BREAKING NEWS: ಅಹಮದಾಬಾದ್ Blasts Caseನಲ್ಲಿ 38 ಅಪರಾಧಿಗಳಿಗೆ ಮರಣದಂಡನೆ! ಕೋರ್ಟ್ ಆದೇಶದಲ್ಲಿ ಏನಿದೆ?

2008ರ ಜುಲೈ 26 ರಂದು ಅಹಮದಾಬಾದ್‌ನಲ್ಲಿ ಏಕಕಾಲದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ 56 ಜನರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೀಗ ಅಂತಿಮ ತೀರ್ಪು ಹೊರಬಿದ್ದಿದ್ದು, ಮೃತರು, ಸಂತ್ರಸ್ತರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುಜರಾತ್: 2008ರಲ್ಲಿಅಹಮದಾಬಾದ್‌ನಲ್ಲಿ (Ahmedabad) ನಡೆದಿದ್ದ ಸರಣಿ ಬಾಂಬ್‌ ಸ್ಫೋಟ (Serial Bomb Blast) ಪ್ರಕರಣಕ್ಕೆ (Case) ಸಂಬಂಧಪಟ್ಟಂತೆ ವಿಶೇಷ ನಿಯೋಜಿತ ನ್ಯಾಯಾಲಯ (Special Court) ಮಹತ್ವದ ತೀರ್ಪೊಂದನ್ನು (Judgment) ನೀಡಿದೆ.  49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ (Sentenced to Death) ವಿಧಿಸಿ ವಿಶೇಷ ನಿಯೋಜಿತ ನ್ಯಾಯಾಲಯ ಆದೇಶ ನೀಡಿದೆ. ಇನ್ನು 11 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ವಿಶೇಷ ನಿಯೋಜಿತ ನ್ಯಾಯಾಧೀಶ ಅಂಬಾಲಾಲ್‌ ಆರ್‌.ಪಟೇಲ್‌ ಅವರು ಫೆಬ್ರವರಿ 8ರಂದು 49 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ 28 ಮಂದಿಯನ್ನು ಖುಲಾಸೆಗೊಳಿಸಿದ್ದರು. ಇದೀಗ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಲಯ ಆದೇಶಿಸಿದೆ.

ಅಪರಾಧಿಗಳಿಗೆ ತಲಾ 2.85 ಲಕ್ಷ ರೂಪಾಯಿ ದಂಡ

48 ಅಪರಾಧಿಗಳಿಗೆ ತಲಾ 2.85 ಲಕ್ಷ ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಶಸ್ತ್ರಾಸ್ತ್ರ ಕಾಯಿದೆಯಡಿಯಲ್ಲಿ ಅಪರಾಧಿ ಮತ್ತು ಮರಣದಂಡನೆ ಶಿಕ್ಷೆಗೆ ಒಳಗಾದವರಲ್ಲಿ ಒಬ್ಬನಾದ ಉಸ್ಮಾನ್ ಅಗರಬತ್ತಿವಾಲಾಗೆ ಹೆಚ್ಚುವರಿಯಾಗಿ ಶಸ್ತ್ರಾಸ್ತ್ರ ಕಾಯಿದೆಯಡಿ ಅಪರಾಧಕ್ಕಾಗಿ ಒಂದು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿದೆ.

11 ಮಂದಿಗೆ ಜೀವಾವಧಿ ಶಿಕ್ಷೆ

2008 ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ತ್ವರಿತ ವಿಚಾರಣೆಗಾಗಿ ನಿಯೋಜಿಸಲಾಗಿದ್ದ ವಿಶೇಷ ನ್ಯಾಯಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ನಿಬಂಧನೆಗಳ ಅಡಿಯಲ್ಲಿ 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸಿತು. ಉಳಿದ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಇದನ್ನೂ ಓದಿ: Marriage: ಉಂಡೂ ಹೋದ, ಕೊಂಡೂ ಹೋದ! 17 ಮದುವೆಯಾದವನಿಗೆ ಈಗ 'ಗಂಡಾಂ'ತರ!

ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಪೀಠ

ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಧೀಶ ಎಆರ್ ಪಟೇಲ್, ಸ್ಫೋಟದಲ್ಲಿ ಮೃತಪಟ್ಟವರ ಕುಟುಂಸ್ಥರಿಗೆ 1 ಲಕ್ಷ ರೂಪಾಯಿ, ಗಂಭೀರ ಗಾಯಗೊಂಡವರಿಗೆ 50,000 ರೂಪಾಯಿ ಮತ್ತು ಅಪ್ರಾಪ್ತರಿಗೆ 25,000 ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶಿಸಿದರು.

ಯಾವ ಯಾವ ಸೆಕ್ಷನ್‌ಗಳ ಅಡಿ ಶಿಕ್ಷೆ?

ಐಪಿಸಿ, ಯುಎಪಿಎ, ಸ್ಫೋಟಕ ವಸ್ತುಗಳ ಕಾಯಿದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಪ್ರತಿ ಸೆಕ್ಷನ್ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಹೆಚ್ಚುವರಿಯಾಗಿ, ನ್ಯಾಯಾಲಯವು 48 ಅಪರಾಧಿಗಳಿಗೆ ತಲಾ 2.85 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇನ್ನು ಅಪರಾಧಿ ಅಗರಬತ್ತಿವಾಲಾನಿಗೆ  ಶಸ್ತ್ರಾಸ್ತ್ರ ಕಾಯ್ದೆಯಡಿ ಹೆಚ್ಚುವರಿ ಶಿಕ್ಷೆಯೊಂದಿಗೆ 2.88 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಫೆಬ್ರವರಿ 8ರಂದು ತೀರ್ಪು ನೀಡಿದ್ದ ನ್ಯಾಯಾಲಯ

ಫೆಬ್ರವರಿ 8 ರಂದು, ವಿಶೇಷ ನ್ಯಾಯಾಧೀಶರು  ಈ ಕೇಸ್‌ಗೆ ಸಂಬಂಧಿಸಿದಂತೆ ವಿಶೇಷ ನಿಯೋಜಿತ ನ್ಯಾಯಾಧೀಶ ಅಂಬಾಲಾಲ್‌ ಆರ್‌.ಪಟೇಲ್‌ ತೀರ್ಪು ನೀಡಿದ್ದರು. ಒಟ್ಟು 78 ಆರೋಪಿಗಳಲ್ಲಿ 49 ಆರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ವಿವಿಧ ಅಪರಾಧಗಳ ಅಡಿಯಲ್ಲಿ ಅಪರಾಧಿಗಳೆಂದು ಘೋಷಿಸಿದ್ದರು.

ಇದರಲ್ಲಿ ಕೊಲೆ, ದೇಶದ್ರೋಹ ಮತ್ತು ರಾಜ್ಯದ ವಿರುದ್ಧ ಯುದ್ಧ ನಡೆಸುವುದು ಸೇರಿದಂತೆ ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆಯ ಅಪರಾಧಗಳ ಅಡಿಯಲ್ಲಿ ಶಿಕ್ಷೆ ಘೋಷಿಸಲಾಗಿತ್ತು.  ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 28 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು..

ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ), ದೇಶದ್ರೋಹ, (124-A), ಧಾರ್ಮಿಕ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (153-A) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ 49 ಮಂದಿಯನ್ನು ತಪ್ಪಿತಸ್ಥರೆಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Viral News: ಎಂಥಾ ಕಾಲ ಬಂತು ನೋಡಿ: ಕೇಕ್‌ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿ ಮಕ್ಕಳಿಗೆ ತಿನ್ನಲು ನೀಡಿದ ಶಿಕ್ಷಕಿ!

2008ರಂದು ನಡೆದಿದ್ದ ಘಟನೆಯಲ್ಲಿ 56 ಮಂದಿ ಸಾವು

2008ರ ಜುಲೈ 26 ರಂದು ಅಹಮದಾಬಾದ್‌ನಲ್ಲಿ ಏಕಕಾಲದಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ 56 ಜನರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಘಟನೆ ಸಂಬಂಧ ಪೊಲೀಸರು ಅಹಮದಾಬಾದ್‌ನಲ್ಲಿ 20 ಎಫ್‌ಐಆರ್‌ ದಾಖಲಿಸಿದ್ದರು.

ಸೂರತ್‌ನ ವಿವಿಧ ಸ್ಥಳಗಳಲ್ಲಿ ಬಾಂಬ್‌ ಪತ್ತೆಯಾಗಿದ್ದವು. ಈ ಸಂಬಂಧ 15  ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಇದೀಗ ಅಂತಿಮ ತೀರ್ಪು ಹೊರಬಿದ್ದಿದ್ದು, ಮೃತರು, ಸಂತ್ರಸ್ತರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
Published by:Annappa Achari
First published: