ಪುಣೆ (ಅಕ್ಟೋಬರ್ 27); ರೈತನಿಂದ 2.35 ಲಕ್ಷ ರೂಪಾಯಿ ಈರುಳ್ಳಿ ಕದ್ದಿದ್ದ ನಾಲ್ಕು ಜನ ಕಳ್ಳರನ್ನು ಪುಣೆ ಗ್ರಾಮೀಣ ಪೊಲೀಸರು ಬಂಧಿಸಲಾಗಿದೆ. ಈ ನಾಲ್ವರ ಗುಂಪು ರೈತನಿಂದ 58 ಚೀಲ ಈರುಳ್ಳಿಯನ್ನು ಕದ್ದಿದ್ದರು ಎಎನ್‌ಐ ಪ್ರಕಾರ, ಅಕ್ಟೋಬರ್ 21 ರಂದು ರೈತನಿಂದ 58 ಚೀಲ ಈರುಳ್ಳಿಯನ್ನು ಕದ್ದಿದ್ದಕ್ಕಾಗಿ ಪುಣೆ ಗ್ರಾಮೀಣ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈರುಳ್ಳಿ ಇಟ್ಟುಕೊಂಡಿದ್ದ ಬ್ಯಾರಕ್‌ಗಳ ಬೀಗ ಮುರಿದಿದ್ದ ಕಳ್ಳರನ್ನೂ ರಾತ್ರೋರಾತ್ರಿ ಈರುಳ್ಳಿಯನ್ನು ಬೇರೆಡೆ ಸಾಗಿಸಿದ್ದರು.
"ಬಂಧನದ ನಂತರ ಕಳ್ಳರಿಂದ 2 ಲಕ್ಷ ರೂಪಾಯಿ ಮೌಲ್ಯದ 49 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಉಳಿದ ಚೀಲಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ದೇಶದಾದ್ಯಂತ ತೀವ್ರ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಬೆಳೆಯಲಾಗುತ್ತಿದ್ದ ಈರುಳ್ಳಿ ಬೆಲೆ ಭೂಮಿಯಲ್ಲೇ ಕೊಳೆಯುತ್ತಿದೆ. ಹೀಗಾಗಿ ಇದೀಗ ಈರುಳ್ಳಿ ಕೆಜಿಗೆ 75 ರಿಂದ 100ರೂ. ಗೆ ಏರಿದೆ ಕೆ.ಜಿ.ಗೆ ಏರಿದೆ. ಹೀಗಾಗಿ ಎಲ್ಲೆಡೆ ಈರುಳ್ಳಿಗೆ ಬೇಡಿಕೆಯೂ ಹೆಚ್ಚಿದೆ.
ಇದನ್ನೂ ಓದಿ : ಎಫ್ಡಿ ಠೇವಣಿಯ ದೊಡ್ಡ ಲಾಭಗಳು: ಇಲ್ಲಿವೆ ಅಧಿಕ ಲಾಭದಾಯಕವಾದ ಸ್ಥಿರ ಠೇವಣಿಯ ಮಾಹಿತಿಗಳು!
ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಪರಿಹಾರವನ್ನು ಒದಗಿಸಲು, ಕೇಂದ್ರವು ಶುಕ್ರವಾರ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳ ಮೇಲೆ ಸ್ಟಾಕ್ ಮಿತಿಗಳನ್ನು ಡಿಸೆಂಬರ್ 31 ರವರೆಗೆ ಜಾರಿಗೆ ತಂದಿದೆ. ಈಗ, ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಯನ್ನು ಕೇವಲ 2 ಟನ್ ವರೆಗೆ ಸಂಗ್ರಹಿಸಬಹುದು. ಆದರೆ, ಸಗಟು ವ್ಯಾಪಾರಿಗಳಿಗೆ 25 ಟನ್ ವರೆಗೆ ಇಡಲು ಅವಕಾಶವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ