kumar
First published: May 10, 2021, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories