ಪಂಜಾಬ್​​ನಲ್ಲಿ ನಕಲಿ ಮದ್ಯ ಸೇವಿಸಿ 32 ಜನರ ಸಾವು; ತನಿಖೆಗೆ ಆದೇಶಿಸಿದ ಸಿಎಂ ಅಮರೀಂದರ್ ಸಿಂಗ್

ಘಟನೆ ಗಂಭೀತರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಶಾಮೀಲಾದ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ಆರಂಭವಾಗಿದೆ.

news18-kannada
Updated:August 1, 2020, 7:49 AM IST
ಪಂಜಾಬ್​​ನಲ್ಲಿ ನಕಲಿ ಮದ್ಯ ಸೇವಿಸಿ 32 ಜನರ ಸಾವು; ತನಿಖೆಗೆ ಆದೇಶಿಸಿದ ಸಿಎಂ ಅಮರೀಂದರ್ ಸಿಂಗ್
ಅಮರೀಂದರ್​ ಸಿಂಗ್​
  • Share this:
ಅಮೃತಸರ (ಆ.1): ಪಂಜಾಬ್​ನಲ್ಲಿ ನಕಲಿ ಮದ್ಯ ಸೇರವಿಸಿ ಬರೋಬ್ಬರಿ 38 ಮಂದಿ ಅಸುನೀಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ನೀಡಿದ್ದಾರೆ.

ಕಳೆದ ಬುಧವಾರ ರಾತ್ರಿಯಿಂದ ಪಂಜಾಬ್​ನ ಕೆಲ ಜಿಲ್ಲೆಗಳಲ್ಲಿ ಸಾವು ಸಂಭವಿಸಲು ಆರಂಭವಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ನಕಲಿ ಮದ್ಯ ಸೇವನೆಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ತರ್ಣ್​ ತರಣ್​​ ಜಿಲ್ಲೆಯಲ್ಲಿ 13, ಅಮೃತಸರದಲ್ಲಿ 11 ಹಾಗೂ ಬಟಾಲಾದಲ್ಲಿ 8 ಜನರು ಮೃತಪಟ್ಟಿದ್ದಾರೆ.

ಘಟನೆ ಗಂಭೀತರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಶಾಮೀಲಾದ ಮೂವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ಆರಂಭವಾಗಿದೆ.

ಇದನ್ನೂ ಓದಿ: ಅಕ್ರಮ ಸಂಬಂಧದ ಆರೋಪ; ಗಂಡನನ್ನು ಹೆಗಲ ಮೇಲೆ ಹೊತ್ತು ಸಾಗಿದ ಹೆಂಡತಿ; 7 ಜನ ಬಂಧನ


ಜಲೈ 29ರ ರಾತ್ರಿ ಅಮೃತ್​ಸರ ಜಿಲ್ಲೆಯ ಮುಚ್ಚಾಲ್​ ಹಾಗೂ ತಂಗ್ರಾ ಗ್ರಾಮಗಳಲ್ಲಿ ಮೊದಲ ಬಾರಿಗೆ ಸಾವಿನ ಪ್ರಕರಣ ಕಾಣಿಸಿ ಕೊಂಡಿತ್ತು. ನಂತರ ಸಾಲು ಸಾಲು ಜನರು ಮೃತಪಡುತ್ತಾ ಬಂದಿದ್ದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ ತಿಜೋರಿ ತುಂಬಿಕೊಳ್ಳಲು ನಾಗರಿಕರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸುವ ಚಿಂತನೆ

ಸದ್ಯ, ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದಲ್ಲಿ ಶಾಮೀಲಾದ ಇಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನೂ ಅನೇಕರನ್ನು ಬಂಧಿಸುವ ಸಾಧ್ಯತೆ ಇದೆ.
Published by: Rajesh Duggumane
First published: August 1, 2020, 7:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading