ಇಂದು ರಿಲಾಯನ್ಸ್ ವಾರ್ಷಿಕ ಸಭೆ; ಅನೇಕ ಯೋಜನೆಗಳ ಘೋಷಣೆ ಸಾಧ್ಯತೆ; ಗ್ರಾಹಕರಲ್ಲಿ ಗರಿಗೆದರಿದ ನಿರೀಕ್ಷೆ!

ಕಳೆದ ವರ್ಷದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ 2 ಅನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಅದರ ಬೆಲೆಯನ್ನು ಕೇವಲ 2,999 ರೂ. ಗೆ ನಿಗದಿಪಡಿಸಲಾಗಿತ್ತು. ಹೀಗಾಗಿ ಈ ಬಾರಿ ಜಿಯೋ ಫೋನ್ 3 ಬಿಡುಗಡೆಯಾಗಲಿದ್ದು ಅದರ ಬೆಲೆ 4,500 ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ.

MAshok Kumar | news18
Updated:August 12, 2019, 11:34 AM IST
ಇಂದು ರಿಲಾಯನ್ಸ್ ವಾರ್ಷಿಕ ಸಭೆ; ಅನೇಕ ಯೋಜನೆಗಳ ಘೋಷಣೆ ಸಾಧ್ಯತೆ; ಗ್ರಾಹಕರಲ್ಲಿ ಗರಿಗೆದರಿದ ನಿರೀಕ್ಷೆ!
ಮುಖೇಶ್ ಅಂಬಾನಿ
MAshok Kumar | news18
Updated: August 12, 2019, 11:34 AM IST
ಭಾರತದ ಬಹುದೊಡ್ಡ ವಾಣಿಜ್ಯ ವಹಿವಾಟು ಸಂಸ್ಥೆಯಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ತನ್ನ 42ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸೋಮವಾರ ಮಧ್ಯಾಹ್ನ 2 ಗಂಟೆಗೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಹಮ್ಮಿಕೊಂಡಿದೆ. ಹೀಗಾಗಿ ಹೂಡಿಕೆದಾರರು ಹಾಗೂ ಗ್ರಾಹಕರು ಜಿಯೋದಿಂದ ಹೊಸ ವಾಣಿಜ್ಯ ಯೋಜನೆಗಳ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಷೇರುಪೇಟೆ ತಜ್ಞರು ಕಳೆದ ವರ್ಷಕ್ಕಿಂತ ಈ ಋತುವಿನ ವಾರ್ಷಿಕ ಹಣಕಾಸು ಅಂಕಿಅಂಶ ಮತ್ತಷ್ಟು ಸುಧಾರಣೆಯಾಗಿರುವುದರ ಕಡೆಗೆ ಗಮನಹರಿಸುತ್ತಿದ್ದಾರೆ.

ಈ ವಾರ್ಷಿಕ ಸಭೆಯಲ್ಲಿ ಜಿಯೋ ಪೋನ್-3 ಎಂಬ ಹೊಸ ಮೊಬೈಲ್ ಲೋಕಾರ್ಪಣೆಯಾಗಲಿದೆ ಮತ್ತು ಜಿಯೋ ಬ್ರಾಡ್​ಬ್ಯಾಂಡ್​ ಸೇವೆಯ ಗಿಗಾ ಫೈಬರ್​ನ ಬೆಲೆ, ಮತ್ತು ಬ್ರಾಡ್​ಬ್ಯಾಂಡ್, ಲ್ಯಾಂಡ್​ಲೈನ್​ ಹಾಗೂ ಟೆಲಿವಿಷನ್ ಸೇವೆಗಳನ್ನು ಒಟ್ಟುಗೂಡಿಸುವ ಮೂರೂ ಪ್ಲೇ ಪ್ಲಾನ್ ಅನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ 2 ಅನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಅದರ ಬೆಲೆಯನ್ನು ಕೇವಲ 2,999 ರೂ. ಗೆ ನಿಗದಿಪಡಿಸಲಾಗಿತ್ತು. ಹೀಗಾಗಿ ಈ ಬಾರಿ ಜಿಯೋ ಫೋನ್ 3 ಬಿಡುಗಡೆಯಾಗಲಿದ್ದು ಅದರ ಬೆಲೆ 4,500 ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ.

ಇಂದು ಪ್ರಕಟಿಸಲಾಗುವ ಬ್ರಾಡ್​ಬ್ಯಾಂಡ್ ಯೋಜನೆಗಳು ಗ್ರಾಹಕರಿಗೆ ಸಹಕಾರಿಯಾಗುವ ರೀತಿಯಲ್ಲಿ ಬೆಲೆ ನಿಗದಿಪಡಿಸುವ ಸಾಧ್ಯತೆ ಇದೆ. ಕೇವಲ 500 ರಿಂದ 600 ರೂ ಒಳಗೆ ಬ್ರಾಡ್​ಬ್ಯಾಂಡ್​-ಲ್ಯಾಂಡ್​ಲೈನ್ ಹಾಗೂ ಟಿವಿ ಸೇವೆಯನ್ನೂ ಸೇರಿದ ಟ್ರಿಪಲ್ ಪ್ಲೇ ಸೇವೆಯನ್ನು ನೀಡಲಾಗುವುದು ಎಂದು ಈಗಾಗಲೇ ಸಿಎನ್​ಬಿಸಿ-ಟಿವಿ18 ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷ 2018 ಜುಲೈ 5 ರಂದು 41ನೇ ವಾರ್ಷಿಕ ಸಾಮಾನ್ಯ ಸಭೆ ನಡೆದಾಗ ರಿಲಾಯನ್ಸ್ ಕಂಪೆನಿಗಳ ಷೇರುಗಳು ಪ್ರತಿ ಷೇರಿಗೆ 964. ರೂ ದಾಖಲಾಗಿತ್ತು. ಈ ವರ್ಷ ಆಗಸ್ಟ್ 09ಕ್ಕೆ ಇದೇ ಷೇರು 1,162 ರೂ. ಗೆ ದಾಖಲಾಗಿದ್ದು, ಪ್ರತಿಶತ 20 ರಷ್ಟು ರಿಲಾಯನ್ಸ್ ಮಾರುಕಟ್ಟೆ ವೃದ್ಧಿಯಾಗಿದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಜಿಯೋ 250 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು. ಪ್ರತಿ ತಿಂಗಳಿಗೆ ಒಟ್ಟು 240 ಕೋಟಿ ಜಿಬಿ ಡೇಟಾ ಖರ್ಚಾಗಿದ್ದರೆ, ನೆಟ್​ವರ್ಕ್​ನಲ್ಲಿ ದ್ವನಿ ಬಳಕೆ ದಿನಕ್ಕೆ 530 ಕೋಟಿ ನಿಮಿಷಗಳನ್ನು ಧಾಟಿತ್ತು. ಇನ್ನೂ ಜಿಯೋ ಬಳಕೆದಾರರ ವೀಡಿಯೊ ಬಳಕೆ ತಿಂಗಳಿಗೆ 340 ಕೋಟಿ ಗಂಟೆಗಳು ಎಂದು ದಾಖಲಾಗಿತ್ತು.

ಮಾರುಕಟ್ಟೆ ಬಂಡವಾಳೀಕರಣದ ಮೂಲಕ ದೇಶದ ಅತಿದೊಡ್ಡ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಜೂನ್ ತ್ರೈಮಾಸಿಕದಲ್ಲಿ 10,104 ಕೋಟಿ ರೂ.ಗಳ ಲಾಭ ಗಳಿಸಿದೆ. ವಿಶ್ಲೇಷಕರ ಸಮೀಕ್ಷೆಯಲ್ಲಿ 9,852 ಕೋಟಿ ನಿವ್ವಳ ಲಾಭ ಗಳಿಸಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ರಿಲಾಯನ್ಸ್ ಲಾಭದ ಪ್ರಮಾಣ ಶೇ. 6.8 ರಷ್ಟು ವೃದ್ಧಿಯಾಗಿದೆ ಎಂದು ವರದಿಯಾಗಿದೆ.
First published:August 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...