ಕಿವಿ ಕೇಳದ ಮೂಕ ಯುವತಿ ಮೇಲೆ ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸಿದ ನಾಲ್ವರು ಯೋಧರು

Seema.R | news18
Updated:October 17, 2018, 2:02 PM IST
ಕಿವಿ ಕೇಳದ ಮೂಕ ಯುವತಿ ಮೇಲೆ ಸತತ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸಿದ ನಾಲ್ವರು ಯೋಧರು
  • Advertorial
  • Last Updated: October 17, 2018, 2:02 PM IST
  • Share this:
ನ್ಯೂಸ್​ 18 ಕನ್ನಡ

ಪುಣೆ (ಅ.17) : ಕಿವಿ  ಕೇಳದ ಮೂಕ  ಯುವತಿ ಮೇಲೆ ನಾಲ್ಕು ವರ್ಷಗಳಿಂದ ಅತ್ಯಾಚಾರ ನಡೆಸಿರುವ ನಾಲ್ವರು ಯೋಧರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇಲ್ಲಿನ ಸಮೀಪವಿರುವ ಕಡ್ಕಿ  ಮಿಲಿಟರಿ ಆಸ್ಪತ್ರೆಯಲ್ಲಿ 4ನೇ ಹಂತದ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ 30 ವರ್ಷದ ಯುವತಿ ಮೇಲೆ ಈ ಕೃತ್ಯವನ್ನು ಎಸಗಲಾಗಿದೆ. 2014ರಲ್ಲಿ ರಾತ್ರಿಪಾಳಿಯಲ್ಲಿದ್ದ ಮಹಿಳೆ ಮೇಲೆ ಮೊದಲ ಬಾರಿ ಅತ್ಯಾಚಾರ ಯೋಧನೊಬ್ಬ ಈ ಕೃತ್ಯ ಎಸಗಿದ್ದ.

ಈ ಕುರಿತು ಯುವತಿ ತಮ್ಮ ಹಿರಿಯ ಅಧಿಕಾರಿ, ನರ್ಸಿಂಗ್​ ಸಹಾಯಕರು ಹಾಗೂ ಯೋಧರಿಗೆ ಸಂದೇಶದ ಮೂಲಕ ತಿಳಿಸಿದ್ದಾಳೆ. ಆದರೆ, ಯುವತಿ ರಕ್ಷಣೆಗೆ ಬಾರದ ಅವರು ಯೋಧನ ಜೊತೆ ಸೇರಿ ಆ ಯುವತಿ ಮೇಲೆ ಮತ್ತೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಆಕೆಯ ಸಂದೇಶವನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.  ಇಬ್ಬರು ಯೋಧರು ಚಿತ್ರೀಕರಣ ಮಾಡಿ ಆಕೆಯನ್ನು ಬ್ಲಾಕ್​ಮೇಲ್ ಕೂಡ​ ಮಾಡಿದ್ದಾರೆ.

12 ವರ್ಷದ ವಿಧವೆಯಾಗಿರುವ ಮಹಿಳೆ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಕುರಿತು ಆಸ್ಪತ್ರೆಯ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರಮ ಕೈಗೊಳ್ಳುವ ಬದಲು ಮಹಿಳೆಯನ್ನು ರಾತ್ರಿ ಪಾಳಿಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲಾಗಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಸಲಿಂಗಿಯೊಬ್ಬ ಅಸಭ್ಯವಾಗಿ ಮುಟ್ಟಿದಾಗ ಹೇಗಾದೀತು? ಪುರುಷರಿಗೆ ‘ಅನುಭವ’ ನೆನಪಿಸಿಕೊಟ್ಟ ಮಲ್ಲಿಕಾ

ಎನ್​ಜಿಒ ಮೂಲಕ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಮಹಿಳೆ ಪೊಲೀಸರಿಗೆ ದಾಖಲಿಸಿದ್ದು, ಯೋಧರ ಮೇಲೆ ಐಪಿಸಿ ಸೆಕ್ಷನ್​ 376(ಅತ್ಯಾಚಾರ) ಮತ್ತು 354(ದೌರ್ಜನ್ಯ) ಪ್ರಕರಣ ದಾಖಲಿಸಲಾಗಿದೆ,ಪೊಲೀಸ್​ ಪ್ರಕರಣದ ಜೊತೆಯಲ್ಲಿ ನ್ಯಾಯಾಲಯ ಕೂಡ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಯೋಧರ ಮೇಲೆ ಕ್ರಮ ಕೈಗೊಳ್ಳುವಂತೆ  ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:October 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ