• Home
  • »
  • News
  • »
  • national-international
  • »
  • Shocking: ನಾಲ್ವರು ಯುವತಿಯರಿಂದ ಕಾರ್ಮಿಕನ ಕಿಡ್ನಾಪ್, ರೇಪ್ ಮಾಡಿ ಬಿಸಾಕಿದ ಶ್ರೀಮಂತ ತರುಣಿಯರು

Shocking: ನಾಲ್ವರು ಯುವತಿಯರಿಂದ ಕಾರ್ಮಿಕನ ಕಿಡ್ನಾಪ್, ರೇಪ್ ಮಾಡಿ ಬಿಸಾಕಿದ ಶ್ರೀಮಂತ ತರುಣಿಯರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಂಜಾಬಿ ಭಾಷೆಯ ಜೊತೆಗೆ ಇಂಗ್ಲೀಷ್​ನ್ನೂ ಸಹ ಅವರು ಮಾತನಾಡುತ್ತಿದ್ದರು. ಈ ನಾಲ್ಕೂ ಯುವತಿಯರು ಶ್ರೀಮಂತ ಕುಟುಂಬಗಳಿಗೆ ಸೇರಿದವರಿರಬೇಕು ಎಂದು ಸಂತ್ರಸ್ತ ಆರೋಪಿಸಿದ್ದಾರೆ.

  • News18 Kannada
  • Last Updated :
  • Punjab, India
  • Share this:

    20 ವರ್ಷ ಆಸುಪಾಸಿನ ನಾಲ್ವರು ಯುವತಿಯರು ಸೇರಿ ಓರ್ವ ಕಾರ್ಮಿಕನನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿದ್ದಾರೆ ಎಂದು ಕಾರ್ಮಿಕನೋರ್ವ (Labour) ಆರೋಪಿಸಿದ್ದಾರೆ. ಕಾರ್ಮಿಕನ ಕಣ್ಣುಗಳಲ್ಲಿ ಕೆಮಿಕಲ್ ಒಂದನ್ನು ಹಾಕಿ ಡ್ರಗ್ ಸೇವಿಸುವಂತೆ ಒತ್ತಾಯಿಸಿ ಲೈಂಗಿಕವಾಗಿ ದುರ್ಬಳಕೆ (Labour Raped In Punjab) ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.  ಅಲ್ಲದೇ ಅಪಹರಣ ಮಾಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ನಂತರ ಆತನನ್ನು ಬೀದಿಬದಿಯಲ್ಲಿ ಹೊರದಬ್ಬಿದ್ದಾರೆ ಎಂದು ಕಾರ್ಮಿಕ ಆರೋಪಿಸಿದ್ದಾರೆ. ಈ ಆಘಾತಕಾರಿ ಘಟನೆ ಪಂಜಾಬ್​ನಲ್ಲಿ ಜಲಂಧರ್​ನಲ್ಲಿ (Jalandhar) ನಡೆದಿದ್ದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


    ನಾನು ಕಾರ್ಖಾನೆಯಿಂದ ಕೆಲಸ ಮುಗಿಸಿ ಮನೆಗೆ ಮರಳುವಾಗ ಒಂದು ಬಿಳಿ ಕಾರು ನನ್ನ ಪಕ್ಕವೇ ನಿಂತಿತು. ಆ ಕಾರನ್ನು ಚಲಾಯಿಸುತ್ತಿದ್ದ ಯುವತಿ ಇಳಿದು ವಿಳಾವೊಂದನ್ನು ಕೇಳಿದಳು. ನಾನು ವಿಳಾಸ ಹೇಳುತ್ತಿರುವಾಗಲೇ ಇತರ ಮೂವರು ಯುವತಿಯರು ನನ್ನ ಕಣ್ಣಿಗೆ ಕೆಮಿಕಲ್ ಒಂದನ್ನು ಸಿಂಪಡಿಸಿ ಬಲಾತ್ಕಾರದಿಂದ ನನ್ನನ್ನು ಕಾರಿನೊಳಗೆ ಎಳೆದೊಯ್ದರು ಎಂದು ಕಾರ್ಮಿಕ ವಿವರಿಸಿದ್ದಾರೆ.


    ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿದ ಯುವತಿಯರು
    ಅಲ್ಲದೇ ಕಾರಿನಲ್ಲಿ ಕೂರಿಸಿಕೊಂಡು ಕೈಗೆ ಹಗ್ಗ ಕಟ್ಟಿ ಕಣ್ಣಿಗೆ ಪಟ್ಟಿ ಕಟ್ಟಿ ಅಪರಿಚಿತ ಸ್ಥಳವೊಂದಕ್ಕೆ ನನ್ನನ್ನು ಕರೆದೊಯ್ದು ಅಲ್ಲಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡರು ಎಂದು ಕಾರ್ಮಿಕ ಆರೋಪಿಸಿದ್ದಾರೆ.


    ಕಂಠಪೂರ್ತಿ ಕುಡಿದಿದ್ದ ಯುವತಿಯರು
    ಈ ನಾಲ್ಕೂ ಯುವತಿಯರು ಕಂಠಪೂರ್ತಿ ಕುಡಿದಿದ್ದರು. ಅಲ್ಲದೇ ಮಾದಕದ್ರವ್ಯದ ನಶೆಯಲ್ಲಿದ್ದರು. ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮಧ್ಯರಾತ್ರಿ ಮೂರು ಗಂಟೆಗೆ ಅಪರಿಚಿತ ಸ್ಥಳದಲ್ಲಿ ಕೈ ಮತ್ತು ಕಣ್ಣುಗಳನ್ನು ಕಟ್ಟಿದ ಸ್ಥಿತಿಯಲ್ಲೇ ಎಸೆದು ಹೋದರು ಎಂದು ಆರೋಪಿಸಲಾಗಿದೆ.


    ಇದನ್ನೂ ಓದಿ: Crime News: ಹತ್ಯೆ ನಡೆಸಿ ಆಸ್ಟ್ರೇಲಿಯಾದಿಂದ ಪರಾರಿಯಾದ ಭಾರತೀಯ ನರ್ಸ್: ಮಾಹಿತಿ ನೀಡುವವರಿಗೆ ಬಂಪರ್ ಬಹುಮಾನ!


    ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಿದ್ರು
    ಪಂಜಾಬಿ ಭಾಷೆಯ ಜೊತೆಗೆ ಇಂಗ್ಲೀಷ್​ನ್ನೂ ಸಹ ಅವರು ಮಾತನಾಡುತ್ತಿದ್ದರು. ಈ ನಾಲ್ಕೂ ಯುವತಿಯರು ಶ್ರೀಮಂತ ಕುಟುಂಬಗಳಿಗೆ ಸೇರಿದವರಿರಬೇಕು ಎಂದು ಸಂತ್ರಸ್ತ ಆರೋಪಿಸಿದ್ದಾರೆ.


    ಆಗ ಮದ್ಯ, ಈಗ 60 ಲಕ್ಷ ಮೌಲ್ಯದ 500 ಕೆಜಿ ಗಾಂಜಾ ತಿಂದ ಇಲಿಗಳು!
    500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ಪೊಲೀಸರೇ ಅಧಿಕೃತ ಮಾಹಿತಿ ನೀಡಿದ ಘಟನೆಯೊಂದು ಭಾರೀ ಸಂಚಲನ ಸೃಷ್ಟಿಸುತ್ತಿದೆ. ಹೆದ್ದಾರಿಗಳಲ್ಲಿ ಜಫ್ತಿ ಮಾಡಲಾದ ಗಾಂಜಾವನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗಿತ್ತು. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಈ ವರ್ಷದ ಆರಂಭದಲ್ಲಿ ಮಥುರಾ ಪೊಲೀಸರಿಗೆ ಕೇಳಿತ್ತು. ಆದರೆ ಮಥುರಾ ಪೊಲೀಸರು ನ್ಯಾಯಾಲಯಕ್ಕೆ 500 ಕೆಜಿಗೂ ಹೆಚ್ಚು ಗಾಂಜಾವನ್ನುಇಲಿಗಳು ಸೇವಿಸಿವೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ನ್ಯಾಯಾಲಯ ನಿಖರವಾಗಿ 60 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ಇಲಿಗಳು ಸೇವಿಸಿವೆ ಎಂಬುದಕ್ಕೆ ಪುರಾವೆಯನ್ನು ತಲುಪಿಸುವಂತೆ ಆದೇಶಿಸಿದೆ.


    ಇದನ್ನೂ ಓದಿ: Bengaluru: ಬೆಂಗಳೂರಿನಿಂದ ಈ ಊರಿಗೆ ಪ್ರಯಾಣಿಸುವ ಮುನ್ನ ಗಮನಿಸಿ, ಟ್ರಾಫಿಕ್ ಪೊಲೀಸರ ಮಹತ್ವದ ಸೂಚನೆ


    ಪೊಲೀಸ್ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಜಫ್ತಿ ಮಾಡಲಾದ ವಸ್ತುಗಳನ್ನು ಹರಾಜು ಅಥವಾ ವಿಲೇವಾರಿ ಮಾಡಲು ನ್ಯಾಯಾಲಯವು ಐದು ಅಂಶಗಳ ನಿರ್ದೇಶನಗಳನ್ನು ನೀಡಿದೆ. ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಕಾಲಮಿತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪಿ ಸಿಂಗ್ ಹೇಳಿದ್ದಾರೆ. ಹೀಗೆ ಉತ್ತರ ಪ್ರದೇಶದಲ್ಲಿ ಇಲಿಗಳು ಗಾಂಜಾ ತಿಂದ ಪ್ರಕರಣ ವೈರಲ್ ಆಗುತ್ತಿದೆ.

    Published by:ಗುರುಗಣೇಶ ಡಬ್ಗುಳಿ
    First published: