ಪೋಷಕರ ಸಭೆ ನಡುವೆಯೇ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ; ಸಹಾಯಕನ ಬಂಧನ

ಈ ಘಟನೆ ಕಳೆದ ಶನಿವಾರ ಶಾಲಾ ಆವರಣದಲ್ಲೇ ನಡೆದಿದ್ದು, 27 ವರ್ಷದ ಆರೋಪಿ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮಗುವಿನ ತಾಯಿ ಶಾಲಾ ಮಾಸಿಕ ಸಭೆಗೆ ಹಾಜರಾಗಿದ್ದರು. ಈ ವೇಳೆ ಮಗುವನ್ನು ಕರೆದೊಯ್ದ ಸಹಾಯಕ ದುಶ್ಕೃತ್ಯವನ್ನು ಮಾಡಿದ್ದಾನೆ ಎನ್ನಲಾಗಿದೆ

Sharath Sharma Kalagaru | news18
Updated:May 27, 2019, 1:46 PM IST
ಪೋಷಕರ ಸಭೆ ನಡುವೆಯೇ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ; ಸಹಾಯಕನ ಬಂಧನ
ಸಾಂದರ್ಭಿಕ ಚಿತ್ರ
  • News18
  • Last Updated: May 27, 2019, 1:46 PM IST
  • Share this:
ಚಂಡೀಗಢ:  ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ಪೈಶಾಚಿಕ ಘಟನೆ ಪಂಜಾಬ್​ನ ಸಂಗ್ರೂರ್​ ಜಿಲ್ಲೆಯ ಧುರಿ ನಗರದ ಶಾಲೆಯೊಂದರಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಆರೋಪಿ ಶಾಲೆಯ ಬಸ್​ ಸಹಾಯಕ ಮತ್ತು ಕಂಡಕ್ಟರ್​ನನ್ನು ಬಂಧಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ಕಂಡುಬಂದಿದೆ.

ಈ ಘಟನೆ ಕಳೆದ ಶನಿವಾರ ಶಾಲಾ ಆವರಣದಲ್ಲೇ ನಡೆದಿದ್ದು, 27 ವರ್ಷದ ಆರೋಪಿ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಮಗುವಿನ ತಾಯಿ ಶಾಲಾ ಮಾಸಿಕ ಸಭೆಗೆ ಹಾಜರಾಗಿದ್ದರು. ಈ ವೇಳೆ ಮಗುವನ್ನು ಕರೆದೊಯ್ದ ಸಹಾಯಕ ದುಶ್ಕೃತ್ಯವನ್ನು ಮಾಡಿದ್ದಾನೆ ಎನ್ನಲಾಗಿದೆ.

ಪೊಲೀಸ್​ ಮೂಲಗಳ ಮಾಹಿತಿ ಪ್ರಕಾರ, ಮಗುವಿನೊಂದಿಗೆ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಆರೋಪಿ ನಂತರ ಶಾಲಾ ಕೊಠಡಿಯೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಮಾಸಿಕ ಪೋಷಕರ ಸಭೆಯ ನಂತರ ಘಟನೆಯ ಅರಿವೇ ಇಲ್ಲದ ತಾಯಿ ಮಗಳನ್ನು ಮನೆಗೆ ಕರೆದೊಯ್ದಿದ್ಧಾರೆ.

ಶನಿವಾರ ಮನೆಗೆ ಹೋದ ನಂತರ ಮಗು ಹೊಟ್ಟೆಯ ಭಾಗದಲ್ಲಿ ತೀವ್ರ ನೋವಾಗುತ್ತಿರುವ ಬಗ್ಗೆ ಪೋಷಕರಿಗೆ ತಿಳಿಸಿದೆ. ನಂತರ ಭಾನುವಾರವೂ ನೋವು ಎಂದಾಗ ಪೋಷಕರು ಮಗುವನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಘಟನೆಯ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ.

ಈ ಸುದ್ದು ಬೆಳಕಿಗೆ ಬಂದ ಬೆನ್ನಲ್ಲೇ ಧುರಿಯ ಖಾಸಗಿ ಶಾಲೆಯ ಮುಂದೆ ನಾಗರಿಕರು ಪ್ರತಿಭಟನೆ ಆರಂಭಿಸಿದ್ಧಾರೆ. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರತಿಭಟನಾಕಾರರು ಮಾತ್ರ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆರೋಪಿಗೆ ಶಿಕ್ಷೆಯನ್ನು ಸಾರ್ವಜನಿಕರೇ ಕೊಡುವುದಾಗಿ ಪ್ರತಿಟಭಟಿಸುತ್ತಿದ್ದು, ಸೂಕ್ತ ಪೊಲೀಸ್​ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ಬಳ್ಳಾರಿ ಬಿರುಬಿಸಿಲು ಎಫೆಕ್ಟ್; ಪೊಲೀಸ್ ನಾಯಿಗಳಿಗೆ ಕೂಲರ್ ವ್ಯವಸ್ಥೆ

ಪೊಲೀಸರ ಮಾಹಿತಿ ಪ್ರಕಾರ ಪ್ರತಿಭಟನಾಕಾರರು ಮೂರು ಒತ್ತಾಯಗಳನ್ನು ಮುಂದಿಟ್ಟಿದ್ದರು. ಮೊದಲನೆಯದಾಗಿ ಆರೋಪಿಯನ್ನು ಬಂಧಿಸುವುದು, ಎರಡನೆಯದಾಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಮತ್ತು ಮೂರನೆಯದಾಗಿ ಆರೋಪಿಯನ್ನು ಪ್ರತಿಭಟನಾಕಾರರಿಗೆ ನೀಡುವುದು. ಮೊದಲೆರಡು ಬೇಡಿಕೆಗಳಿಗೆ ಪೊಲೀಸರು ಒಪ್ಪಿಗೆ ಸೂಚಿಸಿದ್ದು, ಆರೋಪಿಯನ್ನು ಪ್ರತಿಭಟನಾಕಾರರಿಗೆ ನೀಡಲು ಸಾಧ್ಯವಿಲ್ಲ, ಆದರೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಅಧ್ಯಾಪಕನಿಗೆ ಬಿತ್ತು ಸಖತ್​ ಗೂಸಾ

ವಿರೋಧ ಪಕ್ಷ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬಿರ್​​ ಸಿಂಗ್​ ಬಾದಲ್​ ಘಟನೆಗೆ ಪ್ರತಿಕ್ರಿಯಿಸಿದ್ದು, ಘಟನೆಯಿಂದ ಆಘಾತಕ್ಕೊಳಗಾಗಿರುವುದಾಗಿ ಹೇಳಿದ್ದಾರೆ. ಪಂಜಾಬ್​ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ, ಅತ್ಯಾಚಾರಗಳಿಗೆ ಕಡಿವಾಣವೇ ಇಲ್ಲ. ಈ ಎಲ್ಲಾ ಸಮಸ್ಯೆಗಳೂ ದೈನಂದಿನ ಜೀವನದ ಭಾಗವಾಗಿದೆ. ಈ ಘಟನೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕ್ಯಾಪ್ಟನ್​ ಅಮ್ರಿಂದರ್​ ಸಿಂಗ್​ ಹೊರಬೇಕು ಎಂದು ಬಾದಲ್​ ಆಗ್ರಹಿಸಿದ್ದಾರೆ.

First published:May 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ