ಹೈದ್ರಾಬಾದ್​ ಗ್ಯಾಂಗ್​ರೇಪ್​ ಪ್ರಕರಣ: 14 ದಿನ ನ್ಯಾಯಾಂಗ ಬಂಧನಕ್ಕೆ ನಾಲ್ವರು ಆರೋಪಿಗಳು

ಆರೋಪಿಗಳನ್ನು ಇರಿಸಿದ್ದ ಠಾಣೆಗೆ ಹಾಜರಾದ ಮಂಡಲ್​ ಎಕ್ಸುಕ್ಯೂಟಿವ್​ ಮ್ಯಾಜಿಸ್ಟೇಟರ್​ ಆರೋಪಿಗಳನ್ನು ಎರಡು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

Seema.R | news18-kannada
Updated:November 30, 2019, 5:12 PM IST
ಹೈದ್ರಾಬಾದ್​ ಗ್ಯಾಂಗ್​ರೇಪ್​ ಪ್ರಕರಣ: 14 ದಿನ ನ್ಯಾಯಾಂಗ ಬಂಧನಕ್ಕೆ ನಾಲ್ವರು ಆರೋಪಿಗಳು
ಚಿತ್ರ: ಮೀರ್​ ಸುಹೈಲ್​
  • Share this:
ಹೈದ್ರಾಬಾದ್​ (ನ.30): ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಶಡ್ನಾಗರ್​​ ಮ್ಯಾಜಿಸ್ಟೇಟ್​ ಆದೇಶ ನೀಡಿದ್ದಾರೆ.

ಆರೋಪಿಗಳನ್ನು ಇರಿಸಿದ್ದ ಠಾಣೆಗೆ ಹಾಜರಾದ ಮಂಡಲ್​ ಎಕ್ಸುಕ್ಯೂಟಿವ್​ ಮ್ಯಾಜಿಸ್ಟೇಟರ್​ ಆರೋಪಿಗಳನ್ನು ಎರಡು ವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.

ನ್ಯಾಯಾಧೀಶರು ಅಲಭ್ಯತೆ ಹಿನ್ನೆಲೆ ಮೆಹಬೂಬ್​ ನಗರ ಫಾಸ್ಟ್​ಟ್ರಾಕ್​ ನ್ಯಾಯಾಲದ ಮುಂದೆ ಅವರನ್ನು ಹಾಜರು ಪಡಿಸಿಲ್ಲ. ಅಲ್ಲದೇ ಘಟನೆ ಕುರಿತು ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಮ್ಯಾಜಿಸ್ಟ್ರೇಟರೇ ಠಾಣೆಗೆ ಆಗಮಿಸುವಂತೆ ಆಯಿತು.

ಆರೋಪಿಗಳಾದ ಮೊಹಮ್ಮದ್​ ಆರಿಫ್​, ಚಿಂತಕುಂಟ ಚೆನ್ನಕೇಶವಲು, ಜೊಲು ಶಿವ, ಜೊಲು ನವೀನ್​ರನ್ನು ಮೆಹಬೂಬ್​ನಗರ ಜೈಲಿಗೆ ಸ್ಥಳಾಂತರಿಸಲಾಗಿದೆ,

ಶಂಶಾದಾಬಾದ್​ ಪೊಲೀಸ್​ ಠಾಣೆಯ ಮುಂದೆ ಉದ್ವಿಗ್ನ ವಾತವಾರಣ ನಿರ್ಮಾಣವಾಗಿದ್ದು, ಸ್ಥಳೀಯ ನಿವಾಸಿಗಳು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಪೊಲೀಸ್​ ಠಾಣೆ ಮುಂದೆ ಜಮಾಯಿಸಿ ಆರೋಪಿಯನ್ನು ತಮ್ಮ ವಶಕ್ಕೆ ನೀಡಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.

ಠಾಣೆ ಎದುರು ಸಾರ್ವಜನಿಕರ ಪ್ರತಿಭಟನೆ ಹೆಚ್ಚಾದ ಹಿನ್ನೆಲೆ ಪೊಲೀಸರು ಲಾಠಿ ಚಾರ್ಚ್​ ಮಾಡಿ ಜನರನ್ನು ಚದುರಿಸುವ ಪ್ರಯತ್ನವನ್ನು ಮಾಡಿದರು. ಠಾಣೆಯ ಹಿಂಬಾಗಿಲಿನಿಂದ ಮ್ಯಾಜಿಸ್ಟ್ರೇಟರನ್ನು ಕರೆತರಲಾಯಿತು.

ಹೈದ್ರಾಬಾದ್​ನಲ್ಲಿಯೂ ಪ್ರತಿಭಟನೆ ಕಿಡಿ ಹೊತ್ತಿದ್ದು, ಆರೋಪಿಯನ್ನು ವಿಚಾರಣೆ ನಡೆಸದೇ ತಕ್ಷಣ ಗಲ್ಲಿಗೆ ಏರಿಸಬೇಕು ಎಂದು ವಿವಿಧ ಮಹಿಳಾ ಸಂಘಟನೆ , ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿವೆ.ಇದನ್ನು ಓದಿ: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆಗೈದ ಸ್ಥಳದಲ್ಲಿ ಮತ್ತೊಂದು ಮಹಿಳೆಯ ಮೃತದೇಹ ಪತ್ತೆ

ನಗರದಲ್ಲಿ ಪ್ರತಿಭಟನೆ ಕಾವು ಹೆಚ್ಚಿದ್ದು, ಹಿಂಚಾಚಾರ ತಡೆಯಲು ಹೆಚ್ಚಿನ ಪೊಲೀಸ್​ ಭದ್ರತೆ ನೀಡಲಾಗಿದೆ.

ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ನಾನಾಕಡೆ ಪ್ರತಿಭಟನೆ ನಡೆದಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕೂಗು ಕೇಳಿಬಂದಿದೆ.

(ವರದಿ: ಮೆದಬಯನಿ ಬಾಲಕೃಷ್ಣ)
First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ