Polluted Cities: ವಿಶ್ವದಲ್ಲಿನ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳಿವೆಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2022 ರಲ್ಲಿ ಭಾರತವು ವಿಶ್ವದ ಎಂಟನೇ ಅತ್ಯಂತ ಕಲುಷಿತ ದೇಶವಾಗಿದೆ ಮತ್ತು ವರ್ಷದ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ 39 ಭಾರತದಲ್ಲಿವೆ ಎಂದು ಸ್ವಿಸ್ ಏರ್ ಪ್ಯೂರಿಫೈಯರ್ ತಯಾರಕರ ವಾರ್ಷಿಕ ಜಾಗತಿಕ ಸಮೀಕ್ಷೆ ತಿಳಿಸಿದೆ.

  • Trending Desk
  • 2-MIN READ
  • Last Updated :
  • New Delhi, India
  • Share this:

ಈಗಂತೂ ಈ ನಗರ ಪ್ರದೇಶಗಳಲ್ಲಿ(City) ಗಾಳಿ (Air) ಎಷ್ಟರ ಮಟ್ಟಿಗೆ ಮತ್ತು ಎಷ್ಟು ವೇಗವಾಗಿ ಕಲುಷಿತವಾಗುತ್ತಿದೆ ಎಂದರೆ ಜನರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು ಮುಖಕ್ಕೆ ಮಾಸ್ಕ್ (Face Mask) ಧರಿಸಿಕೊಂಡು ಹೋದರೆ ಒಳ್ಳೆಯದು ಅಂತ ಅವರಿಗೆ ಅನ್ನಿಸಲು ಶುರುವಾಗಿದೆ. ಇದು ನಮ್ಮ ಭಾರತದಲ್ಲಿನ ನಗರಗಳು(India's Cities) ಕಲುಷಿತಗೊಳ್ಳುತ್ತಿರುವುದರ ಬಗ್ಗೆ ಅಷ್ಟೇ ಅಲ್ಲ, ಇಡೀ ವಿಶ್ವದಲ್ಲಿರುವ ಬೇರೆ ಬೇರೆ ದೇಶಗಳಲ್ಲಿರುವ ನಗರ ಪ್ರದೇಶಗಳ ಪರಿಸ್ಥಿತಿ ಸಹ ಬಹುತೇಕವಾಗಿ ಇದೇ ಆಗಿದೆ ಅಂತ ಹೇಳಬಹುದು. ನಗರ ಪ್ರದೇಶಗಳಲ್ಲಿ ಗಾಳಿಯು ಕಲುಷಿತಗೊಳ್ಳುತ್ತಿರುವುದರ ಹಿಂದೆ ಅನೇಕ ರೀತಿಯ ಬೇರೆ ಬೇರೆ ಕಾರಣಗಳಿವೆ (Reasons) ಅಂತ ಹೇಳಬಹುದು.


ದಿನೇ ದಿನೇ ರಸ್ತೆಯ ಮೇಲೆ ವಾಹನ ದಟ್ಟಣೆ ಜಾಸ್ತಿ ಆಗುತ್ತಿದ್ದು, ಅವುಗಳು ಬಿಡುವ ಹೊಗೆಯು ಗಾಳಿಯಲ್ಲಿ ಹೋಗಿ ಸೇರಿಕೊಳ್ಳುತ್ತಿದೆ ಮತ್ತು ಖಾಲಿ ಇರುವ ಸೈಟ್ ಗಳಲ್ಲಿ ಜನರು ಈ ಕಸವನ್ನು ರಾಶಿ ರಾಶಿ ಹಾಕಿ ಅದಕ್ಕೆ ಬೆಂಕಿ ಹಚ್ಚುವುದರಿಂದ ಆ ಹೊಗೆಯು ಸಹ ನಮ್ಮ ಗಾಳಿಯಲ್ಲಿ ಸೇರಿಕೊಳ್ಳುತ್ತಿದೆ. ಇಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಮತ್ತು ವಾಹನಗಳ ಟಯರ್ ಗಳನ್ನು ಸುಡುವುದು ಇವೆಲ್ಲವೂ ನಾವು ತೆಗೆದುಕೊಳ್ಳುವ ಗಾಳಿಯನ್ನು ಕಲುಷಿತಗೊಳಿಸುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ವಿಶ್ವದ ಕಲುಷಿತ ನಗರಗಳ ಪಟ್ಟಿಯು ಹೊರ ಬಿದ್ದಿದ್ದು, ಅದರಲ್ಲಿ 39 ನಗರಗಳು ಭಾರತಕ್ಕೆ ಸೇರಿದ್ದಾಗಿದೆ.


ಇದನ್ನೂ ಓದಿ: Women's Rights: ಹಕ್ಕುಗಳಿಗಾಗಿ ಮಿತಿಮೀರಿದ ಮಹಿಳೆಯರ ಹೋರಾಟ- ಹೆಚ್ಚಾಗ್ತಿದೆ ಪುರುಷ ತಾರತಮ್ಯ


ವಿಶ್ವದ ಕಲುಷಿತ ನಗರಗಳಲ್ಲಿ ಭಾರತದ ನಗರಗಳು


2022 ರಲ್ಲಿ ಭಾರತವು ವಿಶ್ವದ ಎಂಟನೇ ಅತ್ಯಂತ ಕಲುಷಿತ ದೇಶವಾಗಿದೆ ಮತ್ತು ವರ್ಷದ ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ 39 ಭಾರತದಲ್ಲಿವೆ ಎಂದು ಸ್ವಿಸ್ ಏರ್ ಪ್ಯೂರಿಫೈಯರ್ ತಯಾರಕರ ವಾರ್ಷಿಕ ಜಾಗತಿಕ ಸಮೀಕ್ಷೆ ತಿಳಿಸಿದೆ.


ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್ ಮೊದಲನೇ ಸ್ಥಾನದಲ್ಲಿದೆಯಂತೆ..


ಈ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ್ ವಿಶ್ವದ ಅತ್ಯಂತ ಕಲುಷಿತ ನಗರವಾಗಿದ್ದರೆ, ಭಾರತದ ರಾಜಸ್ಥಾನದ ಭಿವಾಡಿ ಮತ್ತು ದೆಹಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ ಅಂತ ಹೇಳಲಾಗುತ್ತಿದೆ. ಚೀನಾದ ಹೋಟಾನ್ ನಗರವನ್ನು ಎರಡನೇ ಅತ್ಯಂತ ಕಲುಷಿತ ನಗರವೆಂದು ಪಟ್ಟಿಯಲ್ಲಿ ಹೆಸರಿಸಲಾಗಿದೆ.


ಸ್ವಿಸ್ ಏಜೆನ್ಸಿ ಐಕ್ಯೂಏರ್, ಪಿಎಂ 2.5 ಎಂದು ಕರೆಯಲ್ಪಡುವ ಶ್ವಾಸಕೋಶಕ್ಕೆ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ಗಾಳಿಯ ಗುಣಮಟ್ಟವನ್ನು ಅಳೆಯುತ್ತದೆ. ಇದರ ವಾರ್ಷಿಕ ಸಮೀಕ್ಷೆಯನ್ನು ಸಂಶೋಧಕರು ಮತ್ತು ಸರ್ಕಾರಿ ಸಂಸ್ಥೆಗಳು ವ್ಯಾಪಕವಾಗಿ ಉಲ್ಲೇಖಿಸಿವೆ. ಭಿವಾಡಿಯಲ್ಲಿ ಮಾಲಿನ್ಯದ ಮಟ್ಟವು 92.7 ರಷ್ಟಿದ್ದರೆ, ದೆಹಲಿಯಲ್ಲಿ 92.6 ರಷ್ಟಿದೆ ಅಂತ ಇದರಲ್ಲಿ ಉಲ್ಲೇಖಿಸಲಾಗಿದೆ.


ದರ್ಭಾಂಗ, ಅಸೋಪುರ್, ಪಾಟ್ನಾ, ಗಾಜಿಯಾಬಾದ್, ಧರುಹೆರಾ, ಚಾಪ್ರಾ, ಮುಜಾಫರ್ ನಗರ, ಗ್ರೇಟರ್ ನೋಯ್ಡಾ, ಬಹದ್ದೂರ್‌ಘಡ್ ಮತ್ತು ಫರಿದಾಬಾದ್ ವಿಶ್ವದ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಉಲ್ಲೇಖಿಸಲಾದ ಇತರ ಭಾರತೀಯ ನಗರಗಳಲ್ಲಿ ಸೇರಿವೆ.


ಭಾರತ ಮತ್ತು ಪಾಕಿಸ್ತಾನದಲ್ಲಿ ಗಾಳಿಯ ಗುಣಮಟ್ಟ ಹಾಳಾಗಿದೆಯಂತೆ..


ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಅತ್ಯಂತ ಕೆಟ್ಟ ಗಾಳಿಯ ಗುಣಮಟ್ಟವನ್ನು ಅನುಭವಿಸಿವೆ, ಅಲ್ಲಿ ಸುಮಾರು 60 ಪ್ರತಿಶತದಷ್ಟು ಜನಸಂಖ್ಯೆಯು ಪಿಎಂ 2.5 ಕಣಗಳ ಸಾಂದ್ರತೆಯು ಡಬ್ಲ್ಯುಎಚ್ಒ ಶಿಫಾರಸು ಮಾಡಿದ ಮಟ್ಟಕ್ಕಿಂತ ಕನಿಷ್ಠ ಏಳು ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಜಾಗತಿಕವಾಗಿ 10 ಜನರಲ್ಲಿ ಒಬ್ಬರು ವಾಯುಮಾಲಿನ್ಯವು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಅದು ಹೇಳಿದೆ.


ಇದನ್ನೂ ಓದಿ: Weird News: ಪದೇ ಪದೇ ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ ಯುವಕ! ಎಕ್ಸ್​ರೇ ವರದಿ ನೋಡಿ ಬೆಚ್ಚಿಬಿದ್ದ ವೈದ್ಯರು! ಆತನ ಹೊಟ್ಟೆಯಲ್ಲಿ ಅಂತದ್ದೇನಿತ್ತು?


131 ದೇಶಗಳಲ್ಲಿರುವ 7,300ಕ್ಕೂ ಹೆಚ್ಚು ಸ್ಥಳಗಳಲ್ಲಿನ 30,000 ಕ್ಕೂ ಹೆಚ್ಚು ವಾಯು ಗುಣಮಟ್ಟ ಮಾನಿಟರ್ ಗಳ ಡೇಟಾವನ್ನು ಬಳಸಿಕೊಂಡು ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.

Published by:Latha CG
First published: