Shocking News: 2021ರಲ್ಲಿ ಇಷ್ಟು ಜನ ಭಾರತೀಯರು ಪಾಕಿಸ್ತಾನದ ಪೌರತ್ವ ಪಡೆದುಕೊಂಡಿದ್ದಾರೆ!

ಬೇರೆ ಧರ್ಮದವರಿಗೆ ಬಲವಂತವಾಗಿ ಅವರನ್ನು ಆ ದೇಶದ ಧರ್ಮಕ್ಕೆ ಮತಾಂತರ ಮಾಡುವ ಅನೇಕ ದೇಶಗಳು ಇಂದಿಗೂ ಇವೆ. ಆ ದೇಶಗಳಲ್ಲಿ ಬಹು ಮುಖ್ಯವಾಗಿ ಒಂದು ದೇಶವಿದೆ. ಆ ದೇಶ ಯಾವುದು? ಅಲ್ಲಿ ಏಕೆ ಬೇರೆ ಧರ್ಮದ ಜನರು ಬದುಕಲು ಹೆಣಗಾಡುತ್ತಾರೆ? ನಂತರ ಅವರನ್ನು ತಮ್ಮ ದೇಶದ ಧರ್ಮಕ್ಕೆ ಮತಾಂತರ ಮಾಡಿಸುತ್ತಾರೆ ಏಕೆ? ಈ ಮತಾಂತರದ ಮೂಲ ಕೆಲವು ಸಲ ಮದುವೆಯಿಂದಲೂ ಉಂಟಾಗುತ್ತದೆಯೇ? ಎಂಬಂತಹ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವನ್ನು ಹುಡುಕೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವದೆಹಲಿ: ನಮ್ಮ ಭಾರತ (India) ಸರ್ವ ಧರ್ಮಗಳ ಸಮ್ಮಿಲನದ ದೇಶದಂತಿದೆ. ಆದರೆ ಇನ್ನು ಕೆಲವು ದೇಶಗಳು ಒಂದೆ ಧರ್ಮವನ್ನು ಮಾತ್ರ ನಮ್ಮ ದೇಶದಲ್ಲಿ ಪಾಲಿಸಬೇಕೆಂದು ಕಡ್ಡಾಯವಾದ ಆದೇಶವನ್ನು ಹೊರಡಿಸಿರುತ್ತವೆ. ಬೇರೆ ಧರ್ಮದವರಿಗೆ (Religion)  ಬಲವಂತವಾಗಿ ಅವರನ್ನು ಆ ದೇಶದ ಧರ್ಮಕ್ಕೆ ಮತಾಂತರ ಮಾಡುವ ಅನೇಕ ದೇಶಗಳು ಇಂದಿಗೂ ಇವೆ. ಆ ದೇಶಗಳಲ್ಲಿ ಬಹು ಮುಖ್ಯವಾಗಿ ಒಂದು ದೇಶವಿದೆ (Country). ಆ ದೇಶ ಯಾವುದು? ಅಲ್ಲಿ ಏಕೆ ಬೇರೆ ಧರ್ಮದ ಜನರು ಬದುಕಲು ಹೆಣಗಾಡುತ್ತಾರೆ? ನಂತರ ಅವರನ್ನು ತಮ್ಮ ದೇಶದ ಧರ್ಮಕ್ಕೆ ಮತಾಂತರ (Conversion) ಮಾಡಿಸುತ್ತಾರೆ ಏಕೆ? ಈ ಮತಾಂತರದ ಮೂಲ ಕೆಲವು ಸಲ ಮದುವೆಯಿಂದಲೂ (Marriage) ಉಂಟಾಗುತ್ತದೆಯೇ? ಎಂಬಂತಹ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವನ್ನು ಹುಡುಕೋಣ ಬನ್ನಿ.

ಏನಿದು ಸುದ್ದಿ?
2015 ರಲ್ಲಿ, ರಾಜಸ್ಥಾನದ ಕನೋಟಾದ ಹಿಂದಿನ ರಾಜಮನೆತನದ ಪದ್ಮಿನಿ ರಾಥೋಡ್ ಅವರು ಪಾಕಿಸ್ತಾನದ ಸಿಂಧ್‌ನಿಂದ ಅಮರಕೋಟ್ ರಾಜಮನೆತನದ ಕುನ್ವರ್ ಕರ್ಣಿ ಸಿಂಗ್ ಸೋಧಾ ಅವರೊಂದಿಗೆ ಗಡಿಯಾಚೆಗಿನ ವಿವಾಹವನ್ನು ವರದಿ ಮಾಡಲು ಪತ್ರಕರ್ತರಿಂದ ಕರೆಗಳನ್ನು ಸ್ವೀಕರಿಸಿದ್ದರು.'ಪಾಕಿಸ್ತಾನಿ ಹುಡುಗ, ಭಾರತೀಯ ಹುಡುಗಿ ಮತ್ತು ಜೈಪುರದಲ್ಲಿ ರಾಜಮನೆತನದ ಮದುವೆ' ಮತ್ತು 'ಗಡಿ ಮೀರಿದ ಮದುವೆ' ಆ ವರ್ಷ ಭಾರತೀಯ ಸುದ್ದಿ ಪೋರ್ಟಲ್‌ಗಳಲ್ಲಿ ಕೆಲವು ಮುಖ್ಯಾಂಶಗಳು ಹೀಗಿದ್ದವು. ಭಾರತದ ವಧು ಪಾಕಿಸ್ತಾನದ ವರನನ್ನು ಮದುವೆಯಾಗಿದ್ದರಿಂದ ಈ ಸುದ್ದಿ ಆಗ ವಿಶೇಷವಾಗಿತ್ತು.

ಪಾಕಿಸ್ತಾನದ ಪೌರತ್ವ ಪಡೆಯಲು ಇರುವ ಅಡೆ-ತಡೆಗಳೇನು?
ಏಳು ವರ್ಷಗಳ ನಂತರ, ಪದ್ಮಿನಿ ಕಠೋರ ಅವರು ಅಲ್ಲಿನ ಪೌರತ್ವದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನವು ಪ್ರಪಂಚದ ಅತ್ಯಂತ ಅಪಾಯಕಾರಿ ಗಡಿ ಎಂದು ಕರೆಯಲಾಗುತ್ತದೆ. ಪಾಕಿಸ್ತಾನಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಹೆಚ್ಚಿನ ಭಾರತೀಯರಂತೆ, 34 ವರ್ಷದ ಪದ್ಮಿನಿ ವೈವಾಹಿಕ ಉದ್ದೇಶಕ್ಕಾಗಿ ಈ ಪೌರತ್ವದ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Snake Bite: ಹಾವು ಕಡಿದು ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಸರ್ಪ ಕಚ್ಚಿ ಸಾವು

“ನಾನು 2015 ರಲ್ಲಿ ಕುನ್ವರ್ ಕರ್ಣಿ ಸಿಂಗ್ ಅವರನ್ನು ವಿವಾಹವಾದೆ. ನಮಗೆ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವ ಐದು ವರ್ಷದ ಮಗನಿದ್ದಾನೆ. ನಮ್ಮ ಕುಟುಂಬದಲ್ಲಿ ನಾನು ಒಬ್ಬಳೇ ಪಾಕಿಸ್ತಾನಿ ಪೌರತ್ವವನ್ನು ಹೊಂದಿಲ್ಲ. ಇದರಿಂದ ಪಾಕಿಸ್ತಾನದೊಳಗೆ ಪ್ರಯಾಣಿಸಲು ದಿನನಿತ್ಯ ನನಗೆ ತೊಂದರೆಯಾಗುತ್ತದೆ. ನಾನು ಇನ್ನೂ ಭಾರತೀಯ ಪ್ರಜೆಯಾಗಿರುವುದರಿಂದ, ವೀಸಾ ಇಲ್ಲದೆ ನಾನು ಒಂದು ಪಾಕಿಸ್ತಾನಿ ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ. ಇದನ್ನು ಪ್ರಕ್ರಿಯೆಗೊಳಿಸಲು ಸಾಮಾನ್ಯವಾಗಿ 15-20 ದಿನಗಳನ್ನು ತೆಗೆದುಕೊಳ್ಳುತ್ತದೆ ”ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

“2019 ರ ಪುಲ್ವಾಮಾ ದಾಳಿಯಾಗುವ ಮುಂಚೆ, ಪಾಕಿಸ್ತಾನ ಸರ್ಕಾರ ವರ್ಷಕ್ಕೆ ನಾಲ್ಕು ಮರು-ಪ್ರವೇಶಗಳನ್ನು ಅನುಮತಿಸುತ್ತಿದ್ದರು. ಈಗ, ಕೇವಲ ಎರಡು ಮರು-ಪ್ರವೇಶಗಳನ್ನು ಮಾತ್ರ ಅನುಮತಿಸುತ್ತಾರೆ. ಇದರಿಂದ ನಾವು ಕುಟುಂಬ ಸಮೇತ ವಿದೇಶಕ್ಕೆ ಪ್ರವಾಸಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ” ಎಂದು ಪದ್ಮಿನಿ ವಿವರಿಸಿದರು.

ಇದನ್ನೂ ಓದಿ:  ಅಮೆರಿಕ, ಭಾರತ, ಚೀನಾ, ಬ್ರಿಟನ್ ಬಿಟ್ಟು ಬೇರೆ ದೇಶಕ್ಕೆ ವಲಸೆ ಹೋಗ್ತಿದ್ದಾರೆ ಶ್ರೀಮಂತರು!

“ನಾನು ಪಾಕಿಸ್ತಾನದಲ್ಲಿ ಒಂದು ತುಂಡು ಭೂಮಿಯನ್ನು ಖರೀದಿಸಲು ನಿರ್ಧಿರಿಸಿದರೂ ಸಹ , ನಾನು ಅದನ್ನು ನನ್ನ ಗಂಡನ ಹೆಸರಿನಲ್ಲಿಯೇ ನೋಂದಾಯಿಸಬೇಕು. ನಾನು ಪಾಕಿಸ್ತಾನದ ಪೌರತ್ವ ಪಡೆಯುವವರೆಗೆ, ನಾನು ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಸಿಎನ್‌ಐಸಿ ಕಾರ್ಡ್‌ನಲ್ಲಿ ನನ್ನ ಹೆಸರನ್ನು ಪಡೆಯಲು ಕೂಡ ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ಆರ್ಥಿಕ ಮತ್ತು ವ್ಯವಸ್ಥಾಪನಾ ತೊಂದರೆಗಳಿಗೆ ಕಾರಣವಾಗಿದೆ. ”ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

2021ರಲ್ಲಿ ಪಾಕಿಸ್ತಾನಿ ಪೌರತ್ವವನ್ನು ಪಡೆದ ಭಾರತೀಯರು
ಪಾಕಿಸ್ತಾನಿ ಪೌರತ್ವವನ್ನು ಪಡೆದ ಭಾರತೀಯರ ಸಂಖ್ಯೆಯು 2019 ರಲ್ಲಿ ಶೂನ್ಯದಲ್ಲಿ ಇದ್ದ ಸಂಖ್ಯೆ 2020 ರಲ್ಲಿ 7 ಮತ್ತು 2021 ರಲ್ಲಿ 41 ಕ್ಕೆ ಏರಿದೆ ಎಂದು ಸರ್ಕಾರಿ ಅಂಕಿ-ಅಂಶಗಳು ಕಳೆದ ತಿಂಗಳು ಬಹಿರಂಗಪಡಿಸಿವೆ. ಪದ್ಮಿನಿಯ ಕಥೆಯನ್ನು ಕೇಳಿದರೆ ಸಾಕು ಭಾರತೀಯರು ಪಾಕಿಸ್ತಾನದ ಪ್ರಜೆಗಳು ಏಕೆ ಆಗುತ್ತಿದ್ದಾರೆ ಎಂಬುದು ಸೂಕ್ತವಾಗಿ ಅರ್ಥ ಆಗುತ್ತದೆ. ಹಾಗೆಯೇ ಅವರು ಆ ದೇಶದಲ್ಲಿ ಎಷ್ಟೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ.
Published by:Ashwini Prabhu
First published: