Poison Whiskey: ವಿಸ್ಕಿ ಕುಡಿಸಿ 4 ವರ್ಷದ ಮಗುವನ್ನೇ ಕೊಂದ ಅಮ್ಮ, ಅಜ್ಜಿ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ

ಈ ಪ್ರಕರಣದಲ್ಲಿ ಮಗು ತಾನೇ ತಾನಾಗಿ ಮನೆಯಲ್ಲಿದ್ದ ವಿಸ್ಕಿ ಕುಡಿದು ಸತ್ತಿಲ್ಲ. ಬದಲಾಗಿ ಮನೆಯಲ್ಲಿದ್ದ ತಾಯಿ ಹಾಗೂ ಈಕೆಯ ಅಮ್ಮ ಇಬ್ಬರೂ ಸೇರಿ ಮಗುವಿಗೆ ಹೊಟ್ಟೆ ತುಂಬಾ ವಿಸ್ಕಿ ಕುಡಿಸಿದ್ದಾರೆ. ಪುಟ್ಟ ಮಗುವಿನ ದೇಹದಲ್ಲಿ ವಿಸ್ಕಿ ಪ್ರಮಾಣ ಜಾಸ್ತಿಯಾಗಿ, ಮಗು ಸತ್ತಿದೆ ಅಂತ ವೈದ್ಯಕೀಯ ವರದಿಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲೂಸಿಯಾನ: ಮಕ್ಕಳು (Children) ಅಂದ್ರೆ ಮನೆಯ ದೀಪ ಅಂತಾರೆ. ಮಕ್ಕಳೇ ಮನೆಯ ಸಂಪತ್ತು (Wealth) ಅಂತ ಹಾಡಿ ಹೊಗಳುತ್ತಾರೆ. ಆ ಸಂಪತ್ತನ್ನು ಕಾಪಾಡಿಕೊಳ್ಳಲು ಅಪ್ಪ (Father), ಅಮ್ಮ (Mother) ಹಾಗೂ ಕುಟುಂಬದವರು ಎಷ್ಟೆಲ್ಲಾ ಕಷ್ಟಪಡುತ್ತಾರೆ. ಆದರೆ ಈ ಕೇಸ್‌ನಲ್ಲಿ (Case) ಎಲ್ಲಾ ಉಲ್ಟಾ ಆಗಿದೆ. ಮಗುವನ್ನು (Child) ಕಾಪಾಡಬೇಕಿದ್ದ ಮನೆಯವರೇ ಅಂದರೆ, ಜನ್ಮಕೊಟ್ಟ ಅಮ್ಮ ಹಾಗೂ ಮೊಮ್ಮಗುವನ್ನು (Grand Children) ಕಾಪಾಡಬೇಕಾಗಿದ್ದ ಅಜ್ಜಿ (Grand Mother) ಇಬ್ಬರೂ 4 ವರ್ಷದ ಪುಟ್ಟ ಕಂದಮ್ಮನನ್ನು ಸಾಯಿಸಿಬಿಟ್ಟಿದ್ದಾರೆ. ಅದೂ ಆ ಪುಟ್ಟ ಮಗುವಿಗೆ ವಿಸ್ಕಿ (Whiskey) ಕುಡಿಸಿ, ಕೊಂದಿದ್ದಾರೆ. ಇದೀಗ ಮಾಡಿದ ತಪ್ಪಿಗೆ ಇಬ್ಬರೂ ಜೈಲು (Jail) ಪಾಲಾಗಿದ್ದಾರೆ. ಹಾಗಿದ್ರೆ ವಿಸ್ಕಿ ಕುಡಿದು ಮಗು ಸತ್ತಿದ್ದಾದರೂ ಹೇಗೆ? ಪುಟ್ಟ ಕಂದಮ್ಮನನ್ನು ಅಮ್ಮ ಹಾಗೂ ಅಜ್ಜಿ ಕೊಲ್ಲಲು ಕಾರಣವೇನು? ಈ ಬಗ್ಗೆ ಇಲ್ಲಿದೆ ಓದಿ ಆಘಾತಕಾರಿ ಮಾಹಿತಿ…

ವಿಸ್ಕಿ ಕುಡಿದು ಸತ್ತ 4 ವರ್ಷದ ಹೆಣ್ಣು ಮಗು

ಹೌದು, ಲೂಸಿಯಾನ ದೇಶದ ಬ್ಯಾಟನ್ ಎಂಬಲ್ಲಿ ಇಂಥದ್ದೊಂದು ಘೋರ ಘಟನೆ ನಡೆದಿದೆ. ಕೇವಲ 4 ವರ್ಷದ ಪುಟ್ಟ ಮಗುವೊಂದು ವಿಸ್ಕಿ ಕುಡಿದು ಸತ್ತೇ ಹೋಗಿದೆ. ಮಗುವಿನ ದೇಹದಲ್ಲಿ ಆಲ್ಕೋ ಹಾಲ್ ಪ್ರಮಾಣ ಶೇಕಡಾ 680ರಷ್ಟಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಓವರ್ ಡೋಸ್ ಆಗಿ ಮಗು ಪ್ರಾಣ ಬಿಟ್ಟಿದೆ.

ಅಮ್ಮ ಹಾಗೂ ಅಜ್ಜಿ ಸೇರಿ ಮಗುವಿಗೆ ವಿಸ್ಕಿ ಕುಡಿಸಿದರು

ಅಂದಹಾಗೆ ಈ ಪ್ರಕರಣದಲ್ಲಿ ಮಗು ತಾನೇ ತಾನಾಗಿ ಮನೆಯಲ್ಲಿದ್ದ ವಿಸ್ಕಿ ಕುಡಿದು ಸತ್ತಿಲ್ಲ. ಬದಲಾಗಿ ಮನೆಯಲ್ಲಿದ್ದ ತಾಯಿ ಹಾಗೂ ಈಕೆಯ ಅಮ್ಮ ಇಬ್ಬರೂ ಸೇರಿ ಮಗುವಿಗೆ ಹೊಟ್ಟೆ ತುಂಬಾ ವಿಸ್ಕಿ ಕುಡಿಸಿದ್ದಾರೆ. ಪುಟ್ಟ ಮಗುವಿನ ದೇಹದಲ್ಲಿ ವಿಸ್ಕಿ ಪ್ರಮಾಣ ಜಾಸ್ತಿಯಾಗಿ, ಮಗು ಸತ್ತಿದೆ ಅಂತ ವೈದ್ಯಕೀಯ ವರದಿಗಳು ತಿಳಿಸಿವೆ.

ಇದನ್ನೂ ಓದಿ: Wheeling: ತುಮಕೂರಲ್ಲಿ ಹೆಚ್ಚಾಗುತ್ತಿದೆ ಬೈಕ್ ವ್ಹೀಲಿಂಗ್ ಹಾವಳಿ, ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗ್ತಾರೆ ಪುಂಡರು!

ಪೊಲೀಸರಿಂದ ಮಗುವಿನ ತಾಯಿ, ಅಜ್ಜಿ ಬಂಧನ

4 ವರ್ಷದ ಹೆಣ್ಣು ಮಗುವನ್ನು ಕೊಂದಿರುವ ಆರೋಪದ ಮೇಲೆ ಮಗುವಿನ ತಾಯಿ, 28 ವರ್ಷದ ಕಡ್ಜಾ ರೆಕಾರ್ಡ್ ಹಾಗೂ ಆಕೆಯ ತಾಯಿ, ಅಂದರೆ ಮಗುವಿನ ಅಜ್ಜಿ, 53 ವರ್ಷದ ರೊಕ್ಸಾನ್ನೆ ರೆಕಾರ್ಡ್ ಎಂಬ ಇಬ್ಬರನ್ನೂ ಪೊಲೀಸರು ಬಂಧಿಸಿ, ಪೂರ್ವ ಬ್ಯಾಟನ್‌ನ ರೂಜ್ ಪ್ಯಾರಿಷ್ ಜೈಲಿಗೆ ಅಟ್ಟಿದ್ದಾರೆ.

ಒತ್ತಾಯ ಮಾಡಿ ವಿಸ್ಕಿ ಕುಡಿಸಿದ ಪಾಪಿಗಳು

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದಾಳೆ. ಬಳಿಕ ತಾಯಿ, ಅಜ್ಜಿ ಸೇರಿ ಮಗುವಿಗೆ ಬಲವಂತವಾಗಿ ವಿಸ್ಕಿ ಕುಡಿಸಿದ್ದಾರೆ. ಮಗು ಮದ್ಯ ಸೇವಿಸಿರುವ ಪರಿಣಾಮ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ.

ಮಗುವಿನ ದೇಹದಲ್ಲಿತ್ತು ಶೇ. 680ರಷ್ಟು ಆಲ್ಕೋಹಾಲ್

ಮನುಷ್ಯ ದೇಹದಲ್ಲಿ ಆಲ್ಕೋ ಹಾಲ್‌ನ ಪ್ರಮಾಣ ಕಡಿಮೆ ಇದ್ದರೆ ಏನು ಸಮಸ್ಯೆ ಇಲ್ಲ. ಬದಲಾಗಿ 25% ನಷ್ಟು ಮಟ್ಟದ ಆಲ್ಕೋಹಾಲ್ ಮನುಷ್ಯನ ದೇಹದಲ್ಲಿ ವಿಷವನ್ನು ಉಂಟುಮಾಡಬಹುದು. 40% ಕ್ಕಿಂತ ಹೆಚ್ಚಿರುವ ಯಾವುದಾದರೂ ಆಲ್ಕೋ ಹಾಲ್‌ನ ಪ್ರಮಾಣ ಮನುಷ್ಯನನ್ನು ಕೋಮಾಕ್ಕೆ ತಳ್ಳಬಹುದು ಅಥವಾ ಆತನ ಸಾವಿಗೂ ಕಾರಣವಾಗಬಹುದು.

ಇದನ್ನೂ ಓದಿ: Wild Boars: ಕಾಡುಹಂದಿಗಳನ್ನು ಕ್ರಿಮಿ ಕೀಟ ವರ್ಗಕ್ಕೆ ಸೇರಿಸಿ ಅಂತಿದೆ ಕೇರಳ ಸರ್ಕಾರ, ಕೇಂದ್ರ ಕೊಟ್ಟ ಉತ್ತರವಿದು

ಈ ಕೇಸ್‌ನಲ್ಲಿ ಮಗುವಿನ ದೇಹದಲ್ಲಿ ಆಲ್ಕೋ ಹಾಲ್ ಪ್ರಮಾಣ ಶೇಕಡಾ 680ರಷ್ಟಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಓವರ್ ಡೋಸ್ ಆಗಿ ಮಗು ಪ್ರಾಣ ಬಿಟ್ಟಿದೆ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ತೀವ್ರವಾದ ಅಲ್ಕೋಹಾಲ್ ಸೇವನೆಯಿಂದ ಮಗು ಸಾವನ್ನಪ್ಪಿದ್ದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
Published by:Annappa Achari
First published: