Fire Video: ನೋಡ ನೋಡ್ತಿದ್ದಂತೇ ಹೊತ್ತಿ ಉರಿದ 42 ಮಹಡಿಗಳ ಕಟ್ಟಡ! ಭಯಾನಕ ವಿಡಿಯೋ ಇಲ್ಲಿದೆ

ನೋಡ ನೋಡುತ್ತಿದ್ದಂತೆಯೇ ಇಡೀ 42 ಅಂತಸ್ತಿನ ಕಟ್ಚಡ ಹೊತ್ತಿ ಉರಿದಿದೆ. ವೀಡಿಯೋಗಳಲ್ಲಿ ಕಟ್ಟಡದ ಒಂದು ಬದಿಯು ಕಪ್ಪಾಗಿದ್ದು, ಮತ್ತೊಂದು ಕಡೆ ಹೊತ್ತಿ ಉರಿಯುತ್ತಿದೆ. ಕೆಲವು ಭಾಗದಲ್ಲಿ ಕಟ್ಟಡದ ಅವಶೇಷಗಳು ನೆಲಕ್ಕೆ ಬೀಳುತ್ತಿರುವುದು ಕಾಣಿಸಿದೆ.

ಹೊತ್ತಿ ಉರಿದ ಕಟ್ಟಡ

ಹೊತ್ತಿ ಉರಿದ ಕಟ್ಟಡ

  • Share this:
ಚೀನಾ: 42 ಅಂತಸ್ತಿನ ಬಹುಮಹಡಿ ಕಟ್ಟಡವೊಂದು (multi-storied building) ನೋಡ ನೋಡುತ್ತಿದ್ದಂತೆಯೇ ಉರಿದು ಹೋಗಿರುವ ಘಟನೆ ಕೇಂದ್ರ ಹುನಾನ್ (Central Hunan) ಪ್ರಾಂತ್ಯದ ರಾಜಧಾನಿ ಚಾಂಗ್ಶಾ (Changsha) ನಗರದಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್ 42 ಅಂತಸ್ತಿನ ಚೀನಾ ಟೆಲಿಕಾಂ ಕಟ್ಟಡದಲ್ಲಿ (China Telecom building) ಹತ್ತಾರು ಮಹಡಿಗಳು ಸುಟ್ಟುಹೋಗಿವೆ, ಆದರೆ ಯಾವುದೇ ಸಾವು ನೋವುಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ. ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗೆ ಸೇರಿದ ಮಧ್ಯ ಚೀನಾದಲ್ಲಿ 42 ಅಂತಸ್ತಿನ ಗಗನಚುಂಬಿ ಕಟ್ಟಡದಿಂದ ಭಾರೀ ಬೆಂಕಿ ಜ್ವಾಲೆ ಮತ್ತು ಕಪ್ಪು ಹೊಗೆ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಇಡೀ ಕಟ್ಟಡ ಧಗಧಗಿಸುತ್ತಿರುವ ಭಯಾನಕ ವಿಡಿಯೋ (Terrible video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral in Social Media) ಆಗಿದೆ.

ಸಂಜೆ 4.30ರ ವೇಳೆಗೆ ನಡೆದ ಘಟನೆ

ಇಂದು ಸಂಜೆ 4.30 ರ ಹೊತ್ತಿಗೆ, ಚಾಂಗ್ಶಾದಲ್ಲಿರುವ ನಂಬರ್ 2, ಕಮ್ಯುನಿಕೇಷನ್ಸ್ ಟವರ್‌ನಲ್ಲಿ ಬೆಂಕಿ ಹೊತ್ತುಕೊಂಡಿತ್ತು. ಆದರೆ ಅಗ್ನಿಶಾಮಕ ದಳ ಸಿಬ್ಬಂದಿ ತ್ವರಿತವಾಗಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಸಂವಹನಗಳನ್ನು ಕಡಿತಗೊಳಿಸಲಾಗಿಲ್ಲ ಅಂತ ಚೀನಾ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಹೇಳಿಕೆ ನೀಡಿದೆ.





ನೋಡ ನೋಡುತ್ತಿದ್ದಂತೆಯೇ ಹೊತ್ತಿಕೊಂಡ ಕಟ್ಟಡ

ನೋಡ ನೋಡುತ್ತಿದ್ದಂತೆಯೇ ಇಡೀ 42 ಅಂತಸ್ತಿನ ಕಟ್ಚಡ ಹೊತ್ತಿ ಉರಿದಿದೆ. ವೀಡಿಯೋಗಳಲ್ಲಿ ಕಟ್ಟಡದ ಒಂದು ಬದಿಯು ಕಪ್ಪಾಗಿದ್ದು, ಮತ್ತೊಂದು ಕಡೆ ಹೊತ್ತಿ ಉರಿಯುತ್ತಿದೆ. ಕೆಲವು ಭಾಗದಲ್ಲಿ ಕಟ್ಟಡದ ಅವಶೇಷಗಳು ನೆಲಕ್ಕೆ ಬೀಳುತ್ತಿರುವುದು ಕಾಣಿಸಿದೆ. ಸ್ಥಳೀಯ ಮಾಧ್ಯಮದ ಇತರ ವೀಡಿಯೊಗಳಲ್ಲಿ  ಕಟ್ಟಡವನ್ನು ತೆರವು ಮಾಡಲು ಒಳಗಿರುವ ಕಾರ್ಮಿಕರು ಹರಸಾಹಸ ಪಡುತ್ತಿರುವುದನ್ನು ತೋರಿಸುತ್ತಿದೆ.

ಇದನ್ನೂ ಓದಿ: Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಅಗ್ನಿಶಾಮಕದಳದ 218 ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ

ಕೇಂದ್ರ ಹುನಾನ್ ಪ್ರಾಂತ್ಯದ ರಾಜಧಾನಿ ಚಾಂಗ್ಶಾ ನಗರದಲ್ಲಿ ಚೀನಾ ಟೆಲಿಕಾಂ ಕಟ್ಟಡದಲ್ಲಿ ಹತ್ತಾರು ಮಹಡಿಗಳು ಸುಟ್ಟು ಕರಕಲಾಗಿವೆ. ನಗರದ ಅಗ್ನಿಶಾಮಕ ಇಲಾಖೆಯು 218 ಮೀಟರ್ ಅಂದರೆ 720 ಅಡಿ ಕಟ್ಟಡದ ಮೇಲಿನ ಬೆಂಕಿಯನ್ನು ನಂದಿಸಲು 280 ಅಗ್ನಿಶಾಮಕ ಸಿಬ್ಬಂದಿಯನ್ನು ಕಟ್ಟಡದ ಮೇಲೆ ಕಳುಹಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ

ಇನ್ನು ಘಟನೆಯಲ್ಲಿ ಯಾವುದೇ ಗಾಯ ಅಥವಾ ಸಾವು ಸಂಭವಿಸಿಲ್ಲ ಎಂದು ಚೀನಾ ಟೆಲಿಕಾಂ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸೆಲ್‌ಫೋನ್ ಸೇವೆಗೆ ಯಾವುದೇ ಅಡ್ಡಿ ಇಲ್ಲ ಎಂದು ಅದು ಹೇಳಿದೆ. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಫೋನ್‌ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಅತ್ಯಂತ ಜನನಿಬಿಡ ಪ್ರದೇಶ ಚಾಂಗ್ಡಾ

ಹುನಾನ್ ಪ್ರಾಂತ್ಯದ ರಾಜಧಾನಿಯಾದ ಚಾಂಗ್ಶಾ ಸುಮಾರು 10 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಇದೀಗ ಬೆಂಕಿಗೆ ಒಳಗಾದ 715 ಅಡಿ ಎತ್ತರದ 42 ಅಂತಸ್ತಿನ ಕಟ್ಟಡವು 2000 ರಲ್ಲಿ ಪೂರ್ಣಗೊಂಡಿತು. ಇದೇ ಪ್ರದೇಶ ಅತ್ಯಂತ ಜನನಿಬಿಡವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: Danger School Bus: ಶಾಲಾ ಬಸ್‌ ಒಳಗೆ ಸಿಲುಕಿ ಬಾಲಕಿ ಸಾವು! ಹುಟ್ಟುಹಬ್ಬದ ದಿನವೇ ಉಸಿರು ಚೆಲ್ಲಿದ ಕಂದಮ್ಮ

ಚೀನಾದಲ್ಲಿ ಬೆಂಕಿ ಅವಘಡ ಸಾಮಾನ್ಯ

ಚೀನಾದಲ್ಲಿ ಮಾರಣಾಂತಿಕ ಬೆಂಕಿ ಅವಘಡಗಳು  ಸಾಮಾನ್ಯ ಎನ್ನುವಂತಾಗಿದೆ. ಕಳೆದ ವರ್ಷ ಜುಲೈನಲ್ಲಿ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಗೋದಾಮಿನ ಬೆಂಕಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದರು ಮತ್ತು ಕನಿಷ್ಠ 25 ಜನರು ಗಾಯಗೊಂಡಿದ್ದರು. ಅದಕ್ಕೂ ಮೊದಲು ಶಾಲೆಯಲ್ಲಿ ಬೆಂಕಿ ಬಿದ್ದಿದ್ದು, 18 ಜನರನ್ನು ಬಲಿ ಪಡೆದಿತ್ತು. 2017ರಲ್ಲಿ ಬೀಜಿಂಗ್‌ನಲ್ಲಿ 24 ಜನರು ಬೆಂಕಿಯಲ್ಲಿ ಸಾವನ್ನಪ್ಪಿದರು. ಇನ್ನು 2010 ರಲ್ಲಿ 28 ಅಂತಸ್ತಿನ ಶಾಂಘೈ ವಸತಿ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ 58 ಜನರು ಸಾವನ್ನಪ್ಪಿದ್ದರು.
Published by:Annappa Achari
First published: