ಡೆಹ್ರಾಡೂನ್: ಅಕ್ರಮವಾಗಿ ಭಾರತ ಪ್ರವೇಶಿಸಿದ ನಾಲ್ವರು ಚೀನಿ ಪ್ರಜೆಗಳಿಗೆ (Chinese Nationals) ಚಂಪಾವತ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಆರೋಪಿಗಳಿಗೆ ತಲಾ 45 ಸಾವಿರ ದಂಡ ವಿಧಿಸಿದೆ. ನೇಪಾಳದ ಕಠ್ಮಂಡುವಿಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ 2019ರಲ್ಲಿ ಇಂಡೋ- ನೇಪಾಳ (Indo Nepal) ಬನ್ಬಾಸಾ ಗಡಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಉತ್ತರಾಖಂಡದ ಚಂಪಾವತ್‌ನ (Champawath) ಮುಖ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಗಳಾದ ಟೆಬೆಟ್‌ನ ಖೆಂಟ್ಸೆ ಸೆಂಗ್ಯೆ ಹಾಗು ಚೀನಾದ ವಿವಿಧ ನಗರದ ನಿವಾಸಿಗಳಾದ ಜಿಂಚೊಂಗ್ ಲಿಯಾವೊ, ಹೈಪಿಂಗ್ ನಿ, ಶುನ್ ಝೆನ್ ವೆಂಗ್ ಮತ್ತು ಗುವಾಂಗ್‌ಕನ್ ವಾಂಗ್ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ವಿದೇಶಿ ಕಾಯ್ದೆ ಅಡಿಯಲ್ಲಿ ಜುಲೈ 27, 2019ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಲಸೆ ಅಧಿಕಾರಿಯ ಪ್ರಕಾರ, 2019 ರಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ ನಾಲ್ವರು ಚೀನಿಯರು ಹಾಗು ಒಬ್ಬ ಟಿಬೆಟಿಯನ್, ದೆಹಲಿಯಿಂದ ನೇಪಾಳದ ಕಠ್ಮಂಡುವಿಗೆ ಬಸ್‌ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕಸ್ಟಡಿಗೆ ತೆಗೆದುಕೊಂಡ ಆರೋಪಿಗಳಿಂದ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: China Economy: ಜಾಗತಿಕ ಆರ್ಥಿಕತೆಯನ್ನು ಉಳಿಸುವ ಬಗೆ ಹೇಗೆ? ಚೀನಾದ ಧೋರಣೆಗೆ ವಿಶ್ವದ ಇತರ ದೇಶಗಳ ವಿರೋಧ!
2019 ರಲ್ಲಿ ಅಕ್ರಮವಾಗಿ ಅಂತರಾಷ್ಟ್ರೀಯ ಗಡಿ ದಾಟುತ್ತಿದ್ದಾಗ ಚೀನಾದ ಪ್ರಜೆಗಳನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದರು. ಚೀನಿ ಪ್ರಜೆಗಳನ್ನು ಕರೆದುಕೊಂಡು ಬಂದಿದ್ದ ಟಿಬೆಟಿಯನ್ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಆದರೆ 2019 ರಲ್ಲಿ ಕೋವಿಡ್‌ನಿಂದಾಗಿ ಟಿಬೆಟಿಯನ್ ವ್ಯಕ್ತಿ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಈ ಸಂಬಂಧ ಮಾರ್ಚ್ 7 ರಂದು ಪ್ರಕರಣದ ವಿಚಾರಣೆ ನಡೆಸಿದ ಉತ್ತರಾಖಂಡ್‌ನ ಚಂಪಾವತ್ ಜಿಲ್ಲಾ ನ್ಯಾಯಾಲಯ ವಂಚನೆ, ನಕಲಿ ಗುರುತಿನ ಚೀಟಿ, ವಿದೇಶಿ ಕಾಯ್ದೆ ಉಲ್ಲಂಘನೆಗಾಗಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮುಂಬಯಿನಲ್ಲಿ 6.78 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 13 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕಳ್ಳಸಾಗಾಣಿಕೆ ಪ್ರಕರಣದ ಅಡಿ ಈ ನಾಲ್ವರು ಚೀನೀಯರನ್ನು ಬಂಧಿಸಲಾಗಿತ್ತು. ಪೊಲೀಸರು ಬಂಧಿತ ಆರೋಪಿಗಳ ಪಾಸ್‌ಪೋರ್ಟ್ ಅನ್ನು ಜಪ್ತಿ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಜೈಲಿನಿಂದ ಹೊರ ಬಂದ ಚೀನಿ ಪ್ರಜೆಗಳು, ನೇಪಾಳ ಮೂಲಕ ತಮ್ಮ ದೇಶಕ್ಕೆ ಪಲಾಯನ ಮಾಡಲು ಟಿಬೆಟಿಯನ್ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಸಿದ್ದರು, ಆತ ಪಾಸ್‌ಪೋರ್ಟ್ ಇಲ್ಲದೆ ತಲಾ 10 ಸಾವಿರದೊಳಗೆ ನೇಪಾಳಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ.
ವಿಚಾರಣೆಯ ವೇಳೆ, ನಾವು 2018 ರಲ್ಲಿಯೇ ಭಾರತಕ್ಕೆ ಬಂದಿರುವುದಾಗಿ ಆರೋಪಿಗಳು ಬಹಿರಂಗ ಪಡಿಸಿದ್ದಾರೆ. ಮುಂಬಯಿನ ಕಳ್ಳಸಾಗಾಣಿಕೆಯಲ್ಲಿ ಸಿಕ್ಕಿಬಿದ್ದು ಜಾಮೀನು ಪಡೆದ ನಂತರ ಟಿಬೆಟಿಯನ್ ಸಹಾಯದಿಂದ ಚೀನಾಕೆ ಪಲಾಯನ ಮಾಡಲು ಮುಂದಾದ ಆರೋಪಿಗಳು, ಮುಂಬೈನಿಂದ ದಿಲ್ಲಿಗೆ ರೈಲಿನಲ್ಲಿ ಬಂದು ಅಲ್ಲಿಂದ ಬಸ್ ಮೂಲಕ ಪರಾರಿಯಾಗಲೆತ್ನಿಸಿದ್ದರು.
ಇದನ್ನೂ ಓದಿ: Priyank Kharge: ಸರ್ಕಾರದ ವಿರುದ್ಧ ಕಿಕ್ಬ್ಯಾಕ್ ಬಾಂಬ್! ಕಾಕಂಬಿ ರಫ್ತಿನಲ್ಲಿ ಭಾರೀ ಅಕ್ರಮ ಆರೋಪ; ಸ್ಫೋಟಕ ಆಡಿಯೋ ಬಿಡುಗಡೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ