• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viagra: ಸಂಗಾತಿಯೊಂದಿಗೆ ಎಂಜಾಯ್ ಮಾಡಲು ವಯಾಗ್ರ ಸೇವಿಸಿದ, ಆ ಒಂದು ತಪ್ಪಿಂದ ಪ್ರಾಣವನ್ನೇ ಬಿಟ್ಟ!

Viagra: ಸಂಗಾತಿಯೊಂದಿಗೆ ಎಂಜಾಯ್ ಮಾಡಲು ವಯಾಗ್ರ ಸೇವಿಸಿದ, ಆ ಒಂದು ತಪ್ಪಿಂದ ಪ್ರಾಣವನ್ನೇ ಬಿಟ್ಟ!

ವಯಾಗ್ರ ಸೇವಿಸಿ ವ್ಯಕ್ತಿ ಸಾವು

ವಯಾಗ್ರ ಸೇವಿಸಿ ವ್ಯಕ್ತಿ ಸಾವು

41 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಹೋಟೆಲ್​ನಲ್ಲಿ ತಂಗಿದ್ದು, ಆ ಸಂದರ್ಭದಲ್ಲಿ ಮದ್ಯದೊಂದಿಗೆ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿದ್ದಾನೆ. ಪರಿಣಾಮ ಮಾರನೇ ದಿನವೇ ಸಾವನ್ನಪ್ಪಿದ್ದಾನೆ. ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಗಳಿಂದ ತಿಳಿದುಬಂದಿದೆ.

  • News18 Kannada
  • 3-MIN READ
  • Last Updated :
  • Nagpur, India
  • Share this:

ನಾಗ್ಪುರ: 41 ವರ್ಷದ ವ್ಯಕ್ತಿಯೊಬ್ಬ ಮದ್ಯಪಾನ (Alcohol) ಮಾಡುವಾಗ ಮದ್ಯದ ಜೊತೆಗೆ 2 ವಯಾಗ್ರ (Viagra) ಮಾತ್ರೆ ಸೇವಿಸಿ ಸಾವನ್ನಪ್ಪಿರುವ ಘಟನೆ ನಾಗ್ಪುರದಲ್ಲಿ (Nagpur) ನಡೆದಿದೆ. ಸಂಗಾತಿಯೊಂದಿಗೆ ತೆರಳಿದ್ದ ಆ ವ್ಯಕ್ತಿ ಹೋಟೆಲ್​ನಲ್ಲಿ (Hotel) ಉಳಿದುಕೊಂಡಿದ್ದು, ಮದ್ಯ ಸೇವನೆ ವೇಳೆ 2 ವಯಾಗ್ರ ಮಾತ್ರೆಗಳನ್ನು ತೆಗೆದುಕೊಂಡಿದ್ದಾನೆ. 50 ಎಂಜಿಯ ಎರಡು ಮಾತ್ರೆ ತೆಗೆದುಕೊಂಡಿದ್ದ ಆತ ಮೆದುಳು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ ಎಂದು ವರದಿಗಳಿಂದ ತಿಳಿದುಬಂದಿದೆ.


ಈ ಬಗ್ಗೆ ನವದೆಹಲಿಯ ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್​ನ 6 ಸಂಶೋಧಕರ ಗುಂಪು ಅಧ್ಯಯನ ಮಾಡಿ ನೀಡಿದ್ದ ವರದಿಯನ್ನು ಫೊರೆನ್ಸಿಕ್​ ಆ್ಯಂಡ್ ಲೀಗಲ್ ಮೆಡಿಸಿನ್ ಜರ್ನಲ್​ ಪ್ರಕಟಿಸಿದೆ. ಇದರಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಹೋಟೆಲ್​ನಲ್ಲಿ ತಂಗಿದ್ದು, ಆ ಸಂದರ್ಭದಲ್ಲಿ ಮದ್ಯದೊಂದಿಗೆ ಎರಡು ವಯಾಗ್ರ ಮಾತ್ರೆಗಳನ್ನು ಸೇವಿಸಿದ್ದಾನೆ. ಪರಿಣಾಮ ಮಾರನೇ ದಿನವೇ ಸಾವನ್ನಪ್ಪಿದ್ದಾನೆ.


ಗೆಳತಿ ಸಲಹೆ ನಿರ್ಲಕ್ಷಿಸಿ ಸಾವು


ಮದ್ಯ ಸೇವನೆ ಮಾಡುವಾಗ ವಯಾಗ್ರ  ತೆಗೆದುಕೊಂಡಿದ್ದ ಆತನಿಗೆ ಸ್ವಲ್ಪ ಅಸ್ವಸ್ಥತೆ ಉಂಟಾಗಿದೆ. ನಂತರ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ಹೋಗುವಂತೆ ಜೊತೆಗಿದ್ದ ಮಹಿಳೆ ಸಲಹೆ ನೀಡಿದ್ದಾಳೆ. ಆದರೆ ಆ ವ್ಯಕ್ತಿ ತನಗೆ ಈ ಹಿಂದೆಯೂ ಇಂತಹ ಸಮಸ್ಯೆ ಆಗಿದೆ ಎಂದು ಹೇಳಿ ಸ್ನೇಹಿತೆಯ ಸಲಹೆಯನ್ನು ನಿರ್ಲಕ್ಷಿಸಿದ್ದಾನೆ.


ಆದರೆ ಬಳಿಕ ಆತನ ದೈಹಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ನಂತರ ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸೇರುವ ಮುನ್ನವೇ ಆತ ಮೃತಪಟ್ಟಿದ್ದ ಎಂದು ವೈದ್ಯರು ದೃಢಪಡಿಸಿದ್ದಾರೆ. ಮೆದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಆ ವ್ಯಕ್ತಿ ಮರಣಹೊಂದಿದ್ದಾನೆ. ಮೆದುಳಿಗೆ ಆಮ್ಲಜನಕದ ವಿತರಣೆಯು ಕಡಿಮೆಯಾದಾಗ ಸೆರೆಬ್ರೊವಾಸ್ಕುಲರ್ ರಕ್ತಸ್ರಾವ ಉಂಟಾಗಿ ಈ ರೀತಿ ಸಾವು ಸಂಭವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ವಯಾಗ್ರ ಸೈಡ್​ ಎಫೆಕ್ಟ್​: ಲೈಂಗಿಕ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರ


ಆಲ್ಕೋಹಾಲ್ ಮತ್ತು ಔಷಧಿಗಳ ಮಿಶ್ರಣದಿಂದ ಸಾವು


ಮರಣೋತ್ತರ ಪರೀಕ್ಷೆಯ ಫಲಿತಾಂಶದಲ್ಲಿ, ಸಾವನ್ನಪ್ಪಿರುವ ವ್ಯಕ್ತಿಗೆ ಈ ಹಿಂದೆ ಯಾವುದೇ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ಇತಿಹಾಸ ಇರಲಿಲ್ಲ. ಆತ ಸೆರೆಬ್ರೊವ್ಯಾಸ್ಕುಲಾರ್ ಹ್ಯಾಮರೇಜ್​ನಿಂದ ಅಂದರೆ ಮೆದುಳಿಗೆ ಆಮ್ಲಜನಕದ ಕೊರತೆಯಾಗಿ ಸಾವಿಗೀಡಾಗಿದ್ದ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ ವ್ಯಕ್ತಿಯ ದೇಹದಲ್ಲಿ 300 ಗ್ರಾಮ್ ತೂಕದ ಹೆಪ್ಪುಗಟ್ಟಿದ ರಕ್ತ ಕಂಡುಬಂದಿದೆ. ಆಲ್ಕೋಹಾಲ್ ಮತ್ತು ಔಷಧಿಗಳ ಮಿಶ್ರಣ, ಹಾಗೆಯೇ ಆತನಿಗಿದ್ದ ಅಧಿಕ ರಕ್ತದೊತ್ತಡದಿಂದ ಸಾವು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.




ಜಾಗೃತಿಗಾಗಿ ವರದಿ


ಹಲವು ಜನರು ತಮ್ಮ ಯಾವುದೇ ವೈದ್ಯರ ಸಲಹೆ ಪಡೆಯದೇ ಮೆಡಿಕಲ್ ಸ್ಟೋರ್​ಗಳಲ್ಲಿ ಸಿಗುವಂತಹ ಕಾಮೋತ್ತೇಜಕ ಮಾತ್ರೆಗಳನ್ನು ತೆಗೆದುಕೊಂಡು ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ದೃಷ್ಟಿಯಿಂದ ಈ ಸಂಶೋಧನಾ ವರದಿಯನ್ನು ಜರ್ನಲ್ ಪ್ರಕಟಿಸಿದೆ.


ವಯಾಗ್ರ ತೆಗೆದುಕೊಳ್ಳುವುದು ಅಪಾಯಕಾರಿ


ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿರುವ ಪುರುಷರು ವಯಾಗ್ರ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ. ಈ ಮಾತ್ರೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಜನನಾಂಗದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ವಯಾಗ್ರವು ಸಿಲ್ಡೆನಾಫಿಲ್ ಎಂಬ ಔಷಧವನ್ನು ಹೊಂದಿದೆ. ದೈಹಿಕ ಕ್ರಿಯೆಗಳ ಮೂಲಕ ಸುಖವನ್ನು ಬಯಸುವ ಕೆಲವೊಬ್ಬರು ವಯಾಗ್ರ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ವೈದ್ಯರ ಸಲಹೆ ಪಡೆಯದೇ ಮಾತ್ರೆಗಳನ್ನು ತೆಗೆದುಕೊಂಡರೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ  ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


ಎಷ್ಟು ಪ್ರಮಾಣದಲ್ಲಿ ವಯಾಗ್ರ ಮಾತ್ರೆ ತೆಗೆದುಕೊಳ್ಳಬೇಕು?


ವಯಾಗ್ರ ಮಾತ್ರೆಯು 25 ಮಿಲಿ ಗ್ರಾಂ, 50 ಮಿಲಿ ಗ್ರಾಂ ಮತ್ತು 100 ಮಿಲಿ ಗ್ರಾಂ ರೂಪದಲ್ಲಿ ಸಿಗುತ್ತದೆ. ಈ ಮಾತ್ರೆಯನ್ನು ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿನಲ್ಲಿ ತೆಗೆದುಕೊಳ್ಳಬಹುದು. ಆದರೆ 24 ಗಂಟೆಗಳಲ್ಲಿ ಕೇವಲ ಒಂದು ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳಬಹುದು. ಈ ಮಾತ್ರೆಯ ಪರಿಣಾಮ ಸಾಮಾನ್ಯವಾಗಿ 5 ಗಂಟೆಗಳವರೆಗೂ ಇರುತ್ತದೆ. ಹೆಚ್ಚಿನ ಪುರುಷರಲ್ಲಿ ಇದರ ಪರಿಣಾಮವು 2 ರಿಂದ 3 ಗಂಟೆಗಳಲ್ಲಿ ಮುಗಿಯುತ್ತದೆ. ವೈದ್ಯರ ಶಿಫಾರಸ್ಸಿನಂತೆ ವಯಾಗ್ರವನ್ನು ತೆಗೆದುಕೊಂಡರೆ ಅದು ಸುರಕ್ಷಿತ ಔಷಧ ಎಂದು ಪರಿಗಣಿಸಲಾಗುತ್ತದೆ. ಆದರೆ, ಒಬ್ಬ ವ್ಯಕ್ತಿಯು ವಯಾಗ್ರವನ್ನು ಹೆಚ್ಚು ಸೇವಿಸಿದರೆ, ಅವನಲ್ಲಿ ಹಲವಾರು ಅಡ್ಡ ಪರಿಣಾಮ ಉಂಟಾಗಿ ಸಾವು ಸಂಭವಿಸಬಹುದು.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು