ಸಿಡ್ನಿ: ಯಾವುದೇ ಸಂಬಂಧವನ್ನು ಷರತ್ತುಗಳ ಮೇಲೆ ನಿಭಾಯಿಸೋದು ಕಷ್ಟ ಮತ್ತು ತಪ್ಪು. ಆದ್ರೆ ಇಂದಿನ ಕಾಲದಲ್ಲಿ ಹುಡುಗ/ಹುಡುಗಿ ತನ್ನ ಸಂಗಾತಿ ಹಾಗಿರಬೇಕು? ಹೀಗಿರಬೇಕು ಎಂದು ಕನಸಿನ ಲೋಕವನ್ನೇ ಕಟ್ಟಿಕೊಂಡಿರುತ್ತಾರೆ. ಕನಸು ಕಾಣೋದು ತಪ್ಪಲ್ಲ. ಆದ್ರೆ ಇಂತಹುವುದೇ ಹುಡುಗಿ ಬೇಕೆಂದು ಷರತ್ತು ಹಾಕೋದು ತಪ್ಪು. ಆಸ್ಟ್ರೇಲಿಯಾದ 41 ವರ್ಷದ ವ್ಯಕ್ತಿ ವರ್ಜಿನ್ ಹುಡುಗಿ(Girlfriend)ಯನ್ನು ಹುಡುಕುತ್ತಿದ್ದಾನೆ. ಕಳೆದ ಐದು ವರ್ಷದಿಂದ ಸಂಗಾತಿಯ ಶೋಧದಲ್ಲಿರುವ ಈ ವ್ಯಕ್ತಿ ಹಾಕುವ ಷರತ್ತುಗಳನ್ನು ಕೇಳಿ ಯುವತಿಯರು ಶಾಕ್ ಆಗುತ್ತಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಈ ವ್ಯಕ್ತಿ (Single Guy from Adelaide) ಫ್ರೊಫೆಶನಲ್ ಬೋರ್ಡ್ ಗೇಮಿಂಗ್ ಡಿಸೈನರ್. ಈತ ಅತಿ ಬುದ್ಧಿವಂತ ಮಹಿಳೆಯನ್ನು ಹುಡುಕುತ್ತಿದ್ದು, ಇಬ್ಬರ ಅನುಭವಗಳು ಹೋಲಿಕೆ ಆಗಬೇಕು ಎಂಬುವುದು ಈತನ ಷರತ್ತು.
ವಿಚಿತ್ರ ಷರತ್ತು ಹಾಕಿ ಒಂಟಿಯಾಗಿರುವ ಡೇನಿಯಲ್
41 ವರ್ಷದ ಡೇನಿಯಲ್ ವರ್ಜಿನ್ ಸಂಗಾತಿಯನ್ನು ಹುಡುಕುತ್ತಿರುವ ವ್ಯಕ್ತಿ. ಶಿಕ್ಷಣದ ಹಂತದ ಮುಗಿದ ಕೂಡಲೇ ಕೆಲಸದತ್ತ ಹೆಚ್ಚು ಫೋಕಸ್ ನೀಡಿದ್ದಾನೆ. ತನ್ನನ್ನು ಹಾರ್ಡ್ ವರ್ಕಿಂಗ್ ಮ್ಯಾನ್ ಎಂದು ಹೇಳಿಕೊಂಡಿರುವ ಡೇನಿಯಲ್, ತನ್ನಂತೆ ವರ್ಕಿಂಗ್ ಸ್ಟೈಲ್ ಹೊಂದಿರುವ ಸಂಗಾತಿಯನ್ನು ಹುಡುಕುತ್ತಿದ್ದಾನೆ. ಡೇನಿಯಲ್ 2016ರಲ್ಲಿ ತನ್ನ ವೆಬ್ಸೈಟ್ singleguyfromadelaide.com ಮುಖಾಂತರ ವಧು ಬೇಕಾಗಿರುವ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದನು. ಈ ಪೋಸ್ಟ್ ವಿಚಿತ್ರ ಷರತ್ತುಗಳನ್ನು ಹಾಕಿದ್ದರಿಂದ ಇದುವರೆಗೂ ಒಂಟಿಯಾಗಿಯೇ ಇದ್ದಾನೆ.
ಏನಿತ್ತು ಪೋಸ್ಟ್ ನಲ್ಲಿ?
ನನ್ನ ಹೆಸರು ಡೇನಿಯಲ್. ಸ್ವಲ್ಪ ವಿಚಿತ್ರ ಸ್ವಭಾವದ ವ್ಯಕ್ತಿ. ಆದ್ರೆ ಇದು ಸತ್ಯ. ಇದುವರೆಗೂ ಗೆಳೆಯನನ್ನು ಹೊಂದಿರದ, ಯಾರ ಜೊತೆಯೂ ಲೈಂಗಿಕ ಸಂಪರ್ಕ ಹೊಂದಿರದ ಸಂಗಾತಿಯನ್ನು ಹುಡುಕೋದು ಕಷ್ಟವಾಗುತ್ತಿದೆ. ನನಗೆ ರಿಲೇಶನ್ಶಿಪ್ ಗಾಗಿ ಯಾವುದೇ ಅವಸರವಿರಲ್ಲ. ನಾವು ಗೆಳೆತನದ ಜೊತೆ ನಮ್ಮ ಪಯಣವನ್ನು ಆರಂಭಿಸಬಹುದು ಎಂದು ಬರೆದುಕೊಂಡಿದ್ದರು. ನನ್ನ ಪ್ರಸ್ತಾವ ನಿಮಗೆ ಇಷ್ಟವಾಗಿದ್ರೆ ಟೆಲಿಗ್ರಾಂ ಅಥವಾ ಸ್ಕೈಪ್ ಮೂಲಕ ಸಂಪರ್ಕಿಸಬಹುದು ಎಂದು ಬರೆದುಕೊಳ್ಳಲಾಗಿದೆ.
ನಾನು ಇಲ್ಲಿ ಯಾರನ್ನೂ ಹೀಗೆ ಎಂದು ಜಡ್ಜ್ ಮಾಡುತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ವ್ಯವಹಾರದತ್ತ ಆಕರ್ಷಿತನಾಗಿದ್ದರಿಂದ ನನಗೆ ಸಮಯ ಇರಲಿಲ್ಲ. ಗರ್ಲ್ ಫ್ರೆಂಡ್ ಮಾಡಿಕೊಳ್ಳಲು ನನಗೆ ಸಮಯ ಇರಲಿಲ್ಲ. ಈಗ ನನ್ನೊಂದಿಗೆ ಜೀವನ ನಡೆಸುವಂತಹ ಸಂಗಾತಿಯನ್ನು ಹುಡುಕುತ್ತಿದ್ದೇದೆ ಎಂದಿದ್ದಾನೆ.
ಡೇನಿಯಲ್ ಗೆ ಮಹಿಳೆಯರ ಪ್ರಶ್ನೆ
ಈ ರೀತಿ ಪೋಸ್ಟ್ ಮಾಡಿ ಐದು ವರ್ಷಗಳೇ ಕಳೆದಿವೆ. ಆದ್ರೆ ಇದುವರೆಗೂ ಡೇನಿಯಲ್ ಗೆ ಯಾವುದೇ ಮದುವೆ ಪ್ರಸ್ತಾಪಗಳು ಬಂದಿಲ್ಲ. ಮದುವೆಗೆ ಮುಂಚೆಯೇ ಇಂತಹ ಷರತ್ತುಗಳನ್ನು ಹಾಕುವ ವ್ಯಕ್ತಿ ಮುಂದೆ ಅನುಮಾನಿಸಲ್ಲ ಅನ್ನೋದಕ್ಕೆ ಏನು ಗ್ಯಾರೆಂಟಿ? ಪತಿ-ಪತ್ನಿ ಸಂಬಂಧ ಷರತ್ತುಗಳ ಮೇಲೆ ನಡೆಯಲ್ಲ. ಮದುವೆ ಅನ್ನೋದು ನಂಬಿಕೆ. ಆ ನಂಬಿಕೆ ಇಲ್ಲದೇ ಯಾವ ಮಹಿಳೆ ನಿಮ್ಮನ್ನು ಸಂಗಾತಿಯಾಗಿ ಸ್ವೀಕರಿಸುತ್ತಾಳೆ ಎಂದು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: Police Sale Ganja: ಸಿಎಂ ತವರು ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಗಾಂಜಾ ಮಾರಾಟ ಆರೋಪ; ಪಿಐ ಸೇರಿ 7 ಸಿಬ್ಬಂದಿ ಅಮಾನತು!
ಸದ್ಯ ಈ ಷರತ್ತುಗಳಿಂದಲೇ ಡೇನಿಯಲ್ ವಿಶ್ವದಾದ್ಯಂತ ಸುದ್ದಿಯಲ್ಲಿದ್ದಾನೆ. ಡೇನಿಯಲ್ ಮಾಡಿಕೊಂಡಿರುವ ಪೋಸ್ಟ್ ಗೆ ಹಲವರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇಷ್ಟು ಸುತ್ತಿ ಬಳಸಿ ಬರೆದುಕೊಳ್ಳೋದು ಯಾಕೆ ಬೇಕಿತ್ತು? ನೇರವಾಗಿ ವರ್ಜಿನ್ ಸಂಗಾತಿ ಬೇಕೆಂದು ಹೇಳಬಹುದಿತ್ತು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು, ಡೇನಿಯಲ್ ನಿಮಗೆ ಬೆಸ್ಟ್ ಆಫ್ ಲಕ್. ಈ ಜಗತ್ತಿನಲ್ಲಿ ನೀವೇ ಒಳ್ಳೆಯ ವ್ಯಕ್ತಿ. ಆದಷ್ಟು ಬೇಗ ನಿಮಗೆ ಒಳ್ಳೆಯ ಸಂಗಾತಿ ಸಿಗಲಿ ಎಂದು ಹಾರೈಸಿದ್ದಾರೆ. ಮತ್ತೊಂದಿಷ್ಟು ಜನ, ಈಗಾಗಲೇ ವಯಸ್ಸು 41 ಆಗಿದ್ದು, ಮತ್ತೇಕೆ ಅವಸರ ಎಂದು ಟ್ರೋಲ್ ಮಾಡಿದ್ದಾರೆ.
ವರದಿ: ಮೊಹ್ಮದ್ ರಫೀಕ್ ಕೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ