ಮುಂಬೈ: ಯಾರಿಗೆ ಅದೃಷ್ಟದ ಬಾಗಿಲು ಎಲ್ಲಿ, ಯಾವಾಗ ತೆರೆಯುತ್ತೆ ಅಂತ ಹೇಳೋದು ಕಷ್ಟ. ನಾವು ನಿರೀಕ್ಷಿಸದ್ದೇ ಇದ್ದ ಸಮಯದಲ್ಲಿ ಜೀವನವೇ ನಮಗೆ ಸರ್ಪ್ರೈಸ್ ನೀಡುತ್ತೆ. ಇಲ್ಲೊಬ್ಬರಿಗೆ ಜೀವನ ಹೀಗೆ ಚಾಕ್ಪಾಟ್ನಂತೆ ಬಯಸದೇ ಭಾಗ್ಯವನ್ನು ನೀಡಿದೆ. ದೇಶದಲ್ಲಿ ಕೊರೋನಾ 2ನೇ ಅಲೆ ಶುರುವಾದ ಮೇಲೆ ವಿಶ್ವದ ಬಹುತೇಕ ರಾಷ್ಟ್ರಗಳು ನಮ್ಮ ವಿಮಾನಗಳ ಮೇಲೆ ನಿರ್ಬಂಧವೇರಿದೆ. ಆದರೆ ದುಬೈ ಮಾತ್ರ ನಮ್ಮ ದೇಶದ ಜೊತೆಗೆ ಇನ್ನೂ ವಿಮಾನ ಸಂಪರ್ಕ ಉಳಿಸಿಕೊಂಡಿದೆ. ಹೀಗಿರುವಾಗ ದುಬೈಗೆ ಭಾರತದಿಂದ ಹೋಗುವ ಪ್ರಯಾಣಿಕರಿಗೆ ಯಾವುದೇ ಅಡ್ಡಿಯಿಲ್ಲ. ಹೀಗಾಗಿ ದುಬೈ ವಿಮಾನ ಕಿಕ್ಕಿರಿದು ತುಂಬಿರುತ್ತದೆ ಎಂದೇ ಮುಂಬೈನ ಭವೇಶ್ ಜವೇರಿ(40) ಎಂಬುವರು ಅಂದಾಜಿಸಿದ್ದರು. ಆದರೆ ಲೈಫ್ ಅವರಿಗೆ ದೊಡ್ಡ ಸರ್ಪ್ರೈಸ್ ಕೊಡಲಿತ್ತು.
ದುಬೈನಲ್ಲಿ ನೆಲೆಸಿರುವ ಭವೇಶ್ ಅವರು ಮುಂಬೈನಲ್ಲಿದ್ದ ತಾಯಿಯ ಮನೆಗೆ ಬಂದಿದ್ದರು. ಕೊರೋನಾ ಲಾಕ್ಡೌನ್ ಸಮಯದಲ್ಲೂ ದುಬೈಗೆ ಹಾರಲು ಮುಂದಾಗಿದ್ದರು. ಇದಕ್ಕಾಗಿ ದುಬೈ ಎಮಿರೈಟ್ಸ್ನಲ್ಲಿ 18,000 ಸಾವಿರ ರೂಪಾಯಿಗೆ ಟೆಕೆಟ್ ಬುಕ್ ಮಾಡಿದ್ದರು. ವಿಮಾನ ಬುಕ್ ಮಾಡಿದ್ದ ದಿನ ಏರ್ಪೋರ್ಟ್ಗೆ ಬಂದ ಭವೇಶ್ಗೆ ಸಿಬ್ಬಂದಿ ಎಂಟ್ರಿ ನಿರಾಕರಿಸಿದ್ದರು. ಕೂಡಲೇ ವಿಮಾನ ಸಂಸ್ಥೆಗೆ ಕರೆ ಮಾಡಿದ್ದಾರೆ. ಸಿಬ್ಬಂದಿ ಅವರ ಬಳಿಗೆ ಬಂದು ಅವರನ್ನು ಏರ್ಪೋರ್ಟ್ ಒಳಕ್ಕೆ ಕರೆದೊಯ್ದಿದ್ದಾರೆ. ಎಲ್ಲಾ ಪರೀಶಿಲನೆಗಳ ಬಳಿಕ ವಿಮಾನದತ್ತ ಹೆಜ್ಜೆ ಹಾಕುತ್ತಿದ್ದ ಭವೇಶ್ಗೆ ಅಚ್ಚರಿ ಎದುರಾಯ್ತು.
ಇದನ್ನೂ ಓದಿ: Vedio Viral: ಮದುವೆಯಾಗುತ್ತಿರುವ ಖುಷಿ ತಾಳಲಾರದೆ ಮಂಟಪದಲ್ಲೇ ವರನಿಗೆ ಮುತ್ತು ಕೊಟ್ಟ ವಧು!
ಭವೇಶ್ ಏಕಾಂಗಿಯಾಗಿ ವಿಮಾನದತ್ತ ಹೆಜ್ಜೆ ಹಾಕುತ್ತಿದ್ದರು. ವಿಚಾರಿಸಿದಾಗ ತಾವೊಬ್ಬರೇ ಇಡೀ ವಿಮಾನದಲ್ಲಿ ದುಬೈಗೆ ಹಾರುತ್ತಿರುವ ಸಂಗತಿ ಗೊತ್ತಾಗಿ ಭವೇಶ್ ಶಾಕ್ಗೆ ಒಳಗಾಗಿದ್ದಾರೆ. ನಂತರ ನಡೆದದ್ದೆಲ್ಲಾ ರಾಜ ಆತಿಥ್ಯ. 360 ಸೀಟ್ಗಳಿರುವ ಅಂತಾರಾಷ್ಟ್ರೀಯ ವಿಮಾನದಲ್ಲಿ ಒಬ್ಬನೇ ಪ್ರಯಾಣಿಕ. ಗಗನಸಖಿ ಭವೇಶ್ ಅವರನ್ನು ಸ್ವಾಗತಿಸಿ ಎಲ್ಲವನ್ನೂ ಅವರೊಬ್ಬರಿಗೆ ವಿವರಿಸಿದ್ದಾರೆ.
ಏಕಾಂಗಿಯಾಗಿ ಪ್ರಯಾಣಿಸಿದ್ದರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಭವೇಶ್. ಇಡೀ ವಿಮಾನ ನನ್ನನ್ನು ರಾಜನಂತೆ ನೋಡಿಕೊಳ್ತು. ಭವೇಶ್ ಅವರಿಗೆ ಸ್ವಾಗತ ಎಂದು ಅನೌನ್ಸ್ ಮಾಡಿದರು. ನನ್ನೊಬ್ಬನಿಗಾಗಿಯೇ ಸುರಕ್ಷತಾ ಕ್ರಮಗಳನ್ನು ವಿವರಿಸಿದರು. ಕಾಕ್ಪಿಟ್ನಲ್ಲಿದ್ದ ಕ್ಯಾಪ್ಟನ್ ಕೂಡ ನನ್ನನ್ನು ಸ್ವಾಗತಿಸಿದರು. ಇನ್ನು ಕೆಲವೇ ಕ್ಷಣಗಳಲ್ಲಿ ನಾವು ಇಳಿಯಲಿದ್ದೇವೆ ಭವೇಶ್ ಅವರೇ ಎಂದು ನನ್ನೊಬ್ಬನಿಗೆ ಹೇಳಿದ್ದು ಕೇಳಿ ರೋಮಾಂಚನ ಆಯ್ತು. ಇಂಥ ಅನುಭವವನ್ನು ದೊಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎರಡನೇ ಅಲೆ ಕೊರೋನಾ ಸೋಂಕು ರಾಜ್ಯದಲ್ಲಿ ನಿಯಂತ್ರಣ ಮೀರಿದೆ. ಲಾಕ್ಡೌನ್ ನಡುವೆಯೋ ಸೋಂಕು ನಿಯಂತ್ರಣ ವಾಗುತ್ತಿಲ್ಲ. ಕಳೆದ ಒಂದು ವಾರದಿಂದ ದಿನವೊಂದಕ್ಕೆ ಸರಿ ಸುಮಾರು 25 ರಿಂದ 30 ಸಾವಿರ ಪ್ರಕರಣಗಳು ದಾಖಲಾಗುತ್ತಿದೆ. ಈ ನಡುವೆ ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 626 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ಕಳೆದ 24 ಗಂಟೆಗಳ ಅವಧಿ ಯಲ್ಲಿ ರಾಜ್ಯದಲ್ಲಿ 26,811 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 6,433 ಪ್ರಕರಣಗಳು ಪತ್ತೆ ಯಾಗಿದೆ. ಅಲ್ಲದೆ, ರಾಜ್ಯ ರಾಜಧಾನಿ ಒಂದರಲ್ಲೇ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 285.
ರಾಜ್ಯದಲ್ಲಿ ಈ ಮಟ್ಟಿಗೆ ಸೋಂಕು ಹರಡುತ್ತಿದ್ದು, ಹೀಗೆ ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಾಡಯಿಸಲಿದೆ. ಇದರ ನಡುವೆ ಬ್ಲಾಕ್ ಫಂಗಸ್-ವೈಟ್ ಫಂಗಸ್ ಈಗಾಗಲೇ ಬೆದರಿಕೆ ಒಡ್ಡಿದ್ದು, ಇದರ ಬೆನ್ನಿಗೆ ಕೊರೋನಾ ಮೂರನೇ ಅಲೆಯೂ ಕಾಡುವ ಭೀತಿ ಎದುರಾಗಿದೆ. ಈ ಹಿನ್ನಲೆ ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಮೇ. 10 ರಿಂದ ಮೇ 24ರವರೆಗೆ ಮೊದಲ ಹಂತದ ಲಾಕ್ಡೌನ್ ಜಾರಿ ಮಾಡಿದ್ದ ಸರ್ಕಾರ ಇದೀಗ ಈ ಲಾಕ್ಡೌನ್ ಅನ್ನು ಜೂನ್ 07ರ ವರೆಗೆ ಮುಂದುವರೆಸಿದೆ. ಈ ಬಾರಿ ಕೆಲವು ವಿನಾಯಿತಿಗಳ ಹೊರಾತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಇನ್ನಾದರೂ ಸೋಂಕು ನಿಯಂತ್ರಣಕ್ಕೆ ಬರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ