News18 India World Cup 2019

ಉಗ್ರರ ಅಟ್ಟಹಾಸಕ್ಕೆ ಹೆದರಿದ ಕಾಶ್ಮೀರ; ನಾಲ್ಕೇ ದಿನದಲ್ಲಿ 40 ಪೊಲೀಸರ ರಾಜೀನಾಮೆ!

sushma chakre | news18
Updated:September 26, 2018, 2:56 PM IST
ಉಗ್ರರ ಅಟ್ಟಹಾಸಕ್ಕೆ ಹೆದರಿದ ಕಾಶ್ಮೀರ; ನಾಲ್ಕೇ ದಿನದಲ್ಲಿ 40 ಪೊಲೀಸರ ರಾಜೀನಾಮೆ!
sushma chakre | news18
Updated: September 26, 2018, 2:56 PM IST
ನ್ಯೂಸ್​18 ಕನ್ನಡ

ಶ್ರೀನಗರ (ಸೆ. 26): ಪಾಕ್​ ಉಗ್ರರ ಕೃತ್ಯಗಳಿಂದ ತಮ್ಮ ಸುರಕ್ಷತೆಯ ಬಗ್ಗೆ ಹೆದರಿರುವ 40 ಪೊಲೀಸರು ಇದುವರೆಗೆ ರಾಜೀನಾಮೆ ನೀಡಿದ್ದಾರೆ!

4 ದಿನಗಳ ಹಿಂದೆ ಪಾಕಿಸ್ತಾನ ಪ್ರೇರಿತ ಉಗ್ರರು ಕಾಶ್ಮೀರದೊಳಗೆ ನುಗ್ಗಿ ಇಬ್ಬರು ಪೊಲೀಸ್​ ಅಧಿಕಾರಿಗಳು ಸೇರಿದಂತೆ ಓರ್ವ ಕಾನ್​ಸ್ಟೆಬಲ್​ರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆ ಪಾಕಿಸ್ತಾನದ ನೀಚತನಕ್ಕೆ ಸಾಕ್ಷಿಯಾಗಿತ್ತು. ಈ ಘಟನೆ ಸಂಭವಿಸಿದ ನಂತರ ಕಾಶ್ಮೀರದಲ್ಲಿ ಸ್ವತಃ ಪೊಲೀಸ್​ ಸಿಬ್ಬಂದಿಗೂ ಸುರಕ್ಷತೆಯಿಲ್ಲ ಎಂಬ ವಿಷಯವಂತೂ ಮನದಟ್ಟಾಗಿತ್ತು.

ಬಳಿಕ, ಆ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡ ಭದ್ರತಾ ಪಡೆಯ ಸಿಬ್ಬಂದಿ ಲಷ್ಕರ್​ ಸಂಘಟನೆಯ ಉಗ್ರರನ್ನು ಹತ್ಯೆ ಮಾಡಿದ್ದರು. ಆದರೆ, ಕಾಶ್ಮೀರದ ಊರಿನೊಳಗೆ ನುಗ್ಗಿ ಮನೆಯಲ್ಲಿದ್ದ ಪೊಲೀಸ್​ ಸಿಬ್ಬಂದಿಯನ್ನೇ ತಮ್ಮ ವಶಕ್ಕೆ ಪಡೆದಿದ್ದ ಉಗ್ರರ ಭಂಡಧೈರ್ಯದಿಂದ ಪೊಲೀಸ್​ ಸಿಬ್ಬಂದಿಯ ಕುಟುಂಬಸ್ಥರು ಭಯಭೀತರಾಗಿದ್ದರು.

'ಕೆಲಸಕ್ಕೆ ರಾಜೀನಾಮೆ ನೀಡಿ ಅಥವಾ ಸಾಯಿರಿ' ಎಂದು ಉಮರ್​ ಮಜೀದ್​ ಸಂಘಟನೆಯವರು ಹೆದರಿಸಿದ್ದರು. ಇದರಿಂದ ಹೆದರಿದ ಕಾಶ್ಮೀರದ ಪೊಲೀಸ್​ ಸಿಬ್ಬಂದಿ ಒಬ್ಬೊಬ್ಬರಾಗಿ ರಾಜೀನಾಮೆ ನೀಡುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಕಾಶ್ಮೀರದ 40 ಪೊಲೀಸರು ರಾಜೀನಾಮೆ ನೀಡಿರುವುದಾಗಿ ತಿಳಿದುಬಂದಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಫೇಸ್​ಬುಕ್​, ಯೂಟ್ಯೂಬ್​ನಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ. ಆ ವಿಡಿಯೋಗಳಲ್ಲಿ ಇರುವವರು ನಿಜವಾದ ಪೊಲೀಸರೇ ಅಲ್ಲ. ತಪ್ಪು ಸಂದೇಶ ರವಾನಿಸುವ ಸಲುವಾಗಿ ಈ ವಿಡಿಯೋಗಳನ್ನು ಹರಿಬಿಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
Loading...

ಕಾಶ್ಮೀರದ ಗ್ರಾಮಗಳಲ್ಲಿ ಉಗ್ರರಿಂದ ಬೆದರಿಕೆ ಬಂದಿರುವುದು ಸತ್ಯ. ಕಾಶ್ಮೀರದಲ್ಲಿರುವ ಪೊಲೀಸರ ಸಂಖ್ಯೆಗೆ ಹೋಲಿಸಿದರೆ ರಾಜೀನಾಮೆ ನೀಡಿರುವವರ ಸಂಖ್ಯೆ ಬಹಳ ಕಡಿಮೆ. ಜಮ್ಮು ಕಾಶ್ಮೀರದಲ್ಲಿ ಒಟ್ಟಾರೆ 30 ಸಾವಿರ ಎಸ್​ಪಿಒಗಳಿದ್ದಾರೆ. ಅವರಲ್ಲಿ 40 ಜನ ರಾಜೀನಾಮೆ ನೀಡಿದ್ದಾರೆಂದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದು ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿವಿಆರ್​ ಸುಬ್ರಮಣ್ಯಂ ಹೇಳಿದ್ದಾರೆ.
First published:September 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...