ಕೆಲವೊಮ್ಮೆ ತುಂಬಾ ಅಪರೂಪವಾಗಿ ಸತ್ತಂತಹ ವ್ಯಕ್ತಿಗಳು(Dead Person) ಮತ್ತೆ ಜೀವಂತ(Alive)ವಾಗಿರುವ ಘಟನೆಗಳನ್ನು ನಾವು ಟಿವಿ(TV)ಯಲ್ಲಿ ನೋಡಿರುತ್ತೇವೆ ಅಥವಾ ದಿನಪತ್ರಿಕೆ(News Paper)ಗಳಲ್ಲಿ ಓದಿರುತ್ತೇವೆ. ಕೆಲವೊಂದು ಸಮಯದಲ್ಲಿ ಮೃತ ವ್ಯಕ್ತಿಯ ದೇಹವನ್ನು ಅಂತಿಮ ಸಂಸ್ಕಾರ(Last Rituals)ಕ್ಕೆಂದು ತೆಗೆದುಕೊಂಡು ಹೋದಾಗ ಅಲ್ಲಿ ಕೆಲವರಿಗೆ ಜೀವ ಮರಳಿ ಬಂದಿರುವಂತಹ ಘಟನೆಗಳು ನಡೆದಿವೆ. ಇಂತಹ ಘಟನೆಗಳು ಅಲ್ಲಿ ನೆರದ್ದಿದ್ದವರನ್ನು ಭಯಭೀತರನ್ನಾಗಿಸುವುದಲ್ಲದೆ, ಸತ್ತಂತಹ ವ್ಯಕ್ತಿ ಹೇಗೆ ಮತ್ತೆ ಜೀವಂತವಾಗಿದ್ದಾನೆ ಎಂದು ಆಶ್ಚರ್ಯವನ್ನು ಸಹ ಉಂಟು ಮಾಡಿರುತ್ತದೆ. ಇಲ್ಲಿಯೂ ಇಂತಹದ್ದೇ ಒಂದು ವಿಚಿತ್ರ ಘಟನೆಯೊಂದು ನಡೆದಿದ್ದು, 40 ವರ್ಷದ ವ್ಯಕ್ತಿಯು ಮೃತಪಟ್ಟಿದ್ದು ಅವನ ದೇಹವನ್ನು ಶವಾಗಾರದ ಫ್ರೀಜರ್(Freezer)ನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿ ಇರಿಸಿದ 7 ಗಂಟೆಗಳ ನಂತರ ಆ ವ್ಯಕ್ತಿಯು ಜೀವಂತವಾಗಿದ್ದಾನೆ. ಈ ಸುದ್ದಿ ನಿಮಗೆ ನಂಬಲು ಅಸಾಧ್ಯವಾಗಬಹುದು. ಆದರೆ ಇದು ನಿಜವಾಗಿಯೂ ನಡೆದ ಘಟನೆಯಾಗಿದೆ.
Dead man become alive #Moradabad pic.twitter.com/QdtTpjicFL
— TEACHERS VOICE (@GSTA_DSWESTA) November 21, 2021
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಧುಬಾಲಾ "ಅವನು ಸತ್ತಿಲ್ಲ. ಇದು ಹೇಗೆ ಸಂಭವಿಸಿತು ನಮಗೆ ಗೊತ್ತಾಗುತ್ತಿಲ್ಲ, ನೋಡಿ ಅವನು ಏನನ್ನೋ ಹೇಳಲು ಬಯಸುತ್ತಿದ್ದಾನೆ, ಅವನು ಇನ್ನೂ ಉಸಿರಾಡುತ್ತಿದ್ದಾನೆ" ಎಂದು ಹೇಳಿರುವುದನ್ನು ನಾವು ನೋಡಬಹುದಾಗಿದೆ.
ಉತ್ತರಪ್ರದೇಶದ ಮೊರಾದಾಬಾದ್ನ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಶಿವ್ಸಿಂಗ್ "ತುರ್ತು ವೈದ್ಯಕೀಯ ಅಧಿಕಾರಿ ರೋಗಿಯನ್ನು ಬೆಳಗ್ಗೆ 3 ಗಂಟೆಗೆ ನೋಡಿದ್ದರು. ಅವರ ಹೃದಯ ಬಡಿತವಿರಲಿಲ್ಲ, ಹಾಗಾಗಿ ಆ ವ್ಯಕ್ತಿಯನ್ನು ಅನೇಕ ಬಾರಿ ಪರೀಕ್ಷಿಸಿ, ತದನಂತರ ಅವನು ಸತ್ತಿದ್ದಾನೆ ಎಂದು ಘೋಷಿಸಲಾಗಿತ್ತು. ಆದರೆ ಬೆಳಗ್ಗೆ ಪೊಲೀಸ್ ತಂಡ ಮತ್ತು ಅವನ ಕುಟುಂಬವು ಅವನನ್ನು ಜೀವಂತವಾಗಿ ಕಂಡುಕೊಂಡಿತು. ಇದರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈಗ ಅವರ ಜೀವ ಉಳಿಸುವುದು ನಮ್ಮ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.
“ಇದು ಅಪರೂಪದ ಪ್ರಕರಣಗಳಲ್ಲಿ ಒಂದಾಗಿದ್ದು, ನಾವು ಇದನ್ನು ವೈದ್ಯಕೀಯ ನಿರ್ಲಕ್ಷ್ಯ ಎಂದು ಕರೆಯಲು ಸಾಧ್ಯವಿಲ್ಲ” ಎಂದು ಡಾ. ಶಿವ್ ಸಿಂಗ್ ಹೇಳಿದ್ದಾರೆ. ಕುಮಾರ್ ಈಗ ಮೀರತ್ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಲ್ಲಿ ಅವರ ಸ್ಥಿತಿ ಸುಧಾರಿಸಿದೆ ಎಂದು ಹೇಳಲಾಗುತ್ತಿದೆ. "ಶ್ರೀಕೇಶ್ ಅವರನ್ನು ಫ್ರೀಜರ್ನಲ್ಲಿ ಇರಿಸುವ ಮೂಲಕ ಅವರನ್ನು ಮೃತವೆಂದು ಘೋಷಿಸಿದ ನಿರ್ಲಕ್ಷ್ಯಕ್ಕಾಗಿ ನಾವು ವೈದ್ಯರ ವಿರುದ್ಧ ದೂರು ನೀಡುತ್ತೇವೆ" ಎಂದು ಮಧುಬಾಲಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ