Labour Rules: ಜುಲೈನಿಂದ ವಾರದಲ್ಲಿ 4 ದಿನ ಕೆಲಸ? ಹೊಸ ಕಾರ್ಮಿಕ ನೀತಿಯಲ್ಲಿ ಏನಿದೆ?

ವಾರದಲ್ಲಿ ನಾಲ್ಕು ದಿನಗಳ ಕೆಲಸದ‘ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಜುಲೈ 1 ರಿಂದ ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರವು ಯೋಜಿಸುತ್ತಿರುವುದರಿಂದ ದೇಶದ ಕಂಪನಿಗಳು ಈ ಮಾದರಿಯನ್ನು ಅನುಸರಿಸಲಿವೆಯೇ? ಕೆಲಸದ ಅವಧಿ ಎಷ್ಟು ಗಂಟೆ ಇರಲಿದೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದೆಹಲಿ(ಜೂ.11): ಬ್ರಿಟನ್​ನಲ್ಲಿ (Britain) ವಾರದಲ್ಲಿ ನಾಲ್ಕು ದಿನಗಳ ಕೆಲಸದ ವ್ಯವಸ್ಥೆಯನ್ನು ಪ್ರಯೋಗಿಸಲಾಗುತ್ತಿದೆ. ಕಾರ್ಮಿಕ ಪರವಾಗಿರುವ ಈ ಕೆಲಸ ಪದ್ಧತಿಯಲ್ಲಿ ವಾರದ ಏಳು ದಿನಗಳಲ್ಲಿ ನಾಲ್ಕು ದಿನ ಮಾತ್ರ (4 Days work) ಕೆಲಸ ಮಾಡಿದರೆ ಸಾಕು. ಸದ್ಯ ಇದನ್ನು ಬ್ರಿಟನ್​ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದ್ದು ಇದನ್ನು ಇತರ ರಾಷ್ಟ್ರಗಳೂ ಅನುಸರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ಈ ಕೆಲಸದ ವ್ಯವಸ್ಥೆ ಯಾವ ರೀತಿ ಕೆಲಸ ಮಾಡಲಿದೆ ಎನ್ನುವ ಫಲಿತಾಂಶ ಇನ್ನಷ್ಟೇ ಹೊರಬೀಳಬೇಕಿದೆ. ದೇಶದ ಪ್ರಮುಖ ರಾಷ್ಟ್ರಗಳಲ್ಲಿ ಈ ಕೆಲಸದ ಪದ್ಧತಿಯ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ. ಈಗ ಸದ್ಯ ಭಾರತದಲ್ಲಿಯೂ ಈ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜುಲೈನಲ್ಲಿ ನೂತನ ಕಾರ್ಮಿಕ ನೀತಿ ಬರಲಿರುವುದರಿಂದ ಬ್ರಿಟನ್​ನ ಈ ವ್ಯವಸ್ಥೆ ಭಾರತೀಯರ ಮಧ್ಯೆ ಈ ವಿಚಾರ ಹೆಚ್ಚು ಪ್ರಸಕ್ತವಾಗಿದೆ.

ನಮ್ಮ ದೇಶದಲ್ಲಿರುವ ಕಂಪನಿಗಳು ಈ ಕೆಲಸದ ಮಾದರಿಯನ್ನು ಆರಿಸಿಕೊಳ್ಳುತ್ತವೆಯೇ ಎಂದು ಭಾರತದಲ್ಲಿ ಅನೇಕರು ಚರ್ಚಿಸುತ್ತಿದ್ದಾರೆ. ಸಹಜವಾಗಿಯೇ ಇದು ಕುತೂಹಲಕಾರಿ ಚರ್ಚೆಯಾಗಿ ಬದಲಾಗುತ್ತಿದೆ. ಕೊರೋನಾದ ನಂತರ, ಹಲವಾರು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಬಯಸಿದ್ದರಿಂದ ರಾಜೀನಾಮೆ ನೀಡಿದ್ದಾರೆ. ಬಹಳಷ್ಟು ಜನರಯ ಕಚೇರಿಗೆ ಹಾಜರಾಗುವ ಮನಸಿಲ್ಲದೆ ಕೆಲಸ ಬದಲಾಯಿಸುವುದು,ಕೃಷಿಯಲ್ಲಿ ತೊಡಗುವುದು ಹೀಗೆ ಬೇರೆ ಬೇರೆ ಮಾರ್ಗಗಳನ್ನು ಆಯ್ದುಕೊಂಡಿದ್ದಾರೆ.

ಬ್ರಿಟನ್​​ನಲ್ಲಿ ವಾರದಲ್ಲಿ 4 ದಿನ ಕೆಲಸ ಶುರು

UK ಯಾದ್ಯಂತ ಕಾರ್ಮಿಕರು ಪೂರ್ಣ ವೇತನದೊಂದಿಗೆ ಆರು ತಿಂಗಳವರೆಗೆ ನಾಲ್ಕು ದಿನಗಳ ಕೆಲಸದ ಪ್ರಯೋಗದಲ್ಲಿ ಒಳಗೊಂಡಿದ್ದಾರೆ. ಸ್ಥಳೀಯ ಮೀನು ಮತ್ತು ಚಿಪ್ಸ್ ಅಂಗಡಿಯಿಂದ ಹಿಡಿದು ದೊಡ್ಡ ಹಣಕಾಸು ಸಂಸ್ಥೆಗಳವರೆಗೆ 70 UK ಕಂಪನಿಗಳಲ್ಲಿ 3,300 ಕ್ಕೂ ಹೆಚ್ಚು ಕೆಲಸಗಾರರು ವೇತನದ ನಷ್ಟವಿಲ್ಲದೆ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.

ಈ ಪ್ರಯೋಗವು 100:80:100 ಮಾದರಿಯನ್ನು ಆಧರಿಸಿದೆ. 100% ಉತ್ಪಾದಕತೆಯನ್ನು ಕಾಯ್ದುಕೊಳ್ಳುವ ಬದ್ಧತೆಗೆ ಬದಲಾಗಿ 80 ಶೇಕಡಾ ಸಮಯಕ್ಕೆ ಶೇಕಡಾ 100 ವೇತನ ನೀಡುವ ರೀತಿಯಾಗಿದೆ.

ಭಾರತದಲ್ಲಿಯೂ ವಾರದಲ್ಲಿ 4 ದಿನ ಕೆಲಸ?

ಜುಲೈ 1 ರಿಂದ ಹೊಸ ಕಾರ್ಮಿಕ ಕಾನೂನುಗಳನ್ನು (Labour rules) ಜಾರಿಗೆ ತರಲು ಕೇಂದ್ರವು ಯೋಜಿಸುತ್ತಿರುವುದರಿಂದ ದೇಶದ ಕಂಪನಿಗಳು ಈ ಮಾದರಿಯನ್ನು ಅನುಸರಿಸುತ್ತವೆ ಎಂದು ಭಾರತದಲ್ಲಿ ಅನೇಕರು ಭಾವಿಸುತ್ತಾರೆ. ಕೇಂದ್ರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ವಿನ್ಯಾಸಗೊಳಿಸಲು ಕೆಲಸ ಮಾಡುತ್ತಿದೆ. ಉದ್ಯೋಗಿಗಳ ಸಂಬಳ, ಪಿಎಫ್ ಕೊಡುಗೆಗಳು ಮತ್ತು ಕೆಲಸದ ಸಮಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಜುಲೈ 1ರಿಂದ ನಿರೀಕ್ಷಿಸಬಹುದು.

ನಾಲ್ಕು ಕಾರ್ಮಿಕ ಸಂಹಿತೆಗಳು ಜಾರಿಗೆ ಬರುವ ಸಾಧ್ಯತೆ

“ನಾಲ್ಕು ಕಾರ್ಮಿಕ ಸಂಹಿತೆಗಳು 2022-23 ರ ಆರ್ಥಿಕ ವರ್ಷದಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ರಾಜ್ಯಗಳು ಇವುಗಳ ಕರಡು ನಿಯಮಗಳನ್ನು ಅಂತಿಮಗೊಳಿಸಿವೆ. ಫೆಬ್ರವರಿ 2021 ರಲ್ಲಿ ಈ ಕೋಡ್‌ಗಳ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರವು ಪೂರ್ಣಗೊಳಿಸಿದೆ. ಆದರೆ ಇದನ್ನು ಎಲ್ಲಾ ರಾಜ್ಯಗಳು ಒಂದೇ ಬಾರಿಗೆ ಜಾರಿಗೆ ತರಬೇಕೆಂದು ಕೇಂದ್ರವು ಬಯಸುತ್ತದೆ, ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Modi's Teacher: ಬಾಲ್ಯದ ಶಿಕ್ಷಕರನ್ನು ಭೇಟಿಯಾದ ಮೋದಿ, ಶಿಷ್ಯನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದ ಗುರು!

ಏನೆಲ್ಲಾ ಬದಲಾಗಲಿದೆ?

ಈ ಹೊಸ ಕೋಡ್‌ಗಳ ಅಡಿಯಲ್ಲಿ, ಉದ್ಯೋಗಿಗಳ ಮನೆಗೆ ಟೇಕ್-ಹೋಮ್ ಸಂಬಳ, ಕೆಲಸದ ಸಮಯ ಮತ್ತು ವಾರದ ದಿನಗಳ ಸಂಖ್ಯೆ ಸೇರಿದಂತೆ ಕೆಲಸದ ಸಂಸ್ಕೃತಿಗೆ ಸಂಬಂಧಿಸಿದ ಹಲವಾರು ಅಂಶಗಳನ್ನು ಬದಲಾಯಿಸಲಾಗುವುದು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ 27 ಪ್ರತಿಶತ ಉದ್ಯೋಗದಾತರು ಸಂಸ್ಥೆಗಳ ಉತ್ಪಾದಕತೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ಈಗಲೇ ಅಂದಾಜಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಮೀಕ್ಷೆ ಪ್ರಕಾರ ಉಳಿದ 11% ಜನರು ಈ ವಿಚಾರ ಒಪ್ಪಲಿಲ್ಲ.

ಇದನ್ನೂ ಓದಿ: Rajyasabha Elections: ಹರಿಯಾಣದಲ್ಲಿ ಹೈಡ್ರಾಮಾ! 8 ಗಂಟೆ ಮತ ಎಣಿಕೆ ವಿಳಂಬ, ಬಿಜೆಪಿ ಗೆಲುವು

ಬ್ಯಾಂಕಿಂಗ್ ಮತ್ತು ಹಣಕಾಸು, ನಿರ್ಮಾಣ ಮತ್ತು ಎಂಜಿನಿಯರಿಂಗ್, ಶಿಕ್ಷಣ, ಎಫ್‌ಎಂಸಿಜಿ, ಆತಿಥ್ಯ, ಮಾನವ ಸಂಪನ್ಮೂಲ ಪರಿಹಾರಗಳು, ಐಟಿ, ಐಟಿಇಎಸ್ ಮತ್ತು ಬಿಪಿಒ, ಲಾಜಿಸ್ಟಿಕ್ಸ್, ಉತ್ಪಾದನೆ ಸೇರಿದಂತೆ ವಲಯಗಳಲ್ಲಿ ಫೆಬ್ರವರಿ 1 ಮತ್ತು ಮಾರ್ಚ್ 7 ರ ನಡುವೆ 1,113 ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಆನ್‌ಲೈನ್‌ನಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಮಾಡಲಾಗಿದೆ.
Published by:Divya D
First published: