Supreme Court| ಮಹಿಳಾ ಸೇನಾಧಿಕಾರಿಗಳ ಉದ್ಯೋಗ ಖಾಯಂಗೊಳಿಸಿ; ಆಯೋಗಕ್ಕೆ ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

ಖಾಯಂ ಆಯೋಗವನ್ನು ನಿರಾಕರಿಸಲ್ಪಟ್ಟಿದ್ದರಿಂದ ಕಿರು ಸೇವಾ ಆಯೋಗದ 71 ಮಹಿಳಾ ಅಧಿಕಾರಿಗಳು ಶಾಶ್ವತ ಆಯೋಗಕ್ಕಾಗಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ 71 ಅಧಿಕಾರಿಗಳ ಪೈಕಿ 39 ಮಹಿಳಾ ಅಧಿಕಾರಿಗಳು ಖಾಯಂ ಆಯೋಗಕ್ಕೆ ಅರ್ಹರಾಗಿದ್ದಾರೆ.

ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​

  • Share this:
    ನವ ದೆಹಲಿ (ಅಕ್ಟೋಬರ್​ 22); ಭಾರತೀಯ ಸೇನೆಯಲ್ಲಿ (Indian Army) ಮಹಿಳೆಯರು ಕೆಲಸಕ್ಕೆ ಸೇರುವುದೇ ಅಪರೂಪ. ಹೀಗಾಗಿ ಮಹಿಳಾ ಅಧಿಕಾರಿಗಳಿಗೆ ಈವರೆಗೆ ಸೇನೆಯಲ್ಲಿ ಉದ್ಯೋಗ ಖಾಯಂ ಎಂಬ ಪರಿಕಲ್ಪನೆಯೇ ಇರಲಿಲ್ಲ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ (Supreme Court) 39 ಮಹಿಳಾ ಸೇನಾ ಅಧಿಕಾರಿಗಳು ನಡೆಸಿದ ಕಾನೂನು ಹೋರಾಟದಲ್ಲಿ ಕೊನೆಗೂ ಗೆಲುವು ಸಾಧಿಸಿದ್ದಾರೆ. ಪರಿಣಾಮ ಎಲ್ಲಾ ಅಧಿಕಾರಿಗಳು ಇದೀಗ ಶಾಶ್ವತ ಆಯೋಗವನ್ನು (Permanent Commission) ಪಡೆದುಕೊಂಡಿದ್ದಾರೆ. ನೂತನ ಖಾಯಂ ಆಯೋಗವನ್ನು ಏಳು ಕರ್ತವ್ಯದ ದಿನಗಳ ಒಳಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದ್ದು, ಭವಿಷ್ಯದಲ್ಲಿ ಸೇನೆಗೆ ಸೇರುವ ಮಹಿಳಾ ಅಧಿಕಾರಿಗಳು ಸಹ ಖಾಯಂ ಉದ್ಯೋಗವನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

    ಪರ್ಮನೆಂಟ್ ಕಮಿಷನ್ ಎಂದರೆ ಏನು?

    ಪರ್ಮನೆಂಟ್ ಕಮಿಷನ್ (ಖಾಯಂ ಆಯೋಗ) ಎಂದರೆ ನಿವೃತ್ತಿಯವರೆಗೂ ಸೇನಾ ವೃತ್ತಿಯಲ್ಲಿ ಇರುವುದು. ಕಿರು ಸೇವಾ ಆಯೋಗವು 10 ವರ್ಷಗಳ ಅವಧಿಯದ್ದಾಗಿದೆ. ಖಾಯಂ ಆಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇದ್ದರೆ ಅಧಿಕಾರಿಯು ನಾಲ್ಕು ವರ್ಷಗಳ ವಿಸ್ತರಣೆಯನ್ನು ಆಯ್ದುಕೊಳ್ಳಬಹುದಾಗಿದೆ.

    ಖಾಯಂ ಆಯೋಗವನ್ನು ನಿರಾಕರಿಸಲ್ಪಟ್ಟಿದ್ದರಿಂದ ಕಿರು ಸೇವಾ ಆಯೋಗದ 71 ಮಹಿಳಾ ಅಧಿಕಾರಿಗಳು ಶಾಶ್ವತ ಆಯೋಗಕ್ಕಾಗಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ 71 ಅಧಿಕಾರಿಗಳ ಪೈಕಿ 39 ಮಹಿಳಾ ಅಧಿಕಾರಿಗಳು ಖಾಯಂ ಆಯೋಗಕ್ಕೆ ಅರ್ಹರಾಗಿದ್ದಾರೆ. ಇನ್ನು ಏಳು ಮಂದಿ ವೈದ್ಯಕೀಯವಾಗಿ ಅಸಮರ್ಥರು ಹಾಗೂ 25 ಮಂದಿ ‘ಶಿಸ್ತಿನ ಸಮಸ್ಯೆ’ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತ್ತು.

    ತಿರಸ್ಕೃತಗೊಂಡ ಅಧಿಕಾರಿಗಳ ವರದಿ ಕೇಳಿದ ಸುಪ್ರೀಂ;

    ತಿರಸ್ಕೃತರಾಗಿರುವ 25 ಮಹಿಳಾ ಅಧಿಕಾರಿಗಳು ಯಾವ ಕಾರಣಕ್ಕಾಗಿ ಶಾಶ್ವತ ಆಯೋಗಕ್ಕೆ ಅರ್ಹತೆ ಪಡೆದುಕೊಂಡಿಲ್ಲ ಎಂಬುದನ್ನು ವಿವರಿಸುವ ವಿಸ್ತೃತ ವರದಿ ನೀಡುವಂತೆ ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರಕ್ಕೆ ಸೂಚಿಸಿತ್ತು.

    ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಹಾಗೂ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ, ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ರಚಿಸುವಂತೆ ತೀರ್ಪು ನೀಡಿದೆ. ಅಲ್ಲದೆ, ಯಾವುದೇ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಅಕ್ಟೋಬರ್ 1 ರಂದು ಮಧ್ಯಂತರ ಆದೇಶ ನೀಡಿತ್ತು.

    ಮಹಿಳಾ ಅಧಿಕಾರಿಗಳ ಪರ ವಕೀಲ ವಿ. ಮೋಹನ ವಕಾಲತ್ತು;

    ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಅವರನ್ನು ಅನರ್ಹಗೊಳಿಸ ಲಾಗಿದೆ ಎಂದು ಮಹಿಳಾ ಅಧಿಕಾರಿಗಳ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲರಾದ ವಿ. ಮೋಹನ, ಹುಜೇಫಾ ಅಹ್ಮದಿ ಮತ್ತು ಮೀನಾಕ್ಷಿ ಅರೋರಾ ಆರೋಪಿಸಿದ್ದರು.

    ಇದನ್ನೂ ಓದಿ: Ananya Panday Drugs Case| ನಾನು ಯಾರಿಗೂ ಡ್ರಗ್ಸ್​ ಪೂರೈಕೆ ಮಾಡಿಲ್ಲ; ಆರೋಪ ನಿರಾಕರಿಸಿದ ನಟಿ ಅನನ್ಯಾ ಪಾಂಡೆ

    ಕಳೆದ ಮಾರ್ಚ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಾನದಂಡವನ್ನು ತಲುಪಿದ ಕಿರಿಯ ಸೇವಾ ಆಯೋಗದ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡಬೇಕೆಂದು ತೀರ್ಪು ನೀಡಿತ್ತು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು.

    ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡುವ ಸೇನೆಯ ಮೌಲ್ಯಮಾಪನ ಮಾನದಂಡವು ಅವರ ವಿರುದ್ಧ ವ್ಯವಸ್ಥಿತವಾಗಿ ತಾರತಮ್ಯ ಎಸಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

    ಇದನ್ನೂ ಓದಿ: BJP Hate Speech| 'ಮತಾಂತರಿಗಳ ತಲೆ ತೆಗೆಯಿರಿ': ಛತ್ತೀಸ್​ಗಢದ ಬಿಜೆಪಿ ನಾಯಕರ ವೇದಿಕೆಯಲ್ಲಿ ಕೋಮು ದ್ವೇಷ ಭಾಷಣ!

    ಸುಪ್ರೀಂ ಮಹತ್ವದ ಆದೇಶ:

    ಈ ಹಿಂದೆ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪಿನ ಪರಿಣಾಮವಾಗಿ ಜುಲೈ ತಿಂಗಳಿನಲ್ಲಿ 147 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗವನ್ನು ನೀಡಲಾಗಿತ್ತು. ಭಾರತೀಯ ಸೈನ್ಯದಲ್ಲಿ ಉನ್ನತ ನಾಯಕತ್ವದ ನೇತೃತ್ವಕ್ಕೆ ಸಶಕ್ತಗೊಳಿಸಲು ಶಾಶ್ವತ ಆಯೋಗ ಮಂಜೂರಾದ ಎಲ್ಲಾ ಮಹಿಳಾ ಅಧಿಕಾರಿಗಳನ್ನು ವಿಶೇಷ ತರಬೇತಿ ಕೋರ್ಸ್‌ಗಳಿಗೆ ಮತ್ತು ಸವಾಲಿನ ಮಿಲಿಟರಿ ಕಾರ್ಯಯೋಜನೆಗಳಿಗೆ ಒಳಪಡಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿತ್ತು.
    Published by:MAshok Kumar
    First published: