OMG... "45 ವರ್ಷದ ವರ ಬೇಕಂತೆ ಈ 23ರ ಚೆಲುವೆಗೆ"! ಹೀಗಂತ Post ಮಾಡಿದವನಿಗೆ ಈಗ 'ಮಾವನ ಮನೆ'ಯಲ್ಲಿ ಆತಿಥ್ಯ!
“23ರ ಸುಂದರ ಯುವತಿಗೆ 45 ವರ್ಷ ವಯಸ್ಸಾಗಿರುವ ವರ ಬೇಕಾಗಿದ್ದಾನೆ. ಆಸಕ್ತರು ಸಂಪರ್ಕಿಸಿ” ಅಂತ ಜಾಹೀರಾತು ಬಂದಿತ್ತು. ಅದನ್ನ ನೋಡಿ ಅದೆಷ್ಟೋ ಮಂದಿ ಆ ನಂಬರ್ಗೆ ಕರೆ ಮಾಡಿದ್ದರು. ಕೇಳುಗರ ಪ್ರಶ್ನೆಗೆ ಆ ನಂಬರ್ನಲ್ಲಿ ಕರೆ ಸ್ವೀಕರಿಸಿದ್ದ ಹುಡುಗಿಯೇ ಖುದ್ದು ಬೆಚ್ಚಿ ಬಿದ್ದಿದ್ದಳು.
ಪುಣೆ, ಮಹಾರಾಷ್ಟ್ರ: ಈಗಿನ ಜನರೇಶನ್ನ (Generation) ಯುವಕ (Girls) ಹಾಗೂ ಯುವತಿಯೆಲ್ಲ (Boys) ಮದುವೆ (Marriage) ಏಜ್ನ (Age) ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಗಂಡ (Husband) ಮತ್ತು ಹೆಂಡತಿ (Wife) ನಡುವೆ ವಯಸ್ಸಿನ ವ್ಯತ್ಯಾಸ (Age Difference) ಎಷ್ಟೇ ದೊಡ್ಡದಿದ್ದರೂ ಅದು ಮ್ಯಾಟರೇ (Matter) ಅಲ್ಲ ಅಂತಾರೆ ಇಂದಿನ ಜನರು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ಇಂಥದ್ದೊಂದು ಪೋಸ್ಟ್ (Post) ಬಂದಿತ್ತು. “23ರ ಸುಂದರ ಯುವತಿಗೆ 45 ವರ್ಷ ವಯಸ್ಸಾಗಿರುವ ವರ ಬೇಕಾಗಿದ್ದಾನೆ. ಆಸಕ್ತರು ಸಂಪರ್ಕಿಸಿ” ಅಂತ ಜಾಹೀರಾತು (Advertisement) ಬಂದಿತ್ತು. ಅದನ್ನ ನೋಡಿ ಅದೆಷ್ಟೋ ಮಂದಿ ಆ ನಂಬರ್ಗೆ (Number) ಕರೆ (Call) ಮಾಡಿದ್ದರು. ಕೇಳುಗರ ಪ್ರಶ್ನೆಗೆ ಆ ನಂಬರ್ನಲ್ಲಿ ಕರೆ ಸ್ವೀಕರಿಸಿದ್ದ ಹುಡುಗಿಯೇ ಖುದ್ದು ಬೆಚ್ಚಿ ಬಿದ್ದಿದ್ದಳು. ಅದ್ಯಾಕೆ ಅನ್ನೋದನ್ನು ತಿಳಿದುಕೊಳ್ಳಲು ಮುಂದೆ ಓದಿ…
“23ರ ವಧುವಿಗೆ 45ರ ವರ ಬೇಕಾಗಿದ್ದಾನೆ!”
ಹೌದು, ಹೀಗೊಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. “ಪುಣೆಯ ಘೋರ್ಪಾಡಿ ಪ್ರದೇಶದ ನಿವಾಸಿಯಾಗಿರುವ 23ರ ಸುಂದರ ಯುವತಿಗೆ 45 ವರ್ಷ ವಯಸ್ಸಾಗಿರುವ ವರ ಬೇಕಾಗಿದ್ದಾನೆ. ಆಸಕ್ತರು ಸಂಪರ್ಕಿಸಿ” ಎನ್ನುವ ಜಾಹೀರಾತು ಅದು. ಇದನ್ನು ನೋಡಿ ಅದೆಷ್ಟೋ ಜನ ಆ ನಂಬರ್ಗೆ ಕಾಲ್ ಮಾಡಿ ವಿಚಾರಿಸಿದ್ದರು. ಆಗ ಆ ಕಾಲ್ ಸ್ವೀಕರಿಸಿದ್ದ ಅದೇ 23ರ ವಯಸ್ಸಿನ ಹುಡುಗಿ ಅಘಾತಕ್ಕೆ ಒಳಗಾಗಿದ್ದಳು. ಯಾಕೆಂದ್ರೆ ಆ ಜಾಹೀರಾತನ್ನು ಆಕೆಯಾಗಲಿ, ಆಕೆಯ ಕುಟುಂಬಸ್ಥರಾಗಲೇ ಕೊಟ್ಟೇ ಇರಲಿಲ್ಲ.
“ವಿಚ್ಛೇದಿತ ಯುವತಿ, ಮರು ಮದುವೆಗೆ ಪ್ರಯತ್ನಿಸುತ್ತಿದ್ದಾಳೆ!”
ಅದೇ ಪೋಸ್ಟ್ನ ಮುಂದುವರೆದ ಭಾಗದಲ್ಲಿ ಹೀಗಂತ ಬರೆದಿತ್ತು. 23ರ ಆ ಯುವತಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ಡಿವೋರ್ಸ್ ಪಡೆದಿದ್ದಾಳೆ. ಹೀಗಾಗಿ ಆಕೆ ಮರು ಮದುವೆಗೆ ಪ್ರಯತ್ನಿಸುತ್ತಿದ್ದಾಳೆ. ಈ ಕಾರಣದಿಂದ 45 ವರ್ಷಕ್ಕಿಂತ ಮೇಲ್ಪಟ್ಟ ವರನನ್ನು ಮತ್ತೆ ಮದುವೆಯಾಗಲು ಹುಡುಕುತ್ತಿದ್ದಾಳೆ ಎಂದು ಬರೆದಿತ್ತು.
ಅಷ್ಟಕ್ಕೂ ಈ ರೀತಿಯ ಮದುವೆ ಜಾಹೀರಾತನ್ನು ಆ ಯುವತಿಯಾಗಲಿ ಅಥವಾ ಆಕೆಯ ಕುಟುಂಬಸ್ಥರಾಗಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರಲಿಲ್ಲ. ಬದಲಾಗಿ ಅದನ್ನು ಪೋಸ್ಟ್ ಮಾಡಿದ್ದು 37 ವರ್ಷದ ಪುಣೆಯ ವ್ಯಕ್ತಿ. ಆತ ಆಕೆಯ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ, ಫೇಕ್ ಮದುವೆ ಜಾಹೀರಾತನ್ನು ಪೋಸ್ಟ್ ಮಾಡಿದ್ದ.
ಮದುವೆ ನಿರಾಕರಿಸಿದ್ದಕ್ಕೆ ನಕಲಿ ಪೋಸ್ಟ್
ಅಸಲಿಗೆ ಆ 37 ವರ್ಷದ ಆರೋಪಿ ಹಾಗೂ ಯುವತಿ ಒಂದೇ ಗ್ರಾಮದ, ಒಂದೇ ಸಮುದಾಯದವರಾಗಿದ್ದರು. ಆತನಿಗೆ ಈಗಾಗಲೇ ಮದುವೆ ಆಗಿತ್ತು. ಆದರೂ ಆತ ಆಕೆಯ ಮೇಲೆ ಕಣ್ಣು ಹಾಕಿದ್ದ. ಇದನ್ನು ಆಕೆ ನಿರಾಕರಿಸಿದ್ದಳು. ಹೀಗಾಗಿ, ಆಕೆಗೆ ಅವಮಾನ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಅದರಲ್ಲಿ ಆಕೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ.
ಇದು ಆತನದ್ದೇ ಕೆಲಸ ಅಂತ ಯುವತಿಗೆ ಗೊತ್ತಾಗಿದೆ. ಆತನಿಗೆ ಕಾಲ್ ಮಾಡಿ, ಆಕೆ ಹಾಗೂ ಕುಟುಂಬಸ್ಥರು ವಾರ್ನ್ ಮಾಡಿದ್ದಾರೆ. ಪೋಸ್ಟ್ ಡಿಲೀಟ್ ಮಾಡಿ, ನಕಲಿ ಖಾತೆ ಡಿಲೀಟ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಆತ ಅವರ ಮಾತನ್ನು ಕೇಳಲೇ ಇಲ್ಲ. ಹೀಗಾಗಿ ಆಕೆ ಪೊಲೀಸರಿಗೆ ಈತನ ವಿರುದ್ಧ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು, ಇದೀಗ ಆತನನ್ನು ಅರೆಸ್ಟ್ ಮಾಡಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ