ಲಂಡನ್ ಟ್ರಕ್ ಕಂಟೈನರ್​ನಲ್ಲಿ 39 ಮೃತದೇಹಗಳು ಪತ್ತೆ; ಕೊಲೆಯಾದವರೆಲ್ಲಾ ಚೀನಾ ದೇಶದವರು

2000 ಇಸವಿಯಲ್ಲಿ ಬ್ರಿಟನ್​ನಲ್ಲಿ ಅತಿ ದೊಡ್ಡ ಅಕ್ರಮ ವಲಸಿಗರ ದುರಂತ ನಡೆದಿತ್ತು. ಆ ವೇಳೆ 58 ಮಂದಿ ಚೀನಿಯರ ಮೃತದೇಹಗಳನ್ನು ಟೊಮಾಟೋ ಟ್ರಕ್​ನಲ್ಲಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:October 24, 2019, 4:54 PM IST
ಲಂಡನ್ ಟ್ರಕ್ ಕಂಟೈನರ್​ನಲ್ಲಿ 39 ಮೃತದೇಹಗಳು ಪತ್ತೆ; ಕೊಲೆಯಾದವರೆಲ್ಲಾ ಚೀನಾ ದೇಶದವರು
ಲಂಡನ್​ನಲ್ಲಿ ಮೃತದೇಹಗಳನ್ನು ಸಾಗಿಸುತ್ತಿದ್ದ ಟ್ರಕ್
  • Share this:
ಲಂಡನ್: ಲಂಡನ್​ನಲ್ಲಿ ಟ್ರಕ್​ ಕಂಟೈನರ್​ನಲ್ಲಿ 39 ಮೃತದೇಹಗಳು ಬುಧವಾರ ಪತ್ತೆಯಾಗಿದ್ದವು. ಮೃತಪಟ್ಟವರೆಲ್ಲಾ ಚೀನಾ ದೇಶದವರು ಎಂದು ಗುರುವಾರ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸೆಂಟ್ರಲ್ ಲಂಡನ್​ನಿಂದ 20 ಮೈಲಿ ದೂರದಲ್ಲಿರುವ ಗ್ರೇಯ್ಸ್​ನಲ್ಲಿನ ವಾಟರ್​ಗ್ಲಾಡ್​ ಇಂಡಸ್ಟ್ರಿಯಲ್ ಪಾರ್ಕ್ ಬಳಿ ಬುಧವಾರ ಬೆಳಗ್ಗೆ ಟ್ರಕ್ಅನ್ನು ಪೊಲೀಸರು ವಶಕ್ಕೆ ಪಡೆದ ವೇಳೆ ಟ್ರಕ್​ನ ಕಂಟೈನರ್​ನಲ್ಲಿ 38 ವಯಸ್ಕರು​ ಮತ್ತು ಓರ್ವ ಅಪ್ರಾಪ್ತ ಸೇರಿ 39 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು.

ವಾಲೆಸ್​ನಲ್ಲಿ ಹೋಲಿಹೆಡ್​ ಮೂಲಕ ಈ ಟ್ರಕ್​ ಶನಿವಾರ ಲಂಡನ್​ ಪ್ರವೇಶಿಸಿದೆ. ಮತ್ತು ಬಲ್ಗೇರಿಯಾದಿಂದ ಈ ಟ್ರಕ್​ ಪ್ರಯಾಣ ಆರಂಭಿಸಿದೆ. ಉತ್ತರ ಐರ್ಲೆಂಡ್​ನ 25 ವರ್ಷದ ಟ್ರಕ್​ ಚಾಲಕನನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ನಿಜಕ್ಕೂ ಘೋರ ದುರಂತ. ಸುದ್ದಿ ಕೇಳಿ ನನಗೆ ದಿಗ್ಬ್ರಮೆಯಾಗಿದೆ ಎಂದು ಬ್ರಿಟಿಷ್ ಗೃಹ ಕಾರ್ಯದರ್ಶಿ (ಆಂತರಿಕ ಸಚಿವ) ಪ್ರೀತಿ ಪಟೇಲ್​ ವಿಷಾದ ವ್ಯಕ್ತಪಡಿಸಿದ್ದಾರೆ. 2000 ಇಸವಿಯಲ್ಲಿ ಬ್ರಿಟನ್​ನಲ್ಲಿ ಅತಿ ದೊಡ್ಡ ಅಕ್ರಮ ವಲಸಿಗರ ದುರಂತ ನಡೆದಿತ್ತು. ಆ ವೇಳೆ 58 ಮಂದಿ ಚೀನಿಯರ ಮೃತದೇಹಗಳನ್ನು ಟೊಮಾಟೋ ಟ್ರಕ್​ನಲ್ಲಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:ಪೊಲೀಸರು ಟ್ರಕ್ ತಡೆದು ಪರಿಶೀಲನೆ ನಡೆಸಿದಾಗ ಕಂಟೈನರ್​ನಲ್ಲಿ ಪತ್ತೆಯಾದವು 39 ಮೃತದೇಹಗಳು

First published:October 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ