HOME » NEWS » National-international » 4 CHINESE MEN EAT 30 KG ORANGES IN HALF AN HOUR TO AVOID PAYING EXTRA BAGGAGE FEE LG

30 ಕೆ.ಜಿ ಕಿತ್ತಳೆ ಹಣ್ಣನ್ನು ಅರ್ಧ ಗಂಟೆಯಲ್ಲೇ ತಿಂದು ಮುಗಿಸಿದ ನಾಲ್ವರು; ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ..!

ಒಂದೇ ಸಲ ಅಷ್ಟು ಪ್ರಮಾಣದ ಕಿತ್ತಳೆ ಹಣ್ಣು ತಿಂದ ಕಾರಣಕ್ಕೆ ನಮಗೆ ಆರೋಗ್ಯ ಸಮಸ್ಯೆ ಹಾಗೂ ಬಾಯಿಯಲ್ಲಿ ಅಲ್ಸರ್ ಸಮಸ್ಯೆ ಶುರುವಾಗಿದೆ. ಹೀಗಾಗಿ ನಾವು ಮತ್ತೆ ಕಿತ್ತಳೆ ಹಣ್ಣನ್ನು ತಿನ್ನುವುದಿಲ್ಲ ಎಂದು ವಾಂಗ್ ತಮ್ಮ ವಿಚಿತ್ರ ಅನುಭವ ಹಂಚಿಕೊಂಡಿದ್ದಾರೆ.

news18-kannada
Updated:January 28, 2021, 10:37 AM IST
30 ಕೆ.ಜಿ ಕಿತ್ತಳೆ ಹಣ್ಣನ್ನು ಅರ್ಧ ಗಂಟೆಯಲ್ಲೇ ತಿಂದು ಮುಗಿಸಿದ ನಾಲ್ವರು; ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ..!
ಸಾಂದರ್ಭಿಕ ಚಿತ್ರ
  • Share this:
ಎಲ್ಲಾ ಸಾರಿಗೆಗಳಿಗಿಂತಲೂ ವಾಯು ಸಾರಿಗೆ ತುಂಬಾ ದುಬಾರಿ ಮತ್ತು ಪರಿಣಾಮಕಾರಿ. ಪ್ರಯಾಣಿಕರು ಪ್ರಯಾಣ ಮಾಡುವಾಗ ಹಲವಾರು ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಿದೆ. ಅದರಲ್ಲಿ ಮುಖ್ಯವಾಗಿ ಪ್ರಯಾಣಿಕರ ಬ್ಯಾಗೇಜ್​ ಮೇಲೆ ಮಿತಿ ಹೇರಿದೆ. ಇಂತಿಷ್ಟೇ ಪ್ರಮಾಣದ ಲಗೇಜು ಕೊಂಡೊಯ್ಯಬೇಕೆಂದು ಷರತ್ತು ಮತ್ತು ನಿಯಮಗಳು ಇವೆ. ಒಂದು ವೇಳೆ ಪ್ರಯಾಣಿಕರು ನಿಗದಿಗಿಂತ ಹೆಚ್ಚಿನ ಪ್ರಮಾಣದ ಲಗೇಜ್ ಕೊಂಡೊಯ್ಯುವುದಾದರೆ ಅದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ, ವಿಮಾನ ನಿಲ್ದಾಣದಲ್ಲಿ 4 ಪ್ರಯಾಣಿಕರು ತಮ್ಮ ಬ್ಯಾಗೇಜ್ ಪ್ರಮಾಣವನ್ನು ಕಡಿಮೆ ಮಾಡಲು ಒಂದು ಉಪಾಯವನ್ನು ಹುಡುಕಿದ್ದಾರೆ. ಏನದು ಅಂತೀರಾ? ಮುಂದೆ ಓದಿ.

ಚೀನಾದ ಯುನ್ನಾನ್ ಪ್ರಾಂತ್ಯದ ಕನ್ಮಿಂಗ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಪ್ರಯಾಣಿಕರು ಸುಮಾರು 30 ಕೆ.ಜಿ. ಕಿತ್ತಳೆ ಹಣ್ಣುಗಳ ಬಾಕ್ಸ್​​ಗಳನ್ನು ಕೊಂಡೊಯ್ಯಲು ಮುಂದಾಗಿದ್ದರು. ಈ ಹೆಚ್ಚುವರಿ ಪ್ರಮಾಣದ ಲಗೇಜ್ ಕ್ಯಾರಿ ಮಾಡಲು ಅವರು ವಿಮಾನ ನಿಲ್ದಾಣ ಸಿಬ್ಬಂದಿಗೆ ಒಟ್ಟು 3,384 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ ಅವರ ಬಳಿ ಅಷ್ಟು ಹಣ ಇರಲಿಲ್ಲ. ಹೀಗಾಗಿ ಆ ನಾಲ್ಕು ಜನರೂ ಸಹ 30 ಕೆ.ಜಿ.ಹಣ್ಣುಗಳನ್ನು ತಿಂದು ಮುಗಿಸಿದ್ದಾರೆ. ಅದು ಕೇವಲ ಅರ್ಧ ಗಂಟೆಯಲ್ಲಿ..!

Schools Reopen: ಕರ್ನಾಟಕದಲ್ಲಿ ಫೆ. 1ರಿಂದ 6-9ನೇ ತರಗತಿ ಆರಂಭಕ್ಕೆ ಸರ್ಕಾರ ಚಿಂತನೆ; ಇಂದಿನ ಸಭೆಯಲ್ಲಿ ನಿರ್ಧಾರ

ಹೌದು, ಇದು ತಮಾಷೆಯಲ್ಲ. ವಾಂಗ್ ಮತ್ತು ಆತನ ಸಹೋದ್ಯೋಗಿಗಳ ಬಳಿ ಹೆಚ್ಚುವರಿ ಬ್ಯಾಗೇಜ್​ ಶುಲ್ಕ ಕಟ್ಟಲು ಹಣ ಇರಲಿಲ್ಲ. ಹೀಗಾಗಿ ಅವರಿಗೆ ಬೇರೆ ದಾರಿ ಕಾಣದೆ ಅಷ್ಟೂ ಹಣ್ಣುಗಳನ್ನು ತಿಂದಿದ್ದಾರೆ. ನಾವು ವಿಮಾನ ನಿಲ್ದಾಣದಲ್ಲೇ ಕೂತು 20-30 ನಿಮಿಷಗಳಲ್ಲಿ 30 ಕೆಜಿ ಹಣ್ಣುಗಳನ್ನು ತಿಂದೆವು ಎಂದು ವಾಂಗ್ ಹೇಳುತ್ತಾರೆ.

ಒಂದೇ ಸಲ ಅಷ್ಟು ಪ್ರಮಾಣದ ಕಿತ್ತಳೆ ಹಣ್ಣು ತಿಂದ ಕಾರಣಕ್ಕೆ ನಮಗೆ ಆರೋಗ್ಯ ಸಮಸ್ಯೆ ಹಾಗೂ ಬಾಯಿಯಲ್ಲಿ ಅಲ್ಸರ್ ಸಮಸ್ಯೆ ಶುರುವಾಗಿದೆ. ಹೀಗಾಗಿ ನಾವು ಮತ್ತೆ ಕಿತ್ತಳೆ ಹಣ್ಣನ್ನು ತಿನ್ನುವುದಿಲ್ಲ ಎಂದು ವಾಂಗ್ ತಮ್ಮ ವಿಚಿತ್ರ ಅನುಭವ ಹಂಚಿಕೊಂಡಿದ್ದಾರೆ. ಈ ಘಟನೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ.
Published by: Latha CG
First published: January 28, 2021, 10:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories