ಮಹಾರಾಷ್ಟ್ರದ ಮಹಾತಾಯಿ; 20ನೇ ಬಾರಿ ಗರ್ಭಿಣಿಯಾದ 38 ವರ್ಷದ ಮಹಿಳೆ!

ಇದುವರೆಗೂ 3 ಬಾರಿ ಲಂಕಾಬಾಯಿ ಅವರಿಗೆ ಗರ್ಭಪಾತವಾಗಿದೆ. ಹೀಗಾಗಿ, 16 ಮಕ್ಕಳನ್ನು ಹೊಂದಿರುವ ಅವರ ನಾಲ್ಕೈದು ಮಕ್ಕಳು ಈಗಾಗಲೇ ಸಾವನ್ನಪ್ಪಿವೆ. ಸದ್ಯಕ್ಕೆ 11 ಮಕ್ಕಳು ಜೀವಂತವಾಗಿದ್ದು, ಇದೀಗ ಅವರು 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Sushma Chakre | news18-kannada
Updated:September 10, 2019, 7:28 PM IST
ಮಹಾರಾಷ್ಟ್ರದ ಮಹಾತಾಯಿ; 20ನೇ ಬಾರಿ ಗರ್ಭಿಣಿಯಾದ 38 ವರ್ಷದ ಮಹಿಳೆ!
ಸಾಂದರ್ಭಿಕ ಚಿತ್ರ
  • Share this:
ಮುಂಬೈ (ಸೆ. 10): ಕೆಲವರು ದಾಖಲೆ ನಿರ್ಮಿಸಲೆಂದೇ ಏನಾದರೂ ವಿಭಿನ್ನವಾದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇನ್ನು ಕೆಲವರು ಮಾಡಿದ ಕೆಲಸವೆಲ್ಲವೂ ದಾಖಲೆ ನಿರ್ಮಿಸುತ್ತದೆ. ಇತ್ತೀಚೆಗಷ್ಟೇ 90 ವರ್ಷ ದಾಟಿದ ಅಜ್ಜಿಯೊಬ್ಬರು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ಕೇಳಿರುತ್ತೀರಿ. ಇದೀಗ ಮಹಾರಾಷ್ಟ್ರದಲ್ಲಿ 38 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಲು ಸಿದ್ಧರಾಗಿದ್ದಾರೆ. ಅದರಲ್ಲೇನು ವಿಶೇಷ? 38 ವರ್ಷದಲ್ಲಿ ಮಗುವಾಗಬಾರದ ವಯಸ್ಸೇನಲ್ಲವಲ್ಲ ಎಂದು ನೀವು ಆಶ್ಚರ್ಯಪಡಬಹುದು. ಆದರೆ, ಈ ಮಹಿಳೆ ತಾಯಿಯಾಗುತ್ತಿರುವುದು 20ನೇ ಬಾರಿ ಎಂಬುದೇ ವಿಶೇಷ!

ಮಹಾರಾಷ್ಟ್ರದ ಬೀಡ್ ಎಂಬ ಜಿಲ್ಲೆಯ ಲಂಕಾಬಾಯಿ ಖಾರತ್ ಎಂಬ ಮಹಿಳೆ ಈಗಾಗಲೇ 19 ಬಾರಿ ಗರ್ಭಿಣಿಯಾಗಿದ್ದಾರೆ. 38 ವರ್ಷದ ಇವರು ಇದೀಗ 20ನೇ ಬಾರಿ ಮಗುವನ್ನು ಹೆರಲು ಸಿದ್ಧರಾಗಿದ್ದಾರೆ. ಇದುವರೆಗೂ 3 ಬಾರಿ ಅವರಿಗೆ ಗರ್ಭಪಾತವಾಗಿದೆ. ಹೀಗಾಗಿ, 16 ಮಕ್ಕಳನ್ನು ಹೊಂದಿರುವ ಅವರ ನಾಲ್ಕೈದು ಮಕ್ಕಳು ಈಗಾಗಲೇ ಸಾವನ್ನಪ್ಪಿವೆ. ಸದ್ಯಕ್ಕೆ 11 ಮಕ್ಕಳು ಜೀವಂತವಾಗಿದ್ದು, ಇದೀಗ ಅವರು 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Viral Video: ಟ್ರಾಫಿಕ್ ಪೊಲೀಸರ ಕಾಟದಿಂದ ಬಚಾವಾಗಲು ಬೈಕ್ ಸವಾರರ ಹೊಸ ಐಡಿಯಾ!

20 ಬಾರಿ ಗರ್ಭ ಧರಿಸಿರುವ ಲಂಕಾಬಾಯಿ ಇದೇ ಮೊದಲ ಬಾರಿಗೆ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ ಬೇರೆಲ್ಲ ಹೆರಿಗೆಗಳನ್ನೂ ಮನೆಯಲ್ಲೇ ಮಾಡಿಸಲಾಗಿತ್ತು ಎಂಬುದು ಇನ್ನೊಂದು ವಿಶೇಷ. ಈ ಬಗ್ಗೆ ಆಸ್ಪತ್ರೆ ವೈದ್ಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ಆಕೆ ಈಗಾಗಲೇ 20 ಬಾರಿ ಗರ್ಭಣಿಯಾಗಿದ್ದಾರೆ ಎಂಬ ವಿಷಯ ಕೇಳಿ ನಮಗೂ ಆಶ್ಚರ್ಯವಾಯಿತು. ಇನ್ನೆರಡು ತಿಂಗಳಲ್ಲಿ ಆಕೆಗೆ ಡೆಲಿವರಿ ಆಗಲಿದೆ ಎಂದಿದ್ದಾರೆ.

First published: September 10, 2019, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading